ಹಾಸನ : ದಿನಾಂಕ 7.8.2021ರಂದು ನಡೆದ ಮೈಸೂರು ವಿಶ್ವವಿದ್ಯಾಲಯದ 101ನೇ ಘಟಕೋತ್ಸವದ ಸಮಾರಂಭದಲ್ಲಿ ಮಿಂಚಿದ ಹಾಸನದ ಸಂತ ಫಿಲೋಮಿನಾ ಮಹಿಳಾ ಪ್ರಥಮದರ್ಜೆ ಕಾಲೇಜಿನ
ವಿದ್ಯಾರ್ಥಿನಿಯರು!!
ಬಿಬಿಎ ವಿಭಾಗದ ವಿದ್ಯಾರ್ಥಿನಿ ಕು. ಅಂಜನಾ ಎಂ ಕೆ. ಪ್ರಥಮ ರಾಂಕ್ ನೊಂದಿಗೆ ಎರಡು ಚಿನ್ನದ ಪದಕಗಳಿಗೆ ತಮ್ಮ ಕೊರಳನ್ನೊಡ್ಡಿದರೆ, ಕು. ಸೈದಾ ಸಾರಾ ತಸ್ನೀಮ್ ದ್ವಿತಿಯ ರಾಂಕನ್ನು ತಮ್ಮದನ್ನಾಗಿಸಿಕೊಂಡಿದ್ದಾರೆ
ಬಿ.ಕಾಂ ವಿಭಾಗದಲ್ಲಿ ಕು. ಶ್ವೇತಾ ಶೆಟ್ಟಿ ದ್ವಿತೀಯ ರಾಂಕ್ ನೊಂದಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ ಪಡೆದುಕೊಂಡಿದ್ದಾರೆ.
ಕುಮಾರಿಯರಾದ ಸೋನ ಹೆಚ್. ಪಿ., ದಿವ್ಯ ಸಿ.ಎನ್ , ಕೀರ್ತಿಬಾಯಿ ಎನ್. ಐ.ಯವರು ಚಿನ್ನದ ಪದಕಗಳನ್ನು ಗಳಿಸಿ ಕಾಲೇಜಿನ ಕೀರ್ತಿಕಿರೀಟಕ್ಕೆ ಚಿನ್ನದಗರಿ ಮೂಡಿ ಸಿದರೆ, ಕು. ಕಾವ್ಯ ಎಸ್.ಮೂರು ನಗದು ಬಹುಮಾನ ಗಳಿಸಿ, ಕಾಲೇಜಿನ ಸಂಭ್ರಮಕ್ಕೆ ಸಿರಿ ಸೇರಿಸಿದ್ದಾರೆ.
ಕಾಲೇಜಿನ ಕೀರ್ತಿಕಳಸಕ್ಕೆ ಕನ್ನಡಿಹಿಡಿಸಿದ ಈ ಸಾಧಕಿಯರಿಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ ಹಾಗೂ ಆಡಳಿತವರ್ಗ ತಮ್ಮ ಅಭಿಮಾನದ ಅಭಿನಂದನೆಗಳನ್ನು ಈ ಮೂಲಕ ಸಲ್ಲಿಸುತ್ತಿದ್ದಾರೆ.