ಬಿಜಾಪುರ ಹಾಸನ ಮಂಗಳೂರಿಗೆ ರೈಲ್ವೆ ಪ್ರಯಾಣ ಸದುಪಯೋಗ ಪಡೆದುಕೊಳ್ಳಲು ಮನವಿ

0

ರೈಲು ಪ್ರಯಾಣಿಕರಿಗೆ ಒಂದು ಖುಷಿಯ ಸುದ್ದಿ , ಕೇಂದ್ರ ರೈಲ್ವೆ ಸಚಿವ ದಿ,ಸುರೇಶ ಅಂಗಡಿ ಅವರು ಪ್ರಾರಂಭಿಸಿದ ಹೊಸ ರೈಲು ಮತ್ತೆ ಇದೇ,ಡಿ : ಡಿಸೆಂಬರ್ 2021 ರಿಂದ ವಿಜಯಪುರ-ಮಂಗಳೂರು ಮಧ್ಯೆ ಹೊಸ ರೈಲು ಪುನರ್ ಪ್ರಾರಂಭಗೊಂಡಿದ್ದು ಸದರಿ ರೈಲ್ವೆಯು ಪ್ರತಿದಿನ ಸಂಜೆ 6.15 ಕ್ಕೆ ವಿಜಯಪುರನಿಂದ ಹೊರಟು, ಆಲಮಟ್ಟಿ,ಬಾಗಲಕೊಟ, ಬದಾಮಿ ಮಾರ್ಗವಾಗಿ ಗದಗ, ಹುಬ್ಬಳ್ಳಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಅರಸೀಕೆರೆ, ಹಾಸನ, ಸಕಲೇಶಪುರ ,ಸುಬ್ರಮಣ್ಯ, ಪುತ್ತೂರು ಮುಂತಾದ ಪ್ರಮುಖ ನಗರಗಳ ಮೂಲಕ ಹಾಯ್ದು ಮರುದಿನ ಬೆಳಿಗ್ಗೆ ಮಂಗಳೂರು ತಲುಪಲಿದೆ.ಸದರಿ ರೈಲ್ವೆಯು ಪ್ರತಿದಿನ ಸಂಚರಿಸುತ್ತಿದ್ದು ಆದರೆ ಹೆಚ್ಚು ಪ್ರಚಾರದ ಕೊರತೆಯಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆ ಇದೆ. ಆಸನಗಳು ಖಾಲಿ ಇರುತ್ತವೆ, ಸದರಿ ರೈಲ್ವೆಯ ಉತ್ತರ ಕರ್ನಾಟಕದ ಕೂಲಿ ಕಾರ್ಮಿ ಕರಿಗೆ ಹಾಗೂ ಸಾರ್ವ ಜನಿಕರಿಗೆ ವಿಶೇಷವಾಗಿ ಪಶ್ಚಿಮ ಘಟ್ಟದ ಪ್ರಮುಖ ಪ್ರವಾಸಿ ತಾಣ ಗಳಾದ ಸಕಲೇಶಪುರ, ಕುಕ್ಕೆ ಸುಬ್ರಮಣ್ಯ,ಧರ್ಮ ಸ್ಥಳ ಮುಂತಾದ ಸ್ಥಳಗಳ ವೀಕ್ಷಣೆಗೆ ತುಂಬ ಅನುಕೂಲವಾಗಿದೆ.ಆದರೆ

ಈ ರೈಲ್ವೆ ಪ್ರಾರಂಭಗೊಂಡ ವಿಷಯದ ಬಗ್ಗೆ ಸಾರ್ವಜನಿಕರ ಗಮನಕ್ಕೆ ಹೆಚ್ಚು ಬಂದಿರುವದಿಲ್ಲ ಎಂದು ಭಾವಿಸಿರುತ್ತೆವೆ. ಹೆಚ್ಚಿನ ಪ್ರಯಾಣಿಕರು ಈ ರೈಲ್ವೆಯ ಸೌಲಭ್ಯ ಪಡೆದುಕೊಳ್ಳಿ ,.ಸದರಿ ರೈಲ್ವೆಯ ಅನುಕೂಲವನ್ನು ನಮ್ಮ ಉತ್ತರ ಕರ್ನಾಟಕದ ಜನರು , ಮಲೆನಾಡಿನ ಜನರು , ದಕ್ಷಿಣ ಕನ್ನಡದ ಜನರು ಸಂಭ್ರಮಿಸುವ ವಿಷಯ !

ಬಿಜಾಪುರದಿಂದ ಮಂಗಳೂರಿಗೆ ರೈಲ್ವೆ :  ಇದು ಬಾಗಲಕೋಟ, ಬಾದಾಮಿ, ಹೊಳೆ ಆಲೂರ,ಗದಗ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ಅರಸೀಕೆರೆ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಮಾರ್ಗವಾಗಿ ಮಂಗಳೂರು ತಲುಪಲಿದೆ.ಇದು ಪ್ರಾರಂಭವಾದಾಗಿನಿಂದ ಗಾಡಿಯು ಖಾಲಿನೆ ಹೋಗುತ್ತಿದೆ.ಆದರೆ ಈ ಗಾಡಿಯ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ಇರುವುದಿಲ್ಲ ಆದ್ದರಿಂದ ಹೆಚ್ಚಿನ ಜನರಿಗೆ ತಲುಪುವವರೆಗೂ ಎಲ್ಲರಿಗೂ ಶೇರ್ ಮಾಡಿ.ಗಾಡಿ ಸಂಖ್ಯೆ 07377 Bo 07378.

LEAVE A REPLY

Please enter your comment!
Please enter your name here