ನಮ್ಮ ಜೀವ ಉಳಿಸಿ ಎಂದು ಹುರಡಿ ಗ್ರಾಮಸ್ತರ ಆಕ್ರೋಶ

0

ಹಾಸನ : ಜಿಲ್ಲೆಯ ಸಕಲೇಶಪುರ ತಾಲೂಕಿನ ಹಾನುಬಾಳು ಗ್ರಾಮ ಪಂಚಾಯತಿ ವ್ಯಾಪ್ತಿಯ ಹುರುಡಿ ಗ್ರಾಮಕ್ಕೆ ಕಲುಷಿತ ನೀರು ಪೂರೈಕೆ ಆಗುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದರು.

ಹುರುಡಿ ಗ್ರಾಮದಲ್ಲಿ ಸುಮಾರು 150 ಕುಟುಂಬಗಳು ವಾಸಮಾಡುತ್ತಿದ್ದು ಈ ಕುಟುಂಬಗಳಿಗೆ ಸುಮಾರು 15 ವರ್ಷದಿಂದ ಹುರುಡಿಯಲ್ಲಿ ಹಾದು ಹೋಗುವ ಕಲ್ಲಂದಿ ಕಾಲುವೆ ಮೂಲಕ ಹಾದು ಹೋಗುವ ನೀರು ಪೂರೈಕೆ ಆಗುತ್ತಿದ್ದು ಈ ನೀರು ಹೇಗಿದೆ ಎಂದರೆ ರೈತರು ಕಾಳು ಮೆಣಸು ಮತ್ತು ಅಡಿಕೆಗೆ ಸಿಂಪಡಿಸುವ ವಿಷಕಾರಿ ನೀರು ಬಟ್ಟೆ ತೊಳೆಯುವ ನೀರು, ಜಾನುವಾರಗಳನ್ನು ತೊಳೆಯುವ ನೀರು ಮನುಷ್ಯರು ಮಲಮೂತ್ರ ಮಾಡಿದ ನೀರು ಹಾಗೂ ಮಳೆಗಾಲದಲ್ಲಿ ಹರಿಯುವ ಕೊಳಚೆ ನೀರು ಕಲ್ಲಂದಿ ಸೇರುತ್ತಿದ್ದು ಈ ಬಾವಿಯಿಂದ ಪೈಪ್ ಮೂಲಕ ಹುರುಡಿ ಗ್ರಾಮದಲ್ಲಿರುವ ಓವರ್ ಟ್ಯಾಂಕಿಗೆ ಬಂದು ಪೈಪ್ ಮೂಲಕ ಮನೆಗಳಿಗೆ ಸರಬರಾಜುಗುತ್ತಿದೆ. ಈ ನೀರು ನೋಡಲು ಗೊಚ್ಚೆ ನೀರಿನ ತರ ಬಾಸವಾಗುತ್ತಿದೆ.

ಅವೈಜ್ಞಾನಿಕ ಬಾವಿ ನಿರ್ಮಾಣ

ಕಲ್ಲಂದಿ ಇಂದ ಹರಿದು ಬರುವ ಕಾಲುವೆಗೆ ಅಡ್ಡಲಾಗಿ ಒಂದು ಬಾವಿ ನಿರ್ಮಿಸಿದ್ದು ಸದರಿ ಬಾವಿಯನ್ನು ಕೇವಲ 15 ಅಡಿ ಆಳ ಮಾಡಿದ್ದು ಈ ಬಾವಿಯ ನಿರ್ಮಾಣದ ತಳ ಸಂಪೂರ್ಣ ಹುಸುಬಿನಿಂದ ಕೂಡಿದೆ. ಸದ್ಯದ ಪರಿಸ್ಥಿತಿ ಈ ಬಾವಿ ಮತ್ತು ನೆಲ ಸಮನಾಗಿರುತ್ತದೆ. ಸಮನಾದ ಕಾರಣ ಈ ಬಾವಿಯ ತುಂಬಾ ಹೂಳು ತುಂಬಿದೆ. ಹೂಳು ತೆಗೆಯಲು ಗ್ರಾಮ ಪಂಚಾಯಿತಿಗೆ ಲಿಖಿತವಾಗಿ ಮತ್ತು ಮೌಖಿಕವಾಗಿ ದೂರು ನೀಡಿದರು ಜಪ್ಪಯ್ಯ ಎನ್ನದ ಹಾನುಬಾಳ ಗ್ರಾಮ ಪಂಚಾಯತಿಯ ಪಿಡಿಓ.

