ಮಳೆಗಾಲದ ನಡುವೆ ಅತಿಯಾಯ್ತು ಸೊಳ್ಳೆ ಹಾವಳಿ ; ಶಂಕಿತ ಡೆಂಗಿ ಜ್ವರಕ್ಕೆ ಗೃಹಿಣಿ ಸಾವು

0

ಹಾಸನ / ಶ್ರವಣಬೆಳಗೊಳ : ಜ್ವರದಿಂದ ಬಳಲುತ್ತಿದ್ದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳ ಪಟ್ಟಣದ ಶ್ರೀಕಂಠನಗರ ನಿವಾಸಿ ಕಾಂತರಾಜ್ ಅವರ ಪತ್ನಿ ರಶ್ಮಿ (28)  ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ,

ಮಿದುಳು ಹಾಗೂ ಶ್ವಾಸಕೋಶಕ್ಕೆ ಸೋಂಕು ತಗುಲಿದ ಕಾರಣ ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜ್ವರದ ತೀವ್ರತೆಯಿಂದ ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟ ಘಟನೆ ನಡೆದಿದೆ ., ರಶ್ಮಿ ಅವರ ರಕ್ತದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ

ಇನ್ನೂ ಬಂದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಈ ಭಾಗದ ಪ್ರತಿ ಮನೆ ಮನೆಗೂ ಭೇಟಿ ನೀಡಿ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ Dr.B.R.ಯುವರಾಜ್ ತಿಳಿಸಿದ್ದು . ಸೊಳ್ಳೆಗಳ ನಿಯಂತ್ರಣಕ್ಕಾಗಿ ಹಾಸನ ಜಿಲ್ಲೆಯ ನಗರಸಭೆ , ಪುರಸಭೆ , ಪಂಚಾಯತಿ ವತಿಯಿಂದ ಫಾಗಿಂಗ್‌ ಮಾಡಲು ಕ್ರಮ ವಹಿಸಬೇಕಾಗಿದೆ .

ಮಳೆಗಾಲದಲ್ಲಿ ಅಲ್ಲಲ್ಲಿ ಕಲುಷಿತ ನೀರು ನಿಂತ ಜಾಗದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ತಾಣವಾಗಿದ್ದು . ಸಾರ್ವಜನಿಕರು ಎಚ್ಚರದಿಂದಿರಬೇಕಿದೆ .

LEAVE A REPLY

Please enter your comment!
Please enter your name here