ವಿದ್ಯಾರ್ಹತೆ: ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು : ನಿಮಗೆ ಭರ್ಜರಿ ಸಂಬಳ ಇರುವ ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ

1

‌ಹಾಸನ.ನ.25(ಹಾಸನ್_ನ್ಯೂಸ್):- ಬೆಂಗಳೂರು ಸ್ಟಾಪ್ ಸೆಲೆಕ್ಷನ್ ಕಮಿಷನ್,  ಕೇಂದ್ರ ಸರ್ಕಾರದ ಅಂಚೆ ಮತ್ತು ಇತರೆ ಇಲಾಖೆಗಳಲ್ಲಿ ಖಾಲಿ ಇರುವ ಪೊಸ್ಟಲ್ ಅಸಿಸ್ಟೆಂಟ್, ಸಾರಟಿಂಗ್ ಅಸಿಸ್ಟೆಂಟ್, ಡಾಟಾ ಎಂಟ್ರಿ ಆಪರೇಟರ್, ಎಲ್.ಡಿ.ಸಿ  ಮುಂತಾದ  ಹುದ್ದೆಗಳ ನೇಮಕಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿರುತ್ತಾರೆ. 
ವಿದ್ಯಾರ್ಹತೆ: ಪಿ.ಯು.ಸಿ ಪರೀಕ್ಷೆಯಲ್ಲಿ ತೇರ್ಗಡೆ ಮತ್ತು ಕಂಪ್ಯೂಟರ್  ಜ್ಞಾನ ಹೊಂದಿರಬೇಕು. ವಯೋಮಿತಿ: 18 ರಿಂದ 27 ವರ್ಷಗಳು ಪರಿಶಿಷ್ಟ ಜಾತಿ/ಪಂಗಡ/ ಓಬಿಸಿ/ಅಂಗವಿಕಲ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ನಿಯಮಾನುಸಾರ ರಿಯಾಯಿತಿ ಇರುತ್ತದೆ.  ವೇತನ ರೂ 32,000 ರಿಂದ 45,000 ವರೆಗೆ. ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ:15/12/2020. ಹೆಚ್ಚಿನ ಮಾಹಿತಿಗಾಗಿ ವೆಬ್‍ಸೈಟ್ www.ssckkr.kar.nic.in & https://ssc.nic.in  ನಲ್ಲಿ ಲಭ್ಯವಿರುವಮಾಹಿತಿಯನ್ನು ಪಡೆಯುವುದು.
ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ರವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172-296374 ಅನ್ನು ಸಂಪರ್ಕಿಸಿ ಮಾಹಿತಿ ಮತ್ತು ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದು.

1 COMMENT

LEAVE A REPLY

Please enter your comment!
Please enter your name here