ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಆಹ್ವಾನ

0

ಜಿಲ್ಲಾ ಯುವಜನೋತ್ಸವಕ್ಕೆ ಆಯ್ಕೆ
ಹಾಸನ, ನ.25: ಪ್ರತಿ ವರ್ಷದಂತೆ ನಡೆಯುವ ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮ ದಲ್ಲಿ ಕರ್ನಾಟಕ ರಾಜ್ಯ ತಂಡ ಭಾಗವಹಿಸಲಿದ್ದು, ಈ ಸ್ಫರ್ಧೆಯಲ್ಲಿ ಭಾಗವಹಿಸುವ ತಂಡವನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ನಂತರ ರಾಜ್ಯ ಮಟ್ಟಕ್ಕೆ ಕಳುಹಿಸಬೇಕಾಗಿರುತ್ತದೆ. ಹಾಸನ ಜಿಲ್ಲಾ ಮಟ್ಟದ ಯುವಜನೋತ್ಸವ ಆಯ್ಕೆಯನ್ನು ಡಿ.6 ಮತ್ತು ಡಿ.7 ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಸನ ಇವರ ಆಶ್ರಯದಲ್ಲಿ ಬೆ. 9 ಗಂಟೆಯಿಂದ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ನಡೆಸಲಾಗುತ್ತಿದ್ದು, ಈ ಯುವಜನೋತ್ಸವದಲ್ಲಿ ಹಾಸನ ಜಿಲ್ಲೆಯ 15 ರಿಂದ 29 ವರ್ಷ ಒಳಪಟ್ಟ ಎಲ್ಲಾ ಯುವಕ ಸಂಘ/ಯುವತಿ ಮಂಡಳಿ/ಮಹಿಳಾ ಸಮಾಜ/ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಲು ಅರ್ಹರಾಗಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಫರ್ಧಿಗಳು ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಸ್ಫರ್ಧಿಗಳು ಕಡ್ಡಾಯವಾಗಿ ತಮ್ಮ ಜನ್ಮ ದಿನಾಂಕದ ದೃಡೀಕರಣದ ಬಗ್ಗೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿ/ ಶಾಲೆಯ ಮುಖ್ಯೋಪಾದ್ಯಾರು ನೀಡಿದ ಜನ್ಮ ದಿನಾಂಕದ ಪ್ರಮಾಣ ಪತ್ರ, ಕೋವಿಡ್-19ರ ಲಸಿಕೆ ಪ್ರಮಾಣ ಪತ್ರ ತರತಕ್ಕದ್ದು.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಯಾವುದೇ ರೀತಿಯ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಕೋವಿಡ್-19 ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಮಾತ್ರ ಪ್ರವೇಶವಿದೆ. ಮದ್ಯಾಹ್ನ ಊಟದ ವ್ಯವಸ್ಥೆ ಇರುತ್ತದೆ.
ಈ ಸ್ಫರ್ಧೆಯಲ್ಲಿ ನಿಮ್ಮ ಸಂಸ್ಥೆಯಿಂದ ಕೆಳಕಂಡ ಸ್ಫರ್ಧೆಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸ್ಫರ್ದಿಗಳನ್ನು ಕಳುಹಿಸಿ ಕೊಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳಲು ಡಿ.4 ಕೊನೆಯ ದಿನವಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಯುವಜನೋತ್ಸವದಲ್ಲಿ ನಡೆಸುವ ಸ್ಪರ್ಧೆಗಳ ವಿವರ:- ಶಾಸ್ತ್ರೀಯ ಸಂಗೀತ ವಾದ್ಯ. 5 ನಿಮಿಷ, 01 ವೈಯಕ್ತಿಕ. ಶಾಸ್ತ್ರೀಯ ಸಂಗೀತ ಗಾಯನ, 7 ನಿಮಿಷ 01 ವೈಯಕ್ತಿಕ. ಜನಪದ ಗೀತೆ ತಂಡ ಪ್ರದರ್ಶ£,À 08 ನಿಮಿಷ, 4-8 ಜನರು. ಭಾರತೀಯ ಸಂಗೀತ-ವಾದ್ಯಗೋಷ್ಠಿ 4 ನಿಮಿಷ, 06 ಜನರು. ಭರತನಾಟ್ಯ 10 ನಿಮಿಷ, 01 ವೈಯಕ್ತಿಕ. ಕಥಕ್ 10 ನಿಮಿಷ, 01 ವೈಯಕ್ತಿಕ. ಕಥಕ್ಕಳಿ 15 ನಿಮಿಷ, 01 ವೈಯಕ್ತಿಕ. ಜನಪದ ನೃತ್ಯ ತಂಡ ಪ್ರದರ್ಶನ 8 ನಿಮಿಷ, 4-8 ಜನರು. ಸಿನಿಮಾ ಕಾಂಟೆಂಪರರಿ ನೃತ್ಯ 10 ನಿಮಿಷ, 01 ವೈಯಕ್ತಿP.À ಸಿನಿಮಾ ಕಾಂಟೆಂಪರರಿ ನೃತ್ಯ ತಂಡ 8 ನಿಮಿಷ, 4-8 ಜನರು.

