ಬೇಲೂರು: ಬೇಲೂರು ಪುರ ಸಭಾ ವೇಲಾಪುರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಸ್ವಪಕ್ಷೀಯ ಸದಸ್ಯರ ವಿರುದ್ಧ ಬೇಸರ ವ್ಯಕ್ತ ಪಡಿಸಿದಲ್ಲದೆ ಗರಂ ಅದ ಘಟನೆ ಜರುಗಿತು. ಪುರಸಭಾ ವೇಲಾಪುರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ವಿಷಯಾಧಾರಿತ ಚರ್ಚೆಗೆ ಮುನ್ನ ಸದಸ್ಯರಾದ ಬಿ.ಗಿರೀಶ್ ಮಾತನಾಡಿ, ಪುರಸಭಾ ವಾಣಿಜ್ಯ 17 ಮಳಿಗೆಯ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ, ಸಾಮಾನ್ಯಸಭೆಗೆ ಮುನ್ನವೇ ನೀಡಬೇಕಿತ್ತು ಎಂದು ಮುಖ್ಯಾಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಧ್ವನಿ ಎತ್ತಿದ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎಸ್.ಡಿ.ಮಂಜುನಾಥ ನಾವುಗಳು ಕ್ರಮಬದ್ಧತೆಯಿಂದ ನಡೆಸಲಾಗಿದೆ ಎಂದ ಮಾತಿಗೆ ಸಿಡಿದೆದ್ದ ಸದಸ್ಯರಾದ ಸಿ.ಎನ್.ದಾನಿ. ಜಿ.ಶಾಂತಕುಮಾರ್ ಇನ್ನೂಳಿದ ಸದಸ್ಯರು ಮುಖ್ಯಾಧಿಕಾರಿಗಳು ಉಡಾಪೆಯಿಂದ ವರ್ತಿಸಬಾರದು ಎಚಿದು ವಾದಿಸಿದರು.
ಈ ವೇಳೆ ಮದ್ಯೆ ಪ್ರವೇಶಿಸಿದ ಪುರಸಭಾ ಅಧ್ಯಕ್ಷ ತೀರ್ಥಕುಮಾರಿ ನನ್ನನ್ನು ಹೆದರಿಸಲು ಯಾರು ಮುಂದಾಗಬೇಡಿ. ನಾನು ಯಾರಿಗೂ ಹೆದರುವ ಮಾತಿಲ್ಲ. ನೀವುಗಳು ಜಗಳ ಆಡಲು ಬಂದಿದ್ದೀರಾ. ನಾನು ಸಭೆಯನ್ನು ಮುಂದೂಡುವೆ ಎಂದು ಸ್ವಪಕ್ಷೀಯ ಕಾಂಗ್ರೆಸ್ ಸದಸ್ಯರ ವಿರುದ್ಧ ಗರಂ ಆಗಿ ಸಭೆಯಿಂದ ಹೊರಡಲು ಮುಂದಾದ ವೇಳೆ ಕೆಲ ಸದಸ್ಯರ ಒತ್ತಾಯದಿಂದ ಸಭೆಯನ್ನು ನಡೆಸಲು ಮುಂದಾದರು. ಸದಸ್ಯ ಜಿ.ಶಾಂತಕುಮಾರ್ ಮಾತನಾಡಿ, ನನ್ನ ವಾರ್ಡ್ ನಲ್ಲಿ ನಡೆಯುವ ಟೆಂಡರ್ ಕಾಮಗಾರಿ ಮಾಹಿತಿ ದೊರೆತಿಲ್ಲ.
ನಾಲ್ಕು ಕಾಮಗಾರಿಗಳು ಇಬ್ಬರಿಗೆ ಬಿಡ್ ನಿಂತಿದೆ.ಈ ಬಗ್ಗೆ ತನಿಖೆ ನಡೆಸಬೇಕು ಪಾರದರ್ಶಕ ಆಡಳಿತ ಮತ್ತು ಭ್ರಷ್ಟಾಚಾರ ಮುಕ್ತವಾಗಿ ನಡೆಯಬೇಕು ಎಂದರು. ಸದಸ್ಯ ಬಿ.ಸಿ.ಜಗದೀಶ್ ಮಾತನಾಡಿ ಪುರಸಭಾ 133 ವಾಣಿಜ್ಯ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ಕೆಲ ಮದ್ಯವರ್ತಿಗಳ ಮತ್ತು ಬಂಡವಾಳಶಾಹಿಗಳು ಲಾಭ ಪಡೆಯುತ್ತಿದ್ದಾರೆ. ಅವಕಾಶ ಇದ್ದರೆ ಇರುವ ವಾಣಿಜ್ಯ ಮಳಿಗೆ ಮಾಲೀಕರಿಗೆ ಶೇಕಡಾವಾರು ಬಾಡಿಗೆ ಹೆಚ್ಚಿಸಲು ಅವಕಾಶ ಇದೆಯಾ ಎಚಿದ ಅವರು ಮಳಿಗೆಗಳ ಹರಾಜು ಬೇಕಾಬಿಟ್ಟಿ ನಡೆಯದೆ ಕಾನೂನು ಬದ್ಧವಾಗಿ ನಡೆಯಬೇಕು ಜೊತೆಗೆ 134 ಪುರಸಭಾ ಮಳಿಗೆಗಳ ಹಾರಜು ಪ್ರಕ್ರಿಯೆ ಪಾರದರ್ಶಕವಾಗಿರಲಿ ಮಳಿಗೆದಾರರಿಗೆ ಅನ್ಯಾಯವಾಗಬಾರದು ಕಾನೂನಾತ್ಮಕವಾಗಿ ಮಾಡುವಂತೆ ಸಲಹೆ ನೀಡಿದರು