Sakleshpur

ಎದೆ ಒಡೆದ ನೋವುಗಳು , ಕುಮ್ಶನ್ ಡೈಶಿನ್ ರವರಿಂದ

By Hassan News

January 05, 2023

ಲೇಖಕರ ಪರಿಚಯ

ಹಾಸನ ಜಿಲ್ಲೆಯ, ಸಕಲೇಶಪುರ ತಾಲ್ಲೂಕಿನ ಪುಟ್ಟ ಗ್ರಾಮ ಇಬ್ಬಡಿ ಕೊಣ್ಣೂರು ಇವರದು. ತಂದೆ ಕುಮಾರ್, ತಾಯಿ ಮನೆಯ ಮೊದಲನೆಯ ಮಗನಾಗಿ ಹುಟ್ಟಿದರು, ಕುಮ್ಸನ್ ಡೈಶಿನ್ ರವರು ಚಿಕ್ಕ ವಯಸ್ಸಿನಿಂದ ಬರವಣಿಗೆಯ ಕಡೆಗೆ ಒಲವು ಹರಿಸುತ್ತಿದ್ದರು. ಇವರು ಎಂ.ಕಾಂ., ಮುಗಿಸಿದ್ದಾರೆ. ವಿದ್ಯಾಭ್ಯಾಸದ ಜೊತೆಗೆ ಕವನ ಕವಿತೆಗಳನ್ನು ಬರೆಯುವ ಹವ್ಯಾಸ ಇವರದು. ಆದುದರಿಂದ ಬರೆಯುವ ಕಲೆಗೆ ಗೌರವಿಸಿ ಇವರು ಸಾಹಿತ್ಯದ ಕಡೆ ಗಮನ ಹರಿಸಿ ಈಗ ಇವರ ಮೊದಲ ಕೃತಿ “ಎದೆ ಒಡೆದ ನೋವುಗಳು” ಎಂಬ ಪುಸ್ತಕವನ್ನು ಬಿಡುಗಡೆ ಮಾಡಲು ಇಚಿಸಿದರು.

ಇಲ್ಲಿ ದಲಿತ ಧರ್ಮ, ಎದೆ ಒಡೆದ ನೋವುಗಳು, ಮಾನವ ಧರ್ಮ ನಿಯಮಗಳು ಹಾಗೂ ಅಂಬೇಡ್ಕರ್ ಇಲ್ಲದಿದ್ದರೆ ಎಂಬ ಚಿಂತನೆಗಳನ್ನು ವಿವರಣೆಯೊಂದಿಗೆ ಬರೆದಿದ್ದಾರೆ. ನಾನು ಈ ಪುಸ್ತಕವನ್ನು ಓದಿದ ನಂತರ ಇವರು ಬರೆದಿರುವ ಅಂಬೇಡ್ಕರ್

https://youtu.be/UwyjkgEloQM

ಇಲ್ಲದಿದ್ದರೆ ಎಂಬ ಚಿಂತನೆಯು ಹಾಗೂ ಮಾನವ ಧರ್ಮ ನಿಯಮಗಳು ಎಂಬ ಚಿಂತನೆಗಳು ನನಗೆ ಹೊಸ ಅನುಭವವನ್ನು ನೀಡಿದವು. ನಾನು ಮಾನವ ಧರ್ಮ ನಿಯಮಗಳು ಇವರ ಕಲ್ಪನೆಗಳು ತುಂಬ ಮಾನವೀಯತೆಗಳನ್ನು ತುಂಬಿಕೊಂಡಿವೆ. ಯಾವುದೇ ಧರ್ಮ, ಜಾತಿ, ಸಮುದಾಯಗಳನ್ನು ದ್ವೇಷಿಸದೆ ಎಲ್ಲರೂ ಸಮಾನರು, ಎಲ್ಲರೂ ಮಾನವರಂತೆ ಬದುಕೋ ಎಂಬ ಇವರ ಸಂದೇಶ ಜನರನ್ನು ಹೆಚ್ಚು ಸೆಳೆಯುತ್ತದೆ. ಅಂಬೇಡ್ಕ‌ವಾದಿಯಾದ ಕುಮ್ಹನ್ ಡೈಶಿನ್‌ರವರು ಸದಾ ಮಾನವ ಕುಲದ ಉತ್ತಮ ಚಿಂತನೆಗಳನ್ನು ಹಾಗೂ ಸದಾ ಎಲ್ಲರಿಗೂ ಉತ್ತಮ ವಿಚಾರಗಳಿಗೆ ಹುರಿದುಂಬಿಸುವ ಸ್ವಭಾವ ಇವರದು.

ಲೇಖಕರು. ಅಸ್ಪೃಶ್ಯತೆಯನ್ನು ಎದೆಗೆ ಅಪ್ಪಿಕೊಳ್ಳಬಾರದು ಎಂದು ಹೇಳುವ ಬರವಣಿಗೆ ತುಂಬ ಹಿತವಾಗಿದೆ, ಇವರ ಬರವಣಿಗೆಯಲ್ಲಿ ಸ್ವಾಭಿಮಾನ ತುಂಬಿದೆ. ಇವರ ಬರವಣಿಗೆ ಹೀಗೆ ಸಾಗುತ್ತಿರಲಿ ಎಂಬುದು ನನ್ನ ಮನದಾಸೆ,

ಎಂ.ಆರ್. ನಗು ಭಾರತೀಯ ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು, ಸಕಲೇಶಪುರ