ಪರಿಹಾರದ ಹಣ ದುರುಪಯೋಗ ಆರೋಪ

0

ಸಕಲೇಶಪುರ/ಆಲೂರು: ತಾಲೂಕಿನ ಬೈರಾಪುರ ಪಿಡಿಒ ಹಾಗೂ ಗ್ರಾಪಂ ಮಾಜಿ ಅಧ್ಯಕ್ಷರಿಂದ 14,08,268 ರೂ. ಹಣ ದುರುಪಯೋಗ ಮಾಡಿರುವ ಅನುಮಾನವಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಮತ್ತೂಬ್ಬ ಮಾಜಿ ಅಧ್ಯಕ್ಷ ಸಿ.ಡಿ.ಅಶೋಕ್ ಒತ್ತಾಯಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2016-17ರಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ರಸ್ತೆ ಅಭಿವೃದ್ಧಿಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬೈರಾಪುರ ಗ್ರಾಮ ಪಂಚಾಯ್ತಿ ಆಸ್ತಿಯನ್ನು ವಶಕ್ಕೆ ಪಡೆದಿತ್ತು. ಸರ್ಕಾರದ ನಿಯಮಾನುಸಾರ 14,08,268 ರೂ. ಬೆಲೆ ನಿಗದಿಪಡಿಸಿದ್ದು, ಗ್ರಾಪಂಅಧಿಕಾರಿಗಳು ಚಾಲ್ತಿಯಲ್ಲೇ ಇರದ ರಾಜೀವ್‌ಗಾಂಧಿ ವಸತಿ ಯೋಜನೆಯ ಹಳೇ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂದು ದೂರಿದರು.

ಸಮಗ್ರ ತನಿಖೆ ನಡೆಸಲಿ: ಪಿಡಿಒ ಆಗಿದ್ದ ರವಿಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷೆ ಪುಷ್ಪಾ ಅವರು ಸಭೆಯಒಪ್ಪಿಗೆಪಡೆಯದೇಖಾತೆಯಲ್ಲಿದ್ದ ಹಣವನ್ನು ಕಾನೂನು ಬಾಹಿರವಾಗಿ ದುರ್ಬಳಕೆಮಾಡಿದ ಆರೋಪ ಕೇಳಿ ಬಂದಿದೆ. ಕೆಲವು ಸದಸ್ಯರೂ ಇದರಲ್ಲಿ ಕೈಜೋಡಿಸಿರುವ ಅನುಮಾನವಿದೆ. ಆದ್ದರಿಂದ ಈ ಬಗ್ಗೆ ಹಿರಿಯಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ಕಾನೂನುಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಚಾಲ್ತಿಯಲ್ಲಿ ಇರದ ಖಾತೆಗೆ ಹಣ ಜಮೆ: ಬೈರಾಪುರ ಗ್ರಾಪಂ ಮಾಜಿ ಸದಸ್ಯ ಬಿ.ಜಿ.ಕಾಂತರಾಜ್ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗಾಗಿ ಪ್ರಾಧಿಕಾರ ಗ್ರಾಪಂ ವ್ಯಾಪ್ತಿಯ ಬಸ್ ನಿಲ್ದಾಣ, ಕೊಳವೆ ಬಾವಿ ಸೇರಿಇತರ ಆಸ್ತಿಗಳನ್ನು ವಶಪಡಿಸಿಕೊಂಡು 14,08,268 ರೂ. ಪರಿಹಾರವನ್ನು ಗ್ರಾಪಂನಲ್ಲಿ ಚಾಲ್ತಿಯಲ್ಲಿ ಇರದ ಖಾತೆಗೆ ಅಧ್ಯಕ್ಷರು ಹಾಗೂ ಪಿಡಿಒ ಕಾನೂನು ಬಾಹಿರವಾಗಿ ಹಣ ಜಮಾಮಾಡಿಸಿಕೊಂಡು, ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಮಾಹಿತಿ ನೀಡಿಲ್ಲ: ಪ್ರತಿ ವರ್ಷ ನಡೆಯುವ ಲೆಕ್ಕ ಪರಿಶೋಧನೆ ಸಂದರ್ಭದಲ್ಲಿಯೂ ಈ ಹಣದಬಗ್ಗೆ ಮಾಹಿತಿ ನೀಡಿಲ್ಲ, ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಆದ್ದರಿಂದ ಹಿರಿಯ ಅಧಿಕಾರಿಗಳುಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಹೇಳಿದರು.

ಗ್ರಾಮದ ಹಿರಿಯ ಮುಖಂಡ ಗಿರೀಶ್ ಮಾತನಾಡಿ, ಗ್ರಾಪಂಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಬಂದಿರುವ ಹಣದ ಬಗ್ಗೆ ಜನಸಾಮಾನ್ಯರಿಗೆ ಸತ್ಯ ತಿಳಿಯಬೇಕಾಗಿದೆ. ಕಳೆದಬಾರಿ ಚುನಾವಣೆಯಲ್ಲಿ ಭ್ರಷ್ಟಾಚಾರ ಮುಂದಿಟ್ಟು,ಅಧಿಕಾರಕ್ಕೆ ಬಂದ ಸದಸ್ಯೆ, ಭ್ರಷ್ಟಾಚಾರದಲ್ಲಿ ತೊಡಗಿರುವುದು ದುರಾದೃಷ್ಟಕರ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ಹಿರಿಯ ಮುಖಂಡ ಗಿರೀಶ್, ಬಿ.ಕೆ.ಪುಟ್ಟರಾಜು ಹಾಗೂ ಶಶಿಧರ್‌ ಇದ್ದರು.

LEAVE A REPLY

Please enter your comment!
Please enter your name here