ಒಕ್ಕಲಿಗ ಸಂಘದ ಚುನಾವಣೆ ಡಿ.12ಕ್ಕೆ ; ವೇಳಾಪಟ್ಟಿ ಬಿಡುಗಡೆ

0

ಹಾಸನ, ನ. : ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ ಹಾಸನ ಜಿಲ್ಲಾ ಕ್ಷೇತ್ರದಿಂದ  03 ಸ್ಥಾನಗಳಿಗೆ ಚುನಾವಣೆಯನ್ನು ನಡೆಸಲು ಏ.8 ರಿಂದ ಏ.19 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಆದರೆ ಚುನಾವಣಾಧಿಕಾರಿಗಳ ನಿರ್ದೇಶನದ ಮೇರೆಗೆ ಕೋವಿಡ್ ಕಾರಣದಿಂದ ಚುನಾವಣಾ ಪ್ರಕ್ರಿಯೆಯನ್ನು ಮುಂದೂಡಲಾಗಿತ್ತು.
  ಸಂಘದ ಕಾರ್ಯಕಾರಿ ಸಮಿತಿಗೆ ಹಾಸನ ಜಿಲ್ಲಾ ಕ್ಷೇತ್ರದಿಂದ 03 ಸ್ಥಾನಗಳಿಗೆ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಮುಂದಿನ ಐದು ವರ್ಷಗಳ ಅವಧಿಗೆ ಆಯ್ಕೆ ಮಾಡಲು ಡಿ.12  ರಂದು ಚುನಾವಣೆ ಜರುಗಿಸಲು ಕೆಳಕಂಡಂತೆ ಮುಂದುವರಿದ ಚುನಾವಣಾ ವೇಳಾಪಟ್ಟಿಯನ್ನು ಈ ಮೂಲಕ ಪ್ರಕಟಿಸಲಾಗಿರುತ್ತದೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಉಮೇದುವಾರರು ನಾಮಪತ್ರವನ್ನು ಸಲ್ಲಿಸಲು ನಿಗದಿಪಡಿಸಿ ಅವಧಿ ದಿನಾಂಕ ವೇಳೆ ಮತ್ತು ಸ್ಥಳ, ನ.15  ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ, ಸಹಕಾರ ಸಂಘಗಳ ಉಪನಿಬಂಧಕರು, ಹಾಸನ ರವರ ಕಛೇರಿಯಲ್ಲಿ, ಜಿಲ್ಲಾ ಚುನಾವಣಾಧಿಕಾರಿಯವರಿಗೆ  ಅಥವಾ ಅವರಿಂದ ಅಧಿಕಾರ ಪಡೆದವರಿಗೆ, ಮುಕ್ತಾಯ: ನ.23 ರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ (ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ).
ನಾಮಪತ್ರಗಳ ಪರಿಶೀಲನೆಯನ್ನು ನ.24 ರಂದು ಬೆಳಿಗ್ಗೆ 11 ರಿಂದ ಜಿಲ್ಲಾ ಚುನಾವಣಾಧಿಕಾರಿಯವರಿಂದ   ಉಪನಿಬಂಧಕರ  ಕಛೇರಿಯಲ್ಲಿ ಪರಿಶೀಲಿಸಲಾಗುವುದು.
ಕ್ರಮಬದ್ದ ಉಮೇದುವಾರರ ಪಟ್ಟಿ ಪ್ರಕಟಣೆಯನ್ನು ನ.24 ರಂದು  ಬೆಳಿಗ್ಗೆ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಂತರ ಜಿಲ್ಲಾ ಚುನಾವಣಾಧಿಕಾರಿಯವರಿಂದ   ಉಪನಿಬಂಧಕರ  ಕಛೇರಿಯ ಸೂಚನಾ ಫಲಕದಲ್ಲಿ ಪ್ರಕಟಣೆಯಾಗಲಿದೆ.
ನಾಮಪತ್ರಗಳನ್ನು ವಾಪಸ್ಸು ಪಡೆಯಲು ಕೊನೆಯ ದಿನಾಂಕ ಮತ್ತು ವೇಳೆ ನ.25 ರಂದು  ಮಧ್ಯಾಹ್ನ 3 ಗಂಟೆಯೊಳಗೆ, ಜಿಲ್ಲಾ ಚುನಾವಣಾಧಿಕಾರಿಯವರಿಗೆ  ಅಥವಾ ಅವರಿಂದ ಅಧಿಕಾರ ಪಡೆದವರಿಗೆ  – ಉಪನಿಬಂಧಕರ ಕಛೇರಿಯಲ್ಲಿ ಸಲ್ಲಿಸುವುದು.
ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆಯನ್ನು ನ.25 ರಂದು ಗುರುವಾರ, ಉಮೇದುವಾರರಿಗೆ ಚುನಾವಣಾ ಚಿಹ್ನೆಗಳ ಹಂಚಿಕೆ, ಮಧ್ಯಾಹ್ನ 3 ರ ನಂತರ, ಜಿಲ್ಲಾ ಚುನಾವಣಾಧಿಕಾರಿಯವರಿಂದ – ಉಪನಿಬಂಧಕರ ಕಛೇರಿಯಲ್ಲಿ, ನ.26 ರ ಶುಕ್ರವಾರ ಪೂರ್ವಾಹ್ನ 11 ಗಂಟೆಯಿಂದ, ಜಿಲ್ಲಾ ಚುನಾವಣಾಧಿಕಾರಿಯವರಿಂದ – ಉಪನಿಬಂಧಕರ ಕಚೆÉೀರಿಯಲ್ಲಿ, ಅಗತ್ಯ ಬಿದ್ದಲ್ಲಿ ಮತದಾನ ನಡೆಸುವ ದಿನಾಂಕ, ಸಮಯ,  ಮತ್ತು ಸ್ಥಳ, ಡಿ.12 ರ ಭಾನುವಾರ ಪೂರ್ವಾಹ್ನ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ, ನಿಗದಿಪಡಿಸಿದ ಸ್ಥಳಗಳು ತಾಲ್ಲೂಕುವಾರು, ಹಾಸನ, ಸರ್ಕಾರಿ ಕಲಾ ವಾಣಿಜ್ಯ ಮತ್ತು  ಸ್ನಾತಕೋತ್ತರ ಕಾಲೇಜು, (ಸ್ವಾಯತ್ತ), ಆರ್.ಸಿ. ರಸ್ತೆ, ಹಾಸನ. ಚನ್ನರಾಯ ಪಟ್ಟಣ, ನವೋದಯ ವಿದ್ಯಾ ಸಂಘ, ಹಾಸನ ರಸ್ತೆ, ಚನ್ನರಾಯಪಟ್ಟಣ
ಸರ್ಕಾರಿ ಪ್ರೌಢಶಾಲೆ,(ಹೊಸದು) ಬಿ.ಇ.ಓ ಕಛೇರಿ ಹಿಂಭಾಗ,  ಚನ್ನರಾಯಪಟ್ಟಣ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು, ಚನ್ನರಾಯಪಟ್ಟಣ
ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು (ಕಲಾ ವಾಣಿಜ್ಯ, ಮತ್ತು ವಿಜ್ಞಾನ ವಿಭಾU, ಚನ್ನರಾಯಪಟ್ಟಣ, ಹೊಳೆನರಸೀಪುರ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಚನ್ನಾಂಬಿಕಾ ರಸ್ತೆ, ಹೊಳೆನರಸೀಪುರ, ಅರಸೀಕೆರೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ  & ಸರ್ಕಾರಿ ಉರ್ದು ಹಿರಿಯ  ಪ್ರಾಥಮಿಕ ಪಾಠಶಾಲೆ,  ಹುಳಿಯಾರು ರಸ್ತೆ,  ಅರಸೀಕೆರೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ,  ಬಿ.ಇ.ಓ ಆಫೀಸ್ ಪಕ್ಕ, ಬಿ.ಎಂ.ರಸ್ತೆ, ಆಲೂರು, ಆಲೂರು, ಬೇಲೂರು, ಸರ್ಕಾರಿ ಬಾಲಕರ ಹಿರಿಯ ಪ್ರಾಥಮಿಕ ಪಾಠಶಾಲೆ, ಬೇಲೂರು,
ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಪಾಠಶಾಲೆ, ಬೇಲೂರು, ಅರಕಲಗೂಡು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಅರಕಲಗೂಡು, ಸಕಲೇಶಪುರ, ಸರ್ಕಾರಿ ಪದವಿ ಪೂರ್ವ ಕಾಲೇಜು, ಬಿ.ಎಂ. ರಸ್ತೆ,  ಸಕಲೇಶಪುರ, ಮತಗಳ ಎಣಿಕೆ, ಡಿ.12 ರ ಬುಧವಾರ ಪೂರ್ವಾಹ್ನ 09 ಗಂಟೆಯಿಂದ ಎಣಿಕೆ ಮುಗಿಯುವ ತನಕ, ಸರ್ಕಾರಿ ಕಲಾ  ವಾಣಿಜ್ಯ ಮತ್ತು  ಸ್ನಾತಕೋತ್ತರ ಕಾಲೇಜು, (ಸ್ವಾಯತ್ತ), ಆರ್.ಸಿ. ರಸ್ತೆ, ಹಾಸನ.  – ಇಲ್ಲಿ, ಚುನಾವಣಾ ಫಲಿತಾಂಶ ಘೋಷಣೆ, ಡಿ15 ರ ಬುಧವಾರ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸರ್ಕಾರಿ ಕಲಾ  ವಾಣಿಜ್ಯ ಮತ್ತು  ಸ್ನಾತಕೋತ್ತರ ಕಾಲೇಜು, (ಸ್ವಾಯತ್ತ), ಆರ್.ಸಿ. ರಸ್ತೆ, ಹಾಸನ.  ಜಿಲ್ಲಾ ಚುನಾವಣಾಧಿಕಾರಿಗಳಿಂದ ಮುಕ್ತಾಯ :
ಚುನಾವಣಾ ಸೂಚನೆಗಳು: ಸಂಘದ ನಿಬಂಧನೆ 7(1)ಅ ರನ್ವಯ 11 ಜಿಲ್ಲಾ ಕ್ಷೇತ್ರಗಳಿಂದ 35 (ಮೂವತ್ತೈದು) ಸ್ಥಾನಗಳಿಗೆ ಸದಸ್ಯರನ್ನು ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಗೆ 5 ವರ್ಷಗಳ ಅವಧಿಗಾಗಿ ಚುನಾಯಿಸಬೇಕಾಗಿದ್ದು, ಈ ಪೈಕಿ ಹಾಸನ  ಜಿಲ್ಲಾ ಕ್ಷೇತ್ರದಿಂದ 03 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು.
