ಟೀ ಚಟ ಉಪಯೋಗಕಾರಿಯೇ? ಟೀ ಪ್ರಿಯರಿಗೆ ಇಲ್ಲಿದೆ ಮಾಹಿತಿ.

2

ಎಲ್ಲಾ  ಟೀ ಪ್ರಿಯರಿಗೂ ನಿಮ್ಮ ಇಷ್ಟವಾದ ಟೀ ಬಗ್ಗೆ  ಇಲ್ಲಿದೆ ಮಾಹಿತಿ. ಶ್ರಮಪಟ್ಟು ದುಡಿಯುವ ಕೂಲಿ ಕೆಲಸದವರಿಂದ, ಸೋಂಬೇರಿಯಾಗಿ ಮನೇಲಿ ಕೂತಿರುವ ನಮ್ಮಂತವರಿಗೂ ಟೀ ಪರಿಮಳ ನಮ್ಮ ಮನ ಮಾತ್ರವಲ್ಲ ನಾಲಿಗೆಯನ್ನು ಕೂಡ ಸೆಳೆದಿದೆ. ಇತ್ತೀಚಿನ ಸಮೀಕ್ಷೆ ಪ್ರಕಾರ ಭಾರತದಲ್ಲಿ ಶೇ. 64 ರಷ್ಟು ಜನಸಂಖ್ಯೆ ಟೀಯನ್ನು ಪ್ರತಿದಿನ ಸೇವಿಸುತ್ತಾರೆ. ಭಾರತದ ಉತ್ತರ ಭಾಗದಲ್ಲಿ ಟೀ ಬಳಕೆಯನ್ನು ಹೆಚ್ಚು ಕಾಣಬಹುದು. ಅಲ್ಲಿ ಟೀಗಿಂತ ‘ಚಾಯ್’ ಎಂಬ ಹೆಸರೇ ಹೆಚ್ಚು ಪ್ರಸಿದ್ಧ.

ಹಲವರಿಗೆ ಚಹಾ ತಮ್ಮ ಆತ್ಮೀಯರೊಂದಿಗೆ ಸಮಯ ಕಳೆಯಲು ಒಂದು ನೆಪವಾದರೆ ಕೆಲವರಿಗೆ ಇದು ಚಟ ಕೂಡ. ನಿಮ್ಮ  ಚಹಾ ಚಟ ಉಪಯೋಗಕಾರಿಯೇ?

ಇಲ್ಲಿದೆ ನೋಡಿ ಪ್ರತಿದಿನ ಟೀ ಕುಡಿಯಲೇ ಬೇಕಾಗಿರುವ ಕಾರಣಗಳು:

*ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಚಹಾದಲ್ಲಿ ಆಂಟಿ ಆಕ್ಸಿಡೆಂಟ್ಸ್ ಪ್ರಮಾಣ ಅಧಿಕವಾಗಿರುವುದರಿಂದ ನಮ್ಮ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದಿಂದ ಜೀವಾಣು ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಕ್ಯಾನ್ಸರ್ ರೋಗವನ್ನು ತಡೆಗಟ್ಟಲು ಉಪಯೋಗಕಾರಿ ಎಂದು ಕೆಲವರು ನಂಬುತ್ತಾರೆ. ಹೀಗಾಗಿ ಆಂಟಿ ಆಕ್ಸಿಡೆಂಟ್ಸ್ ಅಂಶ ಹೆಚ್ಚಿರುವುದರಿಂದ ನಾವು ಆರೋಗ್ಯವಾಗಿರಬಹುದು.

* ಹೃದಯ ಕಾಯಿಲೆಗಳನ್ನು ತಡೆಗಟ್ಟಬಹುದು:
ಟೀ ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುವುದನ್ನು ಬಹು ವೇಗವಾಗಿ ತದೆಯಬಹುದು ಹಾಗಾಗಿ ಹೃದಯಾಘಾತವನ್ನು ನಮ್ಮ ಜೀವನದಿಂದ ದೂರವಿಡಬಹುದು. ಟೀ ಕುಡಿಯುವುದರಿಂದ ಶೇ. 70 ರಷ್ಟು ಹೃದಯಾಘಾತಗಳು ಕಡಿಮೆಯಾಗುತ್ತದೆ.