ಜಿಲ್ಲಾಧಿಕಾರಿಯ ನಡೆ- ಹಳ್ಳಿಯ ಕಡೆಗೆ ಎಂಬ ಹೆಸರನ್ನು ನಾಮಕರಣ ಮಾಡಿಕೊಂಡು ಸರ್ಕಾರ ಕಾರ್ಯಕ್ರಮ ಮಾಡಿತ್ತು ಇದು ಹೇಗಿದೆ ಅಂದರೆ ನಮ್ಮ ಹಳ್ಳಿಯ ಕಡೆ ಒಂದು ಗಾದೆ ಮಾತಿದೆ “ಹೋದ ಪುಟ್ಟ ಬಂದೆ ಪುಟ್ಟ” ಎಂದು ಸರ್ಕಾರದ ನಡೆ ಈ ಜಿಲ್ಲಾಧಿಕಾರಿಗಳ ಹಳ್ಳಿಯ ಕಡೆ ಕಾರ್ಯಕ್ರಮದಲ್ಲೂ ಕೂಡ ಗ್ರಾಮಸ್ಥರು ಲಿಖಿತವಾಗಿ ಮನವಿ ಸಲ್ಲಿಸಿದ್ದು ಆಯಿತು ಮನವಿಯನ್ನು ಕಸದ ಬುಟ್ಟಿಗೆ ತೂರಿದ್ದು ಆಯ್ತು ಅಷ್ಟಾಗಿದ್ದರೆ ಸುಮ್ಮನೆ ಇರಬಹುದಿತ್ತು ಗ್ರಾಮಸ್ಥರು ಮತ್ತೆ ಛಲ ಬಿಡದೆ ನಮ್ಮ ಹಾಸನದ ಸಂಸದರು ಅದ ಪ್ರಜ್ವಲ್ ರೇವಣ್ಣ ರವರಿಗೂ, ಸಕಲೇಶಪುರ ಕ್ಷೇತ್ರದ ಮಾಜಿ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ ಅವರಿಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಪ್ರದಿಪ್ ಯಜಮಾನ ರವರಿಗೂ ಗ್ರಾಮ ಪಂಚಾಯತ್ ಅಧ್ಯಕ್ಷರಿಗೂ ಕೂಡ ಮನವಿ ಸಲ್ಲಿಸಲಾಯಿತು ಯಾವೊಬ್ಬ ಜನಪ್ರತಿನಿಧಿಗಳು ಇತ್ತ ಕಡೆ ಗಮನಹರಿಸಲೇ ಇಲ್ಲ ಚುನಾವಣಾ ಬಂದ ಕೂಡಲೇ ಪ್ರತ್ಯಕ್ಷವಾಗುವ ಜನಪ್ರತಿನಿಧಿಗಳು ಮತ್ತೆ ಇತ್ತ ಕಡೆ ತಲೆ ಕೂಡ ಹಾಕುವುದಿಲ್ಲ.

ಹದಗೆಡುತ್ತಿರುವ ಆರೋಗ್ಯ

ಗ್ರಾಮದ ಹಲವಾರು ಮಕ್ಕಳು ವೃದ್ಧರು ಈ ಕಲುಷಿತ ನೀರನ್ನು ಸೇವನೆ ಮಾಡುತ್ತಿರುವುದರಿಂದ ದಿನೇ ದಿನೇ ಜ್ವರ,ಕೆಮ್ಮು, ಶೀತ ಸಣ್ಣ ಮಟ್ಟದ ಕಾಯಿಲೆಗಳಿಂದ ನರಳುತ್ತಿದ್ದಾರೆ. ಅಲ್ಲದೆ ಸಣ್ಣ ಕಂದಮ್ಮಗಳು ಕೂಡ ರೋಗ ರುಜಿನೆಯಿಂದ ಕೂಡಿದ ನೀರಿನಿಂದ ಸ್ನಾನ ಮಾಡಿಸುತ್ತಿದ್ದು ಮಕ್ಕಳ ಆರೋಗ್ಯದಲ್ಲೂ ಕೂಡ ಏರುಪೇರಾಗುತ್ತದೆ. ಮೈಯಲ್ಲಿ ಅಲರ್ಜಿಗಳಂತ ರೋಗಗಳು ಕಾಣಿಸುತ್ತಿವೆ. ಸುಮಾರು ಮೂರು ನಾಲ್ಕು ದಿನಗಳ ಕಾಲ ಬ್ಯಾರಲ್ಗಳಲ್ಲಿ ನೀರನ್ನು ಶೇಖರಣೆ ಮಾಡಿಟ್ಟು ಈ ನೀರು ತಿಳಿದ ತದನಂತರ ಸ್ನಾನ ಮಾಡುವ ಪರಿಸ್ಥಿತಿ ಗ್ರಾಮಸ್ಥರಿಗೆ ಬಂದಿದೆ.