ಉಮೇದುವಾರರಾಗಿ ಸ್ಪರ್ಧಿಸಲಿಚ್ಚಿಸುವ ಸದಸ್ಯರು ನಾಮಪತ್ರದ ಜೊತೆಯಲ್ಲಿ ರೂ.10,000/- (ರೂ. ಹತ್ತು ಸಾವಿರ ಮಾತ್ರ) ಗಳ ಚುನಾವಣಾ ಠೇವಣಿಯನ್ನು ಡಿಮ್ಯಾಂಡ್‍ಡ್ರಾಫ್ಟ್ / ಬ್ಯಾಂಕರ್ಸ್‍ಚೆಕ್ ರೂಪದಲ್ಲಿ “ರಾಜ್ಯಒಕ್ಕಲಿಗರ ಸಂಘ, ಬೆಂಗಳೂರು”, ಹೆಸರಿಗೆ ಪಡೆದು ನಾಮಪತ್ರದೊಂದಿಗೆ ಅದರ ಮೂಲ ಪ್ರತಿಯನ್ನು ಲಗತ್ತಿಸುವುದು.  ಚುನಾವಣಾ ಠೇವಣಿಯನ್ನು ಸಂದಾಯ ಮಾಡದ ನಾಮಪತ್ರಗಳನ್ನು ತಿರಸ್ಕರಿಸಲಾಗುತ್ತದೆ.
ಒಬ್ಬ ಅರ್ಹ ಸದಸ್ಯನು ಒಬ್ಬ ಉಮೇದುವಾರನ ಉಮೇದುವಾರಿಕೆಯನ್ನು ಮಾತ್ರ ಸೂಚಿಸತಕ್ಕದ್ದು.  ಒಂದಕ್ಕಿಂತ ಮೇಲ್ಪಟ್ಟು ಉಮೇದುವಾರರನ್ನು ಸೂಚಿಸಿದ್ದಲ್ಲಿ, ಮೊದಲು ಸೂಚಿಸಿದ ಉಮೇದುವಾರನ ನಾಮಪತ್ರವನ್ನು ಅಂಗೀಕರಿಸಿ, ಉಳಿದ ನಾಮಪತ್ರಗಳನ್ನು ತಿರಸ್ಕರಿಸಲಾಗುವುದು.
ಉಮೇದುವಾರಿಕೆ ಅರ್ಜಿ ಹಾಗೂ ಉಮೇದುವಾರಿಕೆಯನ್ನು ವಾಪಸ್ಸು ಪಡೆಯಲಿಚ್ಚಿಸುವ ನೋಟೀಸನ್ನು ಜಿಲ್ಲಾ ಕ್ಷೇತ್ರ ಚುನಾವಣಾಧಿಕಾರಿಗೆ ಅಥವಾ ಅವರಿಂದ ಅಧಿಕೃತವಾಗಿ, ಈ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಅಧಿಕಾರಿಗೆ ಖುದ್ದಾಗಿ ಸಲ್ಲಿಸುವುದು.
