ಹಾಸನದಲ್ಲಿಂದು ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ಸ್ ಡ್ರಾಮಾ ಜೂನಿಯರ್ಸ್ ಆಡಿಷನ್

0

ಹಾಸನ: ಜೀ ಕನ್ನಡ ವಾಹಿನಿಯ ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19 ಮತ್ತು ಡ್ರಾಮಾ ಜೂನಿಯರ್ಸ್ ಸೀಸನ್ 4 ರ ಮಹಾ ಆಡಿಷನ್ ಡಿ. 28 ರ ಬೆಳಿಗ್ಗೆ 9ಕ್ಕೆ ನಗರದ ಕೆ.ಆರ್.ಪುರಂನ ಎಸ್‍ಆರ್‍ಎಸ್ ಪ್ರಜ್ಞಾ ವಿದ್ಯಾಲಯದಲ್ಲಿ ನಡೆಯಲಿದೆ.

ಆಡಿಷನ್‌ನಲ್ಲಿ ಭಾಗವಹಿಸಲು ಬರುವವರು ತಮ್ಮ ಮಗುವಿನ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರ ಹಾಗೂ ಅಡ್ರೆಸ್ ಪ್ರೂಫ್ ಜೆರಾಕ್ಸ್ ತರಬೇಕು. ಸರಿಗಮಪ ಲಿಟಲ್ ಚಾಂಪ್ಸ್ ಕಾರ್ಯಕ್ರಮಕ್ಕೆ ಆಡಿಷನ್ ನೀಡಲು ಮಗುವಿನ ವಯಸ್ಸು 4 ರಿಂದ 15 ವರ್ಷದೊಳಗಿರಬೇಕು. ಡ್ರಾಮಾ ಜೂನಿಯರ್ಸ್ ನಲ್ಲಿ ಭಾಗವಹಿಸುವ ಮಗುವಿನ ವಯಸ್ಸು 4 ರಿಂದ 14 ವರ್ಷದೊಳಗಿರಬೇಕು. ಆಡಿಷನ್‌ ಗಳಲ್ಲಿ ಭಾಗವಹಿಸಲು ಶುಲ್ಕವಿರುವುದಿಲ್ಲ ಎಂದು ಜೀ ಕನ್ನಡ ವಾಹಿನಿ ತಿಳಿಸಿದೆ

LEAVE A REPLY

Please enter your comment!
Please enter your name here