ಪ್ಲಾಸ್ಟಿಕ್ ಮುಕ್ತ ನಗರ,ಹಸಿ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಕಾಲ್ನಡಿಗೆ ಜಾಥಾ 2021 : ಹಾಸನ

0

ಹಾಸನ ಮಾ.03(ಹಾಸನ್_ನ್ಯೂಸ್ !, ನಗರ ಸಭೆಯೊಂದಿಗೆ  ಸಾರ್ವಜನಿಕರೆಲ್ಲ ಸ್ವಚತೆಗೆ ಕೈಗೊಡಿಸುವ ಮೂಲಕ ನಗರವನ್ನು ಸುಂದರವಾಗಿಡಲು ಸಹಕರಿಸುವಂತೆ ಅಪರ ಹಿಲ್ಲಾಧಿಕಾರಿ ಕವಿತ ರಾಜಾರಾಂ ತಿಳಿಸಿದ್ದಾರೆ.


ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ ಮತ್ತು ನಗರಸಭೆ ವತಿಯಿಂದ 20 21 ನೇ ಸಾಲಿನ ಸ್ವಚ್ಛ ಭಾರತ ಅಭಿಯಾನ ಅಡಿಯಲ್ಲಿ ಪ್ಲಾಸ್ಟಿಕ್ ಮುಕ್ತ ನಗರ,ಹಸಿ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಲು ಏರ್ಪಡಿಸಿದ್ದ ಕಾಲ್ನಡಿಗೆ  ಜಾಥಾವನ್ನು ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಸ್ವಚ್ಛತೆ  ಕಾಪಾಡುವುದರಿಂದ ಆರೋಗ್ಯವನ್ನು ರಕ್ಷಣೆ ಮಾಡಿಕೊಳ್ಳಬಹುದು.

ನಗರದಲ್ಲಿ ಪ್ರತಿಯೊಬ್ಬರು ಸ್ವಚ್ಛತೆ ಕಾಪಾಡುವುದರ ಮೂಲಕ ಸ್ವಚ್ಛತೆಯಲ್ಲಿ  ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಲು ಸಾರ್ವಜನಿಕ  ಪಾತ್ರ ಬಹು ಮುಖ್ಯ ತಿಳಿಸಿದರು.


ಈ ಸಂದರ್ಭದಲ್ಲಿ ನಗರಸಭೆಯ ಆಯುಕ್ತರಾದ ಕೃಷ್ಣಮೂರ್ತಿ,ಪರಿಸರ ಅಧಿಕಾರಿ ವೆಂಕಟೇಶ್ , ನಗರಸಭೆಯ ಆರೋಗ್ಯ ನಿರೀಕ್ಷರುಗಳು ಹಾಗೂ ಮತ್ತಿತರು  ಹಾಜರಿದ್ದರು.

LEAVE A REPLY

Please enter your comment!
Please enter your name here