Sports

ಅಂತರ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿ ಫಲಿತಾಂಶ

By

September 20, 2022

ಮೂರನೇ ಅಂತರ ಜಿಲ್ಲಾ ಮಟ್ಟದ ಮುಕ್ತ ಚೆಸ್ ಪಂದ್ಯಾವಳಿಯಲ್ಲಿ ನಗರದ ಪಾಂಡಿತ್ಯ ಯೂರೋ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿನಿ ದಿಯಾ ಸಂಜಯ್ ಪ್ರಥಮ ಸ್ಥಾನ ಪಡೆದಿದ್ದಾಳೆ.

ನಾಲ್ಕನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಎ.ವಿ., ಎರಡನೇ ತರಗತಿಯ ವಿದ್ಯಾರ್ಥಿ ರಿಶಿಕ್ ಎಚ್. ಓಂಕಾರ್ ಮೂರನೇ ಸ್ಥಾನ ಪಡೆದಿದ್ದಾರೆ.

ಹಾಸನ: ನಗರದ ಕ್ರೈಸ್ಟ್ ಸ್ಕೂಲ್‌ನಲ್ಲಿ ಕದಂಬ ಚೆಸ್ ಅಕಾಡೆಮಿ, ಜಿಲ್ಲಾ ಚೆಸ್ ಅಸೋಸಿಯೇಶನ್ ಹಾಗೂ ಸೃಷ್ಟಿ ಗ್ರೂಪ್ಸ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ವತಿಯಿಂದ ಏರ್ಪಡಿಸಿದ್ದ ಚೆಸ್‌ನಲ್ಲಿ ವಿದ್ಯಾರ್ಥಿಗಳ ಸಾಧನೆ

ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಅಕಾಡೆಮಿಕ್ ಡೈರೆಕ್ಟರ್ ಹಾಗೂ ಹಾಸನ ನಗರದ ಚೆಸ್ ಅಸೋಸಿಯೇಶನ್ ಅಕಾಡೆಮಿ ಉಪಾಧ್ಯಕ್ಷೆ, ಯೂರೋ ಶಾಲೆ ಶಿಕ್ಷಕಿ ರಶ್ಮಿ ಕಿರಣ್ ಅಭಿನಂದಿಸಿದ್ದಾರೆ