ಜಿಲ್ಲಾ ಮಟ್ಟದಲ್ಲಿ ರಫ್ತು ಮಾಡುತ್ತಿರುವ ಕೈಗಾರಿಕೆ, ಕೃಷಿ, ತೋಟಗಾರಿಕೆ ಉದ್ಯಮಿಗಳಿಗೆ ಸಮಾವೇಶ ಹಾಸನದಲ್ಲಿ (ನಿಮಗಿರುವ ಸರ್ಕಾರಿ ಸೌಲಭ್ಯಗಳ ಮಾಹಿತಿ ಇಲ್ಲಿ ಸಿಗಲಿದೆ) ನೋಡಿ 👍

  0

  ಜಿಲ್ಲಾ ಮಟ್ಟದ ರಫ್ತುದಾರರ ಸಮಾವೇಶ
  ಹಾಸನ ಸೆ.20 : ಭಾರತ ಸರ್ಕಾರದ ಆಜಾದಿ ಕಾ ಅಮೃತ್ ಮಹೋತ್ಸವ್ ಕಾರ್ಯಕ್ರಮದ ಅಂಗವಾಗಿ ಸೆ.24ರಂದು 10.30 ಕ್ಕೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಆಶ್ರಯದಲ್ಲಿ ಜಿಲ್ಲಾ ಮಟ್ಟದ ರಫ್ತುದಾರರ ಸಮಾವೇಶ ಹಾಗೂ ವಸ್ತು ಪ್ರದರ್ಶನವನ್ನು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಡೈರಿ ವೃತ್ತ, ಹಾಸನ ಇಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದೇಶಕರು ತಿಳಿಸಿದ್ದಾರೆ.
  ಸದರಿ ಸಮಾವೇಶದಲ್ಲಿ, ಜಿಲ್ಲೆಯಿಂದ ಹಾಲಿ ರಫ್ತಾಗುತ್ತಿರುವ ಉತ್ಪನ್ನಗಳು, ರಫ್ತುದಾರರಿಗೆ ಸರ್ಕಾರದಿಂದ ಒದಗಿಸಲಾಗುತ್ತಿರುವ ಸೌಲಭ್ಯಗಳು ಹಾಗೂ ಜಿಲ್ಲೆಯಿಂದ ರಫ್ತು ಮಾಡಬಹುದಾದ ಕೃಷಿ/ತೋಟಗಾರಿಕೆ/ಕೈಗಾರಿಕಾ ಉತ್ಪನ್ನಗಳ ಬಗ್ಗೆ ಚರ್ಚಿಸಲಾಗುವುದು ಜಿಲ್ಲೆಯ ಹಾಲಿ ರಫ್ತುದಾರರು, ರಫ್ತು ಮಾಡಲು ಇಚ್ಚಿಸುವ ಉದ್ದಿಮೆದಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹೆಚ್ಚಿನ ಮಾಹಿತಿ ಪಡೆಯುವಂತೆ ಕೋರಿದ್ದಾರೆ.

  #supportsmallbusiness #supportlocal

  LEAVE A REPLY

  Please enter your comment!
  Please enter your name here