Sports

ಚಿನ್ನದ ಪದಕದ ಜೊತೆಗೆ ಹದಿನೇಳು ವರ್ಷಗಳ ದಾಖಲೆ ಮುರಿದಿದ್ದಾರೆ

By Hassan News

December 19, 2022

ಮೈಸೂರು ವಿಶ್ವವಿದ್ಯಾನಿಲಯದ ವತಿಯಿಂದ ಮೈಸೂರಿನಲ್ಲಿ ನಡೆದ ಅಂತರ ಕಾಲೇಜು ಅಥ್ಲೆಟಿಕ್ ಸ್ಪರ್ಧೆಯಲ್ಲಿ ಹಾಸನ ಜಿಲ್ಲೆಯ ವಿದ್ಯಾರ್ಥಿ ದಾಖಲೆ ಬರೆದಿದ್ದಾನೆ. 400 ಮೀಟರ್ ಓಟದ ಸ್ಪರ್ಧೆಯಲ್ಲಿ 48.74 ಸೆಕೆಂಡ್‌ಗಳಲ್ಲಿ ಓಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಿನ್ನದ ಪದಕದ ಜೊತೆಗೆ ಹದಿನೇಳು ವರ್ಷಗಳ ದಾಖಲೆ ಮುರಿದಿದ್ದಾರೆ. 2005 ರಲ್ಲಿ

49.11 ಸೆಕೆಂಡ್‌ಗಳಲ್ಲಿ 400 ಮೀಟರ್ ಪೂರ್ಣಗೊಳಿಸಿದ್ದು ದಾಖಲೆಯಾಗಿತ್ತು. ಈ ದಾಖಲೆಯನ್ನು ಹದಿನೇಳು ವರ್ಷದ ನಂತರ ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ದ್ವಿತೀಯ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿ ಬಾಲಕೃಷ್ಣ 48.74 ಸೆಕೆಂಡ್‌ಗಳಲ್ಲಿ ಓಡಿ ಹಳೇ ದಾಖಲೆ ಮುರಿಯುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಬಾಲಕೃಷ್ಣನ ಸಾಧನೆಗೆ

ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.