ಸಾಂಪ್ರದಾಯಿಕ ವಸ್ತ್ರ ವಿನ್ಯಾಸ- ಸನ್ನಿವೇಶಕ್ಕೆ ತಕ್ಕಂತೆ 2 ಗಂಟೆ, 1 ಪುರುಷ 1 ಮಹಿಳೆ. ನವೀನ ವಸ್ತ್ರ ವಿನ್ಯಾಸ- ಸನ್ನಿವೇಶಕ್ಕೆ ತಕ್ಕಂತೆ 2 ಗಂm,É 1 ಪುರುಷ 1 ಮಹಿಳೆ. ರಂಗ ಕಲೆ ತಂಡ ನಾಟಕ(ಕನ್ನಡ, ಹಿಂದಿ/ಇಂಗ್ಲಿಷ್) 4 ನಿಮಿಷ, 4-8 ಜನರು. ದೃಶ್ಯ ಕಲೆ-ಪೆನ್ಸಿಲ್ ಸ್ಕೆಚ್ 2 ಗಂm,É 01 ವೈಯಕ್ತಿಕ. ದೃಶ್ಯ ಕಲೆ- ವಾಟರ್ ಪೈಟಿಂಗ್ 2 ಗಂm,É 01 ವೈಯಕ್ತಿಕ. ದೃಶ್ಯ ಕಲೆ-ಮಣ್ಣಿನಲ್ಲಿ ಮೂರ್ತಿ ರಚನೆ 2 ಗಂಟೆ, 01 ವೈಯಕ್ತಿಕ. ದೃಶ್ಯ ಕಲೆ-ಪರಿಸರ ಪೋಟೋಗ್ರಫಿ 2 ಗಂಟೆ, 01 ವೈಯಕ್ತಿಕ. ಪ್ರಸ್ತುತಿ ಕಲೆ- (ಕನ್ನಡ, ಹಿಂದಿ/ಇಂಗ್ಲಿಷ್)ಭಾಷೆಯಲ್ಲ್ಲಿ ಪ್ರಬಂಧ ರಚನೆ ವಿಷಯ: ನವ ಭಾರತ ನಿರ್ಮಾಣ) 15 ನಿಮಿಷ, 01 ವೈಯಕ್ತಿಕ. ಪದ್ಯ ರಚನೆ ಮತ್ತು ಅದಕ್ಕೆ ಸೂಕ್ತ ಶೀರ್ಷಿಕೆ ಆಳವಡಿಕೆ-(ಕನ್ನಡ, ಹಿಂದಿ/ಇಂಗ್ಲಿಷ್) ಭಾಷೆಯಲ್ಲಿ 15 ನಿಮಿಷ, 01 ವೈಯಕ್ತಿP.À ಹಾಸ್ಯ ಪ್ರಹಸನ ಪ್ರಸ್ತುತಿ-(ಕನ್ನಡ, ಹಿಂದಿ/ಇಂಗ್ಲಿಷ್) ಭಾಷೆಯಲ್ಲಿ 15 ನಿಮಿµ,À 01 ವೈಯಕ್ತಿಕ.

ಆಶುಭಾಷಣ-ಯುವಜನತೆ ಮತ್ತು ಆತ್ಮ ನಿರ್ಭರ ಪ್ರಾರಂಭಿಕ ಪರ್ವ (ಕನ್ನಡ, ಹಿಂದಿ/ಇಂಗ್ಲಿಷ್) ಭಾಷೆಯಲ್ಲಿ 4 ನಿಮಿಷ, 01 ವೈಯಕ್ತಿಕ. ಗುಂಪು ಚರ್ಚೆ-ಅಂತರರಾಷ್ಟ್ರೀಯ ಮತ್ತು ನವ ಯುಗದ ಭಾರತೀಯ ಅಭಿವೃದ್ದಿ ಹರಿಕಾರರು 30 ನಿಮಿಷ, 01 ವೈಯಕ್ತಿಕ. ಗ್ರಾಮೀಣ ಕ್ರೀಡೆ-ಯೋಗ 30 ನಿಮಿಷ, 01 ವೈಯಕ್ತಿಕ. ಭಾಗವಹಿಸುವ ಸ್ಫರ್ಧಿಗಳು ಡಿ.6 ರಂದು ಬೆ. 9 ಗಂಟೆಗೆ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ವರದಿ ಮಾಡಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ.08172-296256, 9986443611 ಸಂಪರ್ಕಿಸಲು ಕೋರಿದೆ.

ವಿಶೇಷ ಸೂಚನೆ: ಜಿಲ್ಲಾ ಮಟ್ಟದ ಯುವಜನೋತ್ಸದಲ್ಲಿ ಪ್ರಥಮ ಸ್ಥಾನ ಪಡೆದ ಕಲಾವಿದರು ನೇರವಾಗಿ ರಾಜ್ಯಮಟ್ಟದಲ್ಲಿ ಭಾಗವಹಿಸುತ್ತಾರೆ. ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದವರು ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸಲು ಅರ್ಹತೆಗಳಿಸುತ್ತಾರೆ ರಾಷ್ಟ್ರಮಟ್ಟದಲ್ಲಿ ಪ್ರಥಮ, ದ್ವಿತೀಯ ಸ್ಥಾನ ಗಳಿಸಿದ ಕಲಾವಿದರಿಗೆ ದೂರದರ್ಶನ, ಆಕಾಶವಾಣಿ ದೃಶ್ಯ ಮಾಧ್ಯಮ/ಚಾನೆಲ್‍ಗಳಲ್ಲಿ ನೇಮಕಾತಿ ಪಡೆಯಲು ಉತ್ತಮ ಅವಕಾಶವಿದೆ.


LEAVE A REPLY

Please enter your comment!
Please enter your name here