ಎರಡು ದಿನದ SSLC ಪರೀಕ್ಷೆ ದಿನಾಂಕ ಪ್ರಕಟ

0

ಎರಡು ದಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಇದೇ ಜುಲೈ 19 (ಕೋರ್ ಸಬ್ಜೆಕ್ಟ್) ಮತ್ತು ಜುಲೈ 22 (ಭಾಷಾ ವಿಷಯ) ರಂದು ನಡೆಯಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಎಲ್ಲವೂ ಬಹು ಆಯ್ಕೆಯ ಪ್ರಶ್ನೆಗಳು ಇರಲಿವೆ.
ಕನ್ನಡ, ಹಿಂದಿ, ಇಂಗ್ಲಿಷ್ ಸೇರಿ ಒಂದು ಪ್ರಶ್ನೆ ಪತ್ರಿಕೆ ಇರಲಿದೆ.

ಎರಡನೇಯದ್ದು ಗಣಿತ, ವಿಜ್ಞಾನ ಮತ್ತು ಸಮಾಜದ ಪ್ರಶ್ನೆ ಪತ್ರಿಕೆ ಇರಲಿದೆ ಎಂದು ಶಿಕ್ಷಣ ಸಚಿವರು ಮಾಹಿತಿ ನೀಡಿದರು. ಪರೀಕ್ಷೆ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರಗಳಿರಲಿವೆ. ಯಾವುದೇ ಆತಂಕ ಇಲ್ಲದೇ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷೆ ಸಮಯ 10.30ರಿಂದ 1.30 ಗಂಟೆವರೆಗೆ ಇರಲಿದೆ.

ಈ ಬಾರಿ ಒಟ್ಟು 8,76,581 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಕಳೆದ ವರ್ಷ 8 ಲಕ್ಷ 46 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಕೊರೊನಾ ಹಿನ್ನೆಲೆ ಪರೀಕ್ಷಾ ಕೊಠಡಿಗಳನ್ನು ಹೆಚ್ಚು ಮಾಡಲಾಗಿದೆ. ಈ ಬಾರಿ 73066 ಪರೀಕ್ಷಾ ಕೊಠಡಿಗಳು ಇರಲಿವೆ.

LEAVE A REPLY

Please enter your comment!
Please enter your name here