ಶುದ್ಧ ಕುಡಿಯುವ ನೀರಿನ ಬದಲಿ ವ್ಯವಸ್ಥೆ ಕೋರಿ ಗ್ರಾಮಸ್ಥರ ಒತ್ತಾಯ

ನಮ್ಮ ಗ್ರಾಮಕ್ಕೆ ಒಂದು ವಾರದ ಒಳಗಡೆ ನಮಗೆ ಕುಡಿಯಲು ಯೋಗ್ಯವಾದ ನೀರನ್ನು ಹೊಸದಾಗಿ ಬೋರ್ವೆಲ್ ನಿರ್ಮಿಸಿ ಅಲ್ಲಿಂದಲೇ ನಮಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡಿ ನಮ್ಮ ಜೀವ ಉಳಿಸಿ ಕೊಡಿ ನಮ್ಮನ್ನು ಬದುಕಿಸಿ ಎಂದು ಹುರುಡಿ ಗ್ರಾಮದ ಹೆಚ್ ಕೆ ಶಿವಕುಮಾರ್ ಮಾರ್ಮಿಕವಾಗಿ ಹೇಳಿದ ಕ್ಷಣ ಮನಕಲಕುವಂತಿತ್ತು. ಸದ್ಯಕ್ಕೆ ಒಂದು ಕಿಲೋಮೀಟರ್ ದೂರದಿಂದ ಕುಡಿಯುವ ನೀರನ್ನು ತರುತ್ತಿದ್ದೇವೆ.ಇ ಸಂಕಷ್ಟದಿಂದ ನಮ್ಮನ್ನು ಹೊಸದಾಗಿ ಆಯ್ಕೆಯಾಗಿರುವ ಸಕಲೇಶಪುರ ತಾಲ್ಲೂಕಿನ ಶಾಸಕ ಸಿಮೆಂಟ್ ಮಂಜು ರವರೆ ನೀವಾದರೂ ಇತ್ತ ಕಡೆ ಗಮನ ಹರಿಸುತ್ತಿರ ಎಂದು ಕಾದುನೋಡಬೇಕು.


ಗ್ರಾಮದಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿರುವ ಪರಿಣಾಮ ಜನರಿಗೆ ಕೆಲವು ಸಣ್ಣಪುಟ್ಟ ಕಾಯಿಲೆಗಳಿಂದ ನರಳುತ್ತಿದ್ದಾರೆ ಶುದ್ಧ ಕುಡಿಯುವ ನೀರಿನ ವಿಚಾರದಲ್ಲಿ ಗ್ರಾಮ ಪಂಚಾಯತ್ ನಿರ್ಲಕ್ಷ ವಹಿಸುತ್ತಿರುವುದು ಸರಿಯಲ್ಲ ಎಂದು ಜನರು ಅಕ್ರೋಶ ವ್ಯಕ್ತಪಡಿಸಿದ್ದು, ಹಾನುಬಾಳು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ನಾಳೆ ಬಾವಿಯ ಹೂಳೆತ್ತಿಸಿ ಕೊಡುತ್ತೇನೆ ಎಂದು ಹುರುಡಿ ಶಿವಕುಮಾರ್ ರವರಿಗೆ ಭರವಸೆ ನೀಡಿದ್ದಾರೆ. ನಮ್ಮ ಮಾನವಿಗೆ ಶೀಘ್ರ ಪರಿಹಾರ ಸಿಗದಿದ್ದಲ್ಲಿ ಗ್ರಾಮ ಪಂಚಾಯತಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮಸ್ಥರಾದ ಶೈಲ ಲೋಕೇಶ್, ದೀಪ್ತಿ ಶಿವಕುಮಾರ್ , ಎಚ್ಎಸ್ ಪ್ರಮೋದ್, ಗುರುಪ್ರಸಾದ್, ಕೃಷ್ಣಪ್ಪ, ನಂಜಪ್ಪ, ಲೋಕೇಶ್, ರವರು ಎಚ್ಚರಿಸಿದರು.

LEAVE A REPLY

Please enter your comment!
Please enter your name here