Sports

ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿ ಪರ್ಪಸ್ ಫೆಡರೇಶನ್ ಹಾಸನ, ನೆಹರು ಯುವ ಕೇಂದ್ರ ಹಾಸನ ರವರು ನಾಲ್ಕನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ ವಿವರ

By Hassan News

January 23, 2023

ನ್ಯಾಷನಲ್ ಶೋಟೋಕಾನ್ ಕರಾಟೆ ಮಲ್ಟಿ ಪರ್ಪಸ್ ಫೆಡರೇಶನ್ (ರಿ) ಹಾಸನ ಮತ್ತು ನೆಹರು ಯುವ ಕೇಂದ್ರ ಹಾಸನ ರವರು ನಾಲ್ಕನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ನಗರದ ಮಲೆನಾಡು ತಾಂತ್ರಿಕ ಕಾಲೇಜಿನ ಆವರಣದಲ್ಲಿರುವ ಆಡಿಟೋರಿಯಂನಲ್ಲಿ ಹಾಸನದಲ್ಲಿ ದಿನಾಂಕ 7 ಮತ್ತು 8 ಜನವರಿ 2023 ರಲ್ಲಿ ಆಯೋಜನೆ ಮಾಡಿದ ಅಂಗವಾಗಿ ಕೇರಳ, ಮಹಾರಾಷ್ಟ್ರ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶ ಹಾಗು ಕರ್ನಾಟಕ ರಾಜ್ಯಗಳಿಂದ ಕರಾಟೆಪಟುಗಳು 500ಕ್ಕೂ ಹೆಚ್ಚು ಭಾಗವಹಿಸಿ ಸ್ಪರ್ಧೆಗೆ ಮೆರುಗು ತಂದಿದ್ದರು. ಕಾರ್ಯಕ್ರಮದಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ಪ್ರೀತಮ್ ಜೆ ಗೌಡ್ರು

ಹಾಸನ ವಿಧಾನಸಭಾ ಕ್ಷೇತ್ರ ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆಯ ಆಯುಧ ವಿದೆ ಎಂದರೆ ಅದು ಕರಾಟೆ ಎಂದರು ಕರಾಟೆಯನ್ನು ಕರಗತ ಮಾಡಿಕೊಂಡ ಮಕ್ಕಳು ತಮ್ಮನ್ನು ರಕ್ಷಣೆಯನ್ನು ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ ಎಂದರು ಇದೇ ವೇಳೆ ಮಾತನಾಡಿದ ಎಂಸಿಇ ಕಾಲೇಜಿನ ಕಾರ್ಯದರ್ಶಿಗಳಾದ ಆರ್ ಟಿ ದೇವೇಗೌಡರು ಕರಾಟೆ ಕ್ರೀಡೆ ಈಗೆ ಇರುವುದು ಎಂದು ನಾನು ಕೇಳಿದ್ದೆ ಆದರೆ