* ಶಾಂತಿಯುತವಾದ ಮನಸ್ಸು: ಕೆಲಸದ ಒತ್ತಡದಲ್ಲಿ ಟೀ ಕುಡಿದರೆ ಮನಸ್ಸಿಗೆ ನಿರಾಳವಾಗುತ್ತದೆ. ಇದರಲ್ಲಿ ಕೆಫೀನ್ ಅಂಶವಿದ್ದು ಒತ್ತಡ ಕಡಿಮೆ ಮಾಡಲು ಸಹಾಯಕಾರಿ. ಆದರೂ ಕಾಫಿಗಿಂತ ಟೀನಲ್ಲಿ ಕೆಫೀನ್ ಅಂಶ ಕಡಿಮೆ ಇರುವುದರಿಂದ ನರಮಂಡಲ ವ್ಯವಸ್ಥೆಗೆ ಹೆಚ್ಚು ಆರೋಗ್ಯಕರವಾಗಿದೆ.

*ದೇಹದ ಹೈಡ್ರೇಷನ್ ಗಾಗಿ ಟೀ ಮುಖ್ಯ:
ನಮ್ಮ ದೇಹಕ್ಕೆ ಸರಿಯಾದ ಪ್ರಮಾಣದ ದ್ರುವ ಪದಾರ್ಥಗಳ ಸೇವನೆ ಬಹಳ ಮುಖ್ಯ. ಟೀ  ಸೇರಿಸುವುದರಿಂದ ದೇಹವನ್ನು ಹೈಡ್ರೇಟ್ ಮಾಡಿಕೊಳ್ಳಲು ಬಹಳ ಸುಲಭ. ಇದರಿಂದ  ಒಳ್ಳೆಯ ಚರ್ಮ, ದಟ್ಟವಾದ ಕೂದಲು ಮತ್ತು ಉತ್ತಮ ಜೀರ್ಣಕ್ರಿಯೆ ದೊರಕುತ್ತದೆ.

*ಬಲಶಾಲಿ ಮೂಲೆಗಳು: ಟೀನಲ್ಲಿ ಫೈಟೂಈಸ್ಟ್ರೊಜೆನ್ ಮತ್ತು ಫ್ಲೋರೈಡ್ ಅಂಶ ಹೆಚ್ಚಿರುವುದರಿಂದ ಇದು ನಮ್ಮ ದೇಹದ ಮೂಳೆ ಖನಿಜ ಸಾಂದ್ರತೆಯನ್ನು ( Bone mineral density) ನಿಯಂತ್ರಿಸಲು ಉಪಯೋಗಕಾರಿ ಹಾಗಾಗಿ ನಮ್ಮ ಮೂಳೆಗಳು ಆರೋಗ್ಯವಾಗಿರುತ್ತದೆ.

ಇದೇ ನೋಡಿ ನಿಮ್ಮ ಟೀ ಕಹಾನಿ.ಈ ಮಾಹಿತಿ ಎಲ್ಲಾ ಟೀ ಪ್ರಿಯರಿಗೆ ಸಿಹಿ ಸುದ್ದಿಯಲ್ಲವೇ? ಟೀ ಕುಡಿಯುವುದು ಒಳ್ಳೆಯ ಚಟ ಹಾಗಂತ ಅತಿಯಾದರೆ ಅಮೃತವೂ ವಿಷವೇ. ನಿಮ್ಮ ಆರೋಗ್ಯ ನಿಮ್ಮ ಜವಾಬ್ದಾರಿ.
                                     – ತನ್ವಿ. ಬಿ


              

2 COMMENTS

Leave a Reply to manu107kb@gmail.com Cancel reply

Please enter your comment!
Please enter your name here