ಡಿ.24 ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಯುಜನೋತ್ಸವ(ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಫರ್ಧಿಗಳು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹ)

0

ಹಾಸನ ಡಿ.19.(ಹಾಸನ್_ನ್ಯೂಸ್) !, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಡಿ.24 ರಂದು ಬೆಳಿಗ್ಗೆ 9 ಗಂಟೆಯಿಂದ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾ ಮಟ್ಟದ ಯುಜನೋತ್ಸವ ಕಾರ್ಯಕ್ರಮ ಏರ್ಪಡಿಸಿದೆ.      


      ಈ ಯುವಜನೋತ್ಸವದಲ್ಲಿ ಜಿಲ್ಲೆಯ 15 ರಿಂದ 29 ವರ್ಷ ಒಳಪಟ್ಟ ಎಲ್ಲಾ ಯುವಕ ಸಂಘ/ಯುವತಿ ಮಂಡಳಿ/ಮಹಿಳಾ ಮಂಡಳಿ /ಕಾಲೇಜು ವಿದ್ಯಾರ್ಥಿಗಳು, ಭಾಗವಹಿಸಬಹುದಾಗಿದೆ.


      
       ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಫರ್ಧಿಗಳು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. 

ಸ್ಫರ್ಧಿಗಳು ಕಡ್ಡಾಯವಾಗಿ ತಮ್ಮ ಜನ್ಮ ದಿನಾಂಕದ ದೃಡೀಕರಣದ ಬಗ್ಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ ಶಾಲೆಯ ಮುಖ್ಯೋಪಾದ್ಯಾಯರು ನೀಡಿದ  ಜನ್ಮ ದಿನಾಂಕದ ಪ್ರಮಾಣ ಪತ್ರ ಕಡ್ಡಾಯವಾಗಿ ತರತಕ್ಕದ್ದು. ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ.

ಕೋವಿಡ್-19 ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮಾತ್ರ ಪ್ರವೇಶವಿದೆ. ಮದ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.


     
ಯುವಜನೋತ್ಸವದಲ್ಲಿ ನಡೆಸುವ  ಸ್ಪರ್ಧೆಗಳ ವಿವರ: 1) ಜಾನಪದನೃತ್ಯ,   (ತಂಡ ಸ್ಪರ್ಧೆ)(20 ಜನರ ತಂಡ)- 15 ನಿಮಿಷ, (2) ಜಾನಪದ ಗೀತೆ,   (ತಂಡ ಸ್ಪರ್ಧೆ) (10 ಜನರ ತಂಡ) – 07 ನಿಮಿಷ, (3) ಏಕಾಂಕ ನಾಟಕ (ಹಿಂದಿ ಅಥವಾ ಇಂಗ್ಲೀಷಿನಲ್ಲಿ) -45 ನಿಮಿಷ, (04)  ಶಾಸ್ತ್ರೀಯ ಗಾಯನ – ಹಿಂದೂಸ್ತಾನಿ ಮತ್ತು ಕರ್ನಾಟಕ  (ವೈಯಕ್ತಿಕ)-15 ನಿಮಿಷ, (05)  ಶಾಸ್ತ್ರೀಯ ವಾದ್ಯಗಳು: ಸಿತಾರ್, ತಬಲ, ಕೊಳಲು, ವೀಣೆ, ಮೃದಂಗ (ವೈಯಕ್ತಿಕ)-15 ನಿಮಿಷ, (06)  ಹಾರ್ಮೋನಿಯಂ, (ವೈಯಕ್ತಿಕ)- 10 ನಿಮಿಷ (07)  ಗಿಟಾರ್, (ವೈಯಕ್ತಿಕ)-10 ನಿಮಿಷ, 08)  ಶಾಸ್ತ್ರೀಯ ನೃತ್ಯ – ಭರತನಾಟ್ಯ, ಕಥಕ್, ಕೂಚಿಪುಡಿ, ಮಣಿಪುರಿ, ಓಡಿಸ್ಸಿ (ವೈಯಕ್ತಿಕ)-15 ನಿಮಿಷ, 09)  ಆಶುಬಾಷಣ (ಹಿಂದಿ ಅಥವಾ ಇಂಗ್ಲೀಷಿನಲ್ಲಿ) (ವೈಯಕ್ತಿಕ)- 4 ನಿಮಿಷ


    
        ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು,  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರನ್ನು ಖುದ್ದಾಗಿ ಅಥವಾ ದೂ.ಸಂ 08172-246056(296256), 9663801689 ಸಂಪರ್ಕಿಸಬಹುದಾಗಿದೆ.

LEAVE A REPLY

Please enter your comment!
Please enter your name here