ಈ ದಿನ ನಾನು ನೋಡುತ್ತಿದ್ದೇನೆ ನನಗೆ ತುಂಬಾ ಸಂತೋಷವಾಗಿದೆ ಪುಟ್ಟ ಮಕ್ಕಳಿಂದ ದೊಡ್ಡ ಹುಡುಗರ ತನಕ ಕರಾಟೆ ಸ್ಪರ್ಧೆ ಭಾಗವಹಿಸಿದ್ದಾರೆ ಈ ಕ್ರೀಡೆಯು ಹೆಚ್ಚು ಹೆಚ್ಚು ಪ್ರಸಿದ್ಧವಾಗಲೆಂದು ನಾನು ಆಶಿಸುತ್ತೇನೆ ಹಾಗೆ ಆ ಯೋಜನೆಯನ್ನು ಸಂಸ್ಥೆಯ ಅಧ್ಯಕ್ಷರಾದ ಅನಂತ್ ಕುಮಾರ್.ಕೆ.ಜೆ ರವರು ಅಚ್ಚುಕಟ್ಟಾಗಿ ಮಾಡಿದ್ದಾರೆ ಈ ರೀತಿಯ ಸ್ಪರ್ಧೆ ಪ್ರತೀ ವರ್ಷ ಆಯೋಜನೆಯಾಗಬೇಕೆಂದು ಕೇಳುತ್ತೇನೆಂದರು. ನಂತರ ಸಮಾಜ ಸೇವಕರಾದ ಸಿದ್ದೇಶ್ ನಾಗೇಂದ್ರರವರು ಮಾತನಾಡಿ ಕರಾಟೆಯು ಮೂಲತಃ ಜಪಾನ್ ದೇಶದ ಕ್ರೀಡೆಯಾಗಿದ್ದು ಈ ಕ್ರೀಡೆ ನಮ್ಮ ದೇಶದಲ್ಲಿ ಹಾಗು ಕರ್ನಾಟಕದ ನಮ್ಮ ಹಾಸನ ಜಿಲ್ಲೆಯಲ್ಲಿ ರಾಷ್ಟ್ರಮಟ್ಟದ ಕ್ರೀಡೆ ಆಯೋಜಿಸಿರುವುದು ನಮ್ಮ ಹಾಸನ ಜಿಲ್ಲೆಯ ಹೆಮ್ಮೆ ಎಂದರು ಜೊತೆಗೆ ಸಣ್ಣ ವಯಸ್ಸಿನಲ್ಲಿ ಕರಾಟೆಯನ್ನು ಕರಗತ ಗೊಳಿಸಿಕೊಂಡರೆ ಮುಂದಿನ ದಿನಗಳಲ್ಲಿ

ಆರೋಗ್ಯಕರವಾದ ಸಮಾಜವನ್ನು ಕಟ್ಟಬಹುದು ಎಂದರು ಹಾಗೂ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಎನ್.ಎಸ್.ಕೆ.ಎಂ.ಎಫ್ ನ ಅಧ್ಯಕ್ಷರಾದ ಅನಂತ್ ಕುಮಾರ್.ಕೆ.ಜೆ ರವರು ಮಾತನಾಡಿ ಕರಾಟೆ ಕ್ರೀಡೆ ಎಂದರೆ ಕೇವಲ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು ಮಾತ್ರವಲ್ಲ ಬೇರೆಯವರ ರಕ್ಷಣೆಯನ್ನು ಕೂಡ ಮಾಡಬಹುದು ಹಾಗೆಯೇ ನಮ್ಮ ದೇಹವು ಆರೋಗ್ಯಕರವಾಗಿರುವುದಕ್ಕೆ ಸಹಕಾರಿಯಾಗಿದೆ ಮತ್ತು ದೇಹ ದಾರ್ಢ್ಯತೆಯನ್ನು ಕಾಪಾಡಿಕೊಳ್ಳುತ್ತದೆ, ತೀಕ್ಷ್ಣ ಬುದ್ಧಿಯನ್ನು ತಂದು ಕೊಡುವುದರಲ್ಲಿ ಕರಾಟೆ ಸಹಾಯವಾಗಿದೆ ಎಂದು ಈ ಕಾರ್ಯಕ್ರಮ/ಸ್ಪರ್ಧೆಗೆ ಭಾಗವಹಿಸಿದ ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು ಎಂದು ಮಾತನಾಡಿದರು ಹಾಗೂ

ನ್ಯಾಷನಲ್ ಶೋಟೋಕಾನ್ ಸಂಸ್ಥೆಯು ಇಲ್ಲಿವರೆಗೆ ಒಂದು ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜನೆ ಮಾಡಿದೆ ಮತ್ತು ನಾಲ್ಕು ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಿದೆ ಇದಲ್ಲದೆ ಹಲವಾರು ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುತ್ತದೆ ಎಂದರು