“ತಿನ್ನಲು ಸಿದ್ಧವಿರುವ ಉತ್ಪನ್ನಗಳಿಗೆ ಅತಿ ಹೆಚ್ಚು ಬೇಡಿಕೆ ಇರುವುದರಿಂದ ಕೃಷಿ ಆಧಾರಿತ ಕೈಗಾರಿಕೆಗಳ ಸ್ಥಾಪಿಸಿ ” , ಇದಕ್ಕೆ ಸರ್ಕಾರ ಪ್ರೋತ್ಸಾಹ ಧನ ನೀಡಲಿದೆ – ಹಾಸನ ಜಿಲ್ಲಾಧಿಕಾರಿ

0

ಹಾಸನ ಫೆ.19 (ಹಾಸನ್_ನ್ಯೂಸ್ !, ಯಾಂತ್ರೀಕೃತ ಯುಗದಲ್ಲಿ ತಿನ್ನಲು ಸಿದ್ಧವಿರುವ ಉತ್ಪನ್ನಗಳಿಗೆ ಅತಿ ಹೆಚ್ಚು ಬೇಡಿಕೆ ಇರುವುದರಿಂದ ಕೃಷಿ ಆಧಾರಿತ ಕೈಗಾರಿಕೆಗಳನ್ನು ಸ್ಥಳೀಯವಾಗಿ ತೆರೆದು ಜೊತೆಗೆ ಇರುವ ಕೈಗಾರಿಕೆಗಳನ್ನು ಉನ್ನತೀಕರಿಸಿ, ಲಭ್ಯವಿರುವ ಉತ್ಪನ್ನಗಳನ್ನು ಸಂಸ್ಕರಿಸಿ, ಮೌಲ್ಯವರ್ಧನೆ ಮಾಡಿ ಆರ್ಥಿಕವಾಗಿ ಸಧೃಡರಾಗುವಂತೆ ಜಿಲ್ಲಾಧಿಕಾರಿ ಆರ್. ಗಿರೀಶ್ ಕರೆ ನೀಡಿದ್ದಾರೆ.
ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಭಾಂಗಣದಲ್ಲಿಂದು ಸರ್ಕಾರದ ಆತ್ಮ ನಿರ್ಭರ್ ಭಾರತ್ ಅಭಿಯಾನ ಭಾಗವಾಗಿ ಆಹಾರ ಸಂಸ್ಕರಣೆಯಡಿ ಸಾಮಥ್ರ್ಯ ಹಾಗೂ ಅವಕಾಶಗಳ ಕುರಿತು ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೃಷಿ ಕ್ಷೇತ್ರದಲ್ಲಿ ಜಿ.ಡಿ.ಪಿ. ಕುಂಠಿತಗೊಂಡಿದ್ದು, ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚಿನ ಅವಕಾಶವಿರುವುದರಿಂದ ಸ್ಥಳೀಯವಾಗಿ ಉದ್ದಿಮೆದಾರರನ್ನಾಗಿ ಪ್ರೇರೇಪಿಸಲು ಹಾಗೂ ಉದ್ಯೋಗಾವಕಾಶ ಕಲ್ಪಿಸಲು ಲಭ್ಯವಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎ.ಪರಮೇಶ್ ರವರು  ಮಾತನಾಡಿ ಮಾರುಕಟ್ಟೆಯಲ್ಲಿರುವ ಬೇಡಿಕೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲು ಇರುವ ಅವಕಾಶಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿದು ಉದ್ಯಮದಲ್ಲಿ ತೊಡಗುವುದು ಅನಿವಾರ್ಯ ಎಂದು ಸಲಹೆ ನೀಡಿದರು.
ಜಂಟಿ  ಕೃಷಿ ನಿರ್ದೇಶಕರಾದ  ಕೆ.ಹೆಚ್.ರವಿ ಹಾಸನ ರವರು Pಒಈಒಇ ಯೋಜನೆಯ ಒಂದು ಜಿಲ್ಲೆ ಒಂದು ಉತ್ಪನ್ನದಡಿ ತೆಂಗು ಬೆಳೆಯ ಉತ್ಪನ್ನಗಳನ್ನು ಆಯ್ಕೆಗೊಳಿಸಲಾಗಿದ್ದು, ನೂತನ ಹಾಗೂ ಹಾಲಿ ಕಾರ್ಯನಿರ್ವಹಿಸುತ್ತಿರುವ ಕಿರು ಉದ್ದಿಮೆದಾರರಿಗೆ ಹಾಗೂ ಇತರೆ ಅಸಂಘಟಿತ ಆಹಾರ ಸಂಸ್ಕರಣಾ ಘಟಕಗಳ ಉನ್ನತೀಕರಣಕ್ಕಾಗಿ ಅವಕಾಶವಿರುವುದಾಗಿ ತಿಳಿಸಿದರು.  ಗರಿಷ್ಟ ರೂ. 10.00 ಲಕ್ಷಗಳ ಮಿತಿಯ ಅನುದಾನದೊಂದಿಗೆ ಯೋಜನಾ ವೆಚ್ಚದ 35% ಸಾಲ ಸಂಪರ್ಕಿತ ಅನುದಾನವನ್ನು ಉದ್ದಿಮೆದಾರರಿಗೆ ನೀಡಲಾಗುವುದೆಂದು  ಹಾಗೂ ಲಭ್ಯವಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಉದ್ದಿಮೆದಾರರಾಗುವಂತೆ ಯೋಜನೆಯ ಕುರಿತು ಪ್ರಾಸ್ತಾವಿಕ ನುಡಿಯಲ್ಲಿ ತಿಳಿಸಿದರು.
ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು,  ದಿನೇಶ್ ಟಿ ರವರು ಉದ್ದಿಮೆದಾರರ ಹಲವಾರು ಪ್ರಶ್ನೆಗಳಿಗೆ ಸಲಹೆ ನೀಡಿದರು.


ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಯೋಗೀಶ್‍ರವರು ಮಾತನಾಡಿ ಮಾರುಕಟ್ಟೆಯಲ್ಲಿ ತೆಂಗಿನ ಮೌಲ್ಯವರ್ಧಿತ ಉತ್ಪನ್ನಗಳಿಗಿರುವ ಬೇಡಿಕೆ ಹಾಗೂ ಸಂಬಂಧಪಟ್ಟ ಸಂಸ್ಥೆಗಳಲ್ಲಿ ಇರುವ ಮಾಹಿತಿಯನ್ನು ಪಡೆದು ತೆಂಗು ಬೆಳೆಯನ್ನು ಸಂಸ್ಕರಣೆ, ಮಾರಾಟ ಮಾಡುವುದರ ಕುರಿತು ಮಾಹಿತಿ ನೀಡಿದರು.
ಸಾವಯವ ಕೃಷಿಯಲ್ಲಿನ ತಮ್ಮ ಅನುಭವ ಹಂಚಿಕೊಂಡ ಹಾಸನ ಕೊಡಗು ಸಾವಯವ ಒಕ್ಕೂಟದ ಅಧ್ಯಕ್ಷರಾದ ವೈ.ಸಿ.ರುದ್ರಪ್ಪನವರು ಮಾತನಾಡಿ ಸಮಗ್ರ ಕೃಷಿಯ ಅನಿವಾರ್ಯತೆ, ಸ್ಥಳೀಯ ಲಭ್ಯವಿರುವ ಉತ್ಪನ್ನಗಳನ್ನು ಮೌಲ್ಯವರ್ಧನೆಗೆ ಒಳಪಡಿಸುವುದು ಹಾಗೂ ಅವುಗಳ ಸಮರ್ಪಕವಾದ ಬಳಕೆ ಮಾಡುವುದರಿಂದ ಆರೋಗ್ಯ ವೃದ್ಧಿಸುವುದಲ್ಲದೇ ಆರ್ಥಿಕವಾಗಿಯೂ ಸಮರ್ಥರನ್ನಾಗಿಸುತ್ತದೆ ಎಂದು ಸಲಹೆ ನೀಡಿದರು.
ಎಸೆನ್‍ಶಿಯಲ್ ನೆಕ್ಟರ್ ಪ್ರೈ.ಲಿ ನ ವ್ಯವಸ್ಥಾಪಕ ನಿರ್ದೇಶಕರಾದ ಹರೀಶ್ ಹಾಗೂ ಭಾರತಿ ಎಕ್ಸ್‍ಪೋಟ್ರ್ಸ್‍ನ ವಿನೋದ್ ರವರು ತಮ್ಮ ಸ್ವಂತ ಉದ್ದಿಮೆಯಲ್ಲಿನ  ಏಳು-ಬೀಳುಗಳನ್ನು ಹಾಗೂ ಸವಾಲುಗಳನ್ನು ಕಾರ್ಯಾಗಾರದಲ್ಲಿ ಮಂಡಿಸಿ ಉತ್ತಮ ಉದ್ದಿಮೆಗಾರರಾಗಲು ಹಲವಾರು ಸಲಹೆಗಳನ್ನು ನೀಡಿದರು. 
ಕಾರ್ಯಾಗಾರದಲ್ಲಿ  ಉಪ ಕೃಷಿ ನಿರ್ದೇಶಕರಾದ ಕೋಕಿಲಾ ಎ. ಎಸ್, ಸಕಲೇಶಪುರದ ಉಪ ಕೃಷಿ ನಿರ್ದೇಶಕರಾದ ಕೆ.ಸುಷ್ಮ ,ಇಲಾಖೆಯ ಅಧಿಕಾರಿ ಸಿಬ್ಬಂದಿಯವರು ಹಾಗೂ ಹಲವಾರು ಉದ್ದಿಮೆದಾರರು ಮತ್ತು ರೈತರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here