ಹಿಂದಿನ ಅಧಿಸೂಚನೆ ರೀತ್ಯಾ ಈಗಾಗಲೇ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳು ಪರಿಷ್ಕøತ ಚುನಾವಣಾ ಅಧಿಸೂಚನೆ ಅನ್ವಯ ನಾಮಪತ್ರ ಸಲ್ಲಿಸಲು ನಿಗದಿಗೊಳಿಸಿರುವ ಅಂತಿಮ ನ.23 ರ ಮಂಗಳವಾರ ಮಧ್ಯಾಹ್ನ 3 ಗಂಟೆ ಮುಕ್ತಾಯವಾಗು ಒಳಗೆ ಚುನಾವಣಾ ಠೇವಣಿಯಗಿ ಈಗಾಗಲೇ ಸಲ್ಲಿಸಿರುವ ರೂ. 10000 ಗಳ ಡಿಮ್ಯಾಂಡ್ ಡ್ರಾಫ್ಟ್ / ಬ್ಯಾಂಕರ್ಸ್ ಚೆಕ್ ಅನ್ನು ಚುನಾವಣಾಧಿಕಾರಿಗಳಿಂದ ಹಿಂಪಡೆದು ಡಿ.ಡಿ. ದಿನಾಂಕ: ಮುಕ್ತಾಯವಾಗಿರುವುದರಿಂದ ಅದನ್ನು ರಿ-ವ್ಯಾಲಿಡೇಟ್ ಮಾಡಿಸಿ ಕಡ್ಡಾಯವಾಗಿ ಚುನಾವಣಾಧಿಕಾರಿಗಳಿಗೆ ಮರು ಸಲ್ಲಿಸತಕ್ಕದ್ದು. ರಿ-ವ್ಯಾಲಿವೇಟ್ ಮಾಡಿಸಿಕೊಡದ ಅಭ್ಯರ್ಥಿಗಳ ನಾಮಪತ್ರಗಳನ್ನು ಪರಿಶೀಲನೆಗೆ ಪರಿಗಣಿಸಲಾಗುವುದಿಲ್ಲ.   
ಸಂಘದಿಂದ ಪಡೆದಿರುವ ಕಂಪ್ಯೂಟರೈಸ್ಡ್ ಭಾವಚಿತ್ರವಿರುವ ಗುರುತಿನ ಕಾರ್ಡ್ ಹೊಂದಿರುವ ಮತದಾರರು ಮತ ಚಲಾಯಿಸಲು ಅವಕಾಶ ಇರುತ್ತದೆ. ಗುರುತಿನ ಕಾರ್ಡ್‍ನಲ್ಲಿರುವ ಭಾವಚಿತ್ರವು ಸಂಘ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಗೆ ತಾಳೆಯಾಗತಕ್ಕದ್ದು. ಮತದಾರರ ಪಟ್ಟಿಯೊಂದಿಗೆ ತಾಳೆಯಾಗುವ ಗುರುತಿನ ಕಾರ್ಡ್ ಅನ್ನು ಚುನಾವಣಾ ಸಿಬ್ಬಂದಿಗೆ ಕಡ್ಡಾಯವಾಗಿ ಮತದಾನದ ಸಂದರ್ಭದಲ್ಲಿ ಹಾಜರುಪಡಿಸತಕ್ಕದ್ದು. 
ಪ್ರಸ್ತುತ ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಚುನಾವಣೆಯ ಎಲ್ಲಾ ಹಂತಗಳಲ್ಲಿಯೂ ಕೋವಿಡ್ ನಿಯಮಗಳ ಪಾಲನೆಯನ್ನು ಕಡ್ಡಾಯಗೊಳಿಸಿದ್ದು, ಮುಖಗವಸು ಮತ್ತು ಸಾಮಾಜಿಕ ಅಂತರ ಕಾಪಾಡಿಕೊಂಡು ಚುನಾವಣಾ ಕಾರ್ಯದಲ್ಲಿ ನಿರತರಾಗುವುದು.
ಕೋವಿಡ್ ಪಾಸಿಟಿವ್ ಹೊಂದಿರುವ ಮತದಾರರಿಗೆ ಪ್ರತ್ಯೇಕ ವ್ಯವಸ್ಥೆಯೊಂದಿಗೆ ಅವರವರ ನಿಗಧಿತ ಮತಕೇಂದ್ರದಲ್ಲಿಯೇ ಮತದಾನ ಮಾಡಲು ಚುನಾವಣಾ ದಿನಾಂಕದಂದು ಮಧ್ಯಾಹ್ನ 4 ರಿಂದ 5 ರವರೆಗೆ ಸಮಯವನ್ನು ನಿಗಧಿಪಡಿಸಲಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಚುನಾವಣಾಧಿಕಾರಿ, ರಾಜ್ಯ ಒಕ್ಕಲಿಗರ ಸಂಘ  ಹಾಸನ ಹಾಗೂ ಸಹಕಾರ ಸಂಘಗಳ ಉಪನಿಬಂಧಕರು, ಹಾಸನ ಇವರ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು  ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here