Alur

ಏಡ್ಸ್‌ ಬಗ್ಗೆ ಜಾಗೃತಿ ಮೂಡಿಸಲು ಮಕ್ಕಳ ಜಾತಾದೊಂದಿಗೆ ವಿಶ್ವ ಏಡ್ಸ್ ದಿನಾಚರಣೆ.

By Hassan News

December 01, 2022

ಪ್ರತೀ ವರ್ಷ ಡಿಸೆಂಬರ್ 1 ರಂದು ವಿಶ್ವ ಏಡ್ಸ್‌ ದಿನಿತಿಚರಿಕೆಯನ್ನು ಆಚರಿಸುತ್ತಿದ್ದು, ಅದರ ಸಲುವಾಗಿ ಸಕಲೇಶಪುರ ತಾಲ್ಲೂಕಿನ ಬ್ಯಾಕರವಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಒಗ್ಗೂಡುವುಕೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವ್ಯಾಕರವಳ್ಳಿ ಸರ್ಕಲ್‌ವರೆಗೂ ಘೋಷ ವಾಕ್ಯದೊಂದಿಗೆ ಎಲ್ಲಾ ಮಕ್ಕಳು ಜಾತಾ ನಡೆಸಿದರು.

ಈ ಕಾರ್ಯಕ್ರದಲ್ಲಿ ಶಾಲೆಯ ಪ್ರಾಂಶುಪಾಲರಾದ ಶತೇಂದ್ರಕುಮಾರ್ ಪಿ.ಬಿರವರು ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ಹಾಗೆಯೇ ಕಾರ್ಯಕ್ರಮದ ನಿರೂಪಣೆಯನ್ನು ವಿಜ್ಞಾನ ಶಿಕ್ಷಕಿಯಾದ ಶೃತಿರವರು ನಡೆಸಿಕೊಟ್ಟರು. ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಯನ್ನು ಅಭಿಷೇಕ್ ಹೆಚ್. ವಿಜ್ಞಾನ ಶಿಕ್ಷಕರು ನಡೆಸಿಕೊಟ್ಟರು. ತದನಂತರದಲ್ಲಿ ಮಕ್ಕಳಿಂದ ಏಡ್ಸ್‌ದಿನದ ಉದ್ದೇಶವನ್ನು ವಿಷಯ ಮಂಡನೆ ಮಾಡುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಈ ಕಾರ್ಯಕ್ರಮದಲ್ಲಿ

ಸಂಪನ್ಮೂಲ ವ್ಯಕ್ತಿಯಾಗಿ ದಿನೇಶ್ ಕುಮಾರ ಎಂ.ಎಸ್.ರವರು ಹಾಜರಿದ್ದು, ವಿಶ್ವ ಏಡ್ಸ್ ದಿನದ ಆಚರಣೆಯ ಬಗೆಗೆ ಸವಿಸ್ತಾರವಾಗಿ ಮಾಹಿತಿಯನ್ನು ತಿಳಿಸಿಕೊಟ್ಟರು. ಮಂಜುನಾಥ ವೈ.ಎನ್, ಆಂಗ್ಲಭಾಷಾ ಶಿಕ್ಷಕರು ಇವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಿಂದ ಏಡ್ಸ್ ರೋಗದ ಲಕ್ಷಣಗಳು, ಹರಡುವ ರೀತಿ, ತಡೆಗಟ್ಟುವ ಕಾರ್ಯಕ್ರಮಗಳನ್ನು ನಾಟಕದ ಮೂಲಕ ಪ್ರದರ್ಶಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಉಪಸ್ಥಿತರಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಸಾಗಲು ಕಾರಣಕರ್ತರಾದರು. ನಂತರದಲ್ಲಿ ಪ್ರಾಂಶುಪಾಲರ ಅಧ್ಯಕ್ಷೀಯ ನುಡಿಯೊಂದಿಗೆ ಕಾರ್ಯಕ್ರಮಕ್ಕೆ ವಿರಾಮವನ್ನು ನೀಡಲಾಯಿತು.