ಯೋಗ ತರಬೇತಿದಾರರಿಗೆ ಉದ್ಯೋಗ ✅ ಫೆ.22 ರಿಂದ 26 ವರೆಗೆ ಹಾಸನ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ಹೊಸಲೈನ್ ರಸ್ತೆ ಕಛೇರಿಯಲ್ಲಿ ಸಂದರ್ಶನ ( ಹೆಚ್ಚಿನ ಮಾಹಿತಿ ) 👇

0

ಹಾಸನ : (ಹಾಸನ್_ನ್ಯೂಸ್ !, ಫೆ18 ; ಆಯುಷ್ಮಾನ್ ಭಾರತ ಯೋಜನೆಯಡಿಯಲ್ಲಿ ಅಭಿವೃದ್ಧಿ ಪಡಿಸಿರುವ ಆರ್ಯುರ್ವೇದ ಕ್ಷೇಮ ಕೇಂದ್ರಗಳಿಗೆ ಯೋಗ ತರಬೇತಿದಾರರ ಭರ್ತಿ ಮಾಡಿಕೊಳ್ಳಲು ಫೆ.22 ರಿಂದ 26 ವರೆಗೆ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ಹೊಸಲೈನ್ ರಸ್ತೆ, ಹಾಸನದಲ್ಲಿ  ಸಂದರ್ಶನ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ತಿಳಿಸಿದ್ದಾರೆ.
  ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಉತ್ತೀರ್ಣರಾಗಿರಬೇಕು ಯೋಗ ಬೋಧಕ ಕೋರ್ಸ್ ಪ್ರಮಾಣಪತ್ರ, ಅಥವಾ ಪ್ರತಿಷ್ಠಿತ ಯೋಗ ತರಬೇತಿ ಸಂಸ್ಥೆ ಮೂಲಕ ಅನುಭವದ ಆದ್ಯತೆ ಇರಬೇಕು, ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ಯೋಗ ತರಬೇತಿದಾರರಿಗೆ ರೂ.8 ಸಾವಿರ ಮಾಸಿಕ ಸಂಬಾವನೆ ನೀಡಲಾಗುವುದು ಯಾವುದೇ ರೀತಿಯ ಮೀಸಲಾತಿ ಇರುವುದಿಲ್ಲ ಎಲ್ಲಾ ವರ್ಗದವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಹಾಸನ ತಾಲ್ಲೂಕಿನ ಮೆಳಗೋಡು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ 2 ಹುದ್ದೆ, ಹೊಳೆನರಸೀನಪುರ ತಾಲ್ಲೂಕಿನ ಮಾವನೂರು ಸರ್ಕಾರಿ ಆಯುವೇದ ಚಿಕಿತ್ಸಾಲಯದಲ್ಲಿ 2 ಹುದ್ದೆ, ಅರಸೀಕೆರೆ ತಾಲ್ಲೂಕಿನ ಕುರಾದಹಳ್ಳಿ ಸರ್ಕಾರಿ ಆಯುವೇದ ಚಿಕಿತ್ಸಾಲಯದಲ್ಲಿ 1 ಹುದ್ದೆಗೆ ಖಾಲಿ ಇದ್ದು ಯೋಗ ತರಬೇತಿದಾರರನ್ನು ನೇಮಕಾತಿ ಮಾಡಲಾಗುವುದು.
ವಯೋಮಿತಿ ಕನಿಷ್ಠ 21 ಗರಿಷ್ಠ 60 ವರ್ಷವಾಗಿರಬೇಕು, ಆಸಕ್ತ ಸ್ಥಳೀಯ ಅಭ್ಯರ್ಥಿಗಳು ಸಂದರ್ಶನದಲ್ಲಿ ನೇರವಾಗಿ ಭಾಗವಹಿಸಬಹುದಾಗಿದೆ. ಅಭ್ಯರ್ಥಿಗಳು ಸ್ವವಿವರಗಳೊಂದಿಗೆ ಎಸ್.ಎಸ್.ಎಲ್.ಸಿ , ಪಿ.ಯು.ಸಿ, ಆಧಾರ್ ಕಾರ್ಡ್ ಹಾಗೂ ತರಬೇತಿ ಅಥವಾ ಅನುಭವ ಪ್ರಮಾಣ ಪತ್ರದ ಮೂಲ ಪ್ರತಿಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಜಿಲ್ಲಾ ಆಯುಷ್ ಕಚೇರಿಯ ದೂ.ಸಂ 08172-272272 ಗೆ ಸಂಪರ್ಕಿಸಬಹುದಾಗಿದೆ – ಹಾಸನ ಜಿಲ್ಲಾ ಆಯುಷ್

LEAVE A REPLY

Please enter your comment!
Please enter your name here