ಧನುರ್ವೇದ ಸೇವಾ ಟ್ರಸ್ಟ್ ವತಿಯಿಂದ ವೈದ್ಯರಿಗೊಂದು ನಮನ ಕಾರ್ಯಕ್ರಮ

0

ಹಾಸನ: ವಿಶ್ವ ವೈದ್ಯರ ದಿನದ ಅಂಗವಾಗಿ ವೈದ್ಯರಿಗೊಂದು ನಮನ ಎಂಬ ಕಾರ್ಯಕ್ರಮವನ್ನು ಧನುರ್ವೇದ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.

ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯಲ್ಲಿ ನಡೆದ ವೈದ್ಯರಿಗೊಂದು ನಮನ ಕಾರ್ಯಕ್ರಮದಲ್ಲಿ, ಕರೋನಾ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಜನರ ಚಿಕಿತ್ಸೆಗಾಗಿ ಹಗಲು-ರಾತ್ರಿಯೆನ್ನದೆ ಶ್ರಮಿಸಿದ ಎಲ್ಲಾ ವೈದ್ಯರ ಪರವಾಗಿ ಸಾಂಕೇತಿಕವಾಗಿ ಸಾಂಕೇತಿಕವಾಗಿ ನಾಲ್ವರು ವೈದ್ಯರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮವನ್ನು ಹೂ ಕುಂಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಕಲೇಶಪುರ ಉಪವಿಭಾಗಾಧಿಕಾರಿ ಗಿರೀಶ್ ಅವರು ಮಾತನಾಡಿ, ಸಮಾಜದ ರಕ್ಷಣೆಗಾಗಿ ಶ್ರಮಿಸಿದ ವೈದ್ಯರನ್ನ ನಾವು ಸ್ಮರಿಸಲೇಬೇಕು. ಅಂತಹ ಕಾರ್ಯವನ್ನು ಧನುರ್ವೇದ ಸೇವಾ ಟ್ರಸ್ಟ್ ರವರು ಮಾಡುತ್ತಿರುವುದು ಶ್ಲಾಘನೀಯ. ಇದೇ ರೀತಿಯಾಗಿ ತಮ್ಮ ಸಮಾಜಪರ ಕೆಲಸವನ್ನು ಮಾಡುತ್ತಾ ಸಾಗಲಿ ಎಂದರು.

ಇದೇ ವೇಳೆ ಧನುರ್ವೇದ ಸೇವಾ ಟ್ರಸ್ಟ್ ಸಂಸ್ಥಾಪಕರಾದ ಯೋಗಾನಂದ ಹೊನ್ನೇನಹಳ್ಳಿ ಅವರು ಮಾತನಾಡಿ, ಜನರ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಇರುವ ವೈದ್ಯರಿಗೆ ನಾವು ಋಣಿಗಳು. ಅವರಿಗೆ ನಮ್ಮ ಕಾರ್ಯಕ್ರಮದ ಮೂಲಕ ನಮನವನ್ನು ಸಲ್ಲಿಸುವ ಮೂಲಕ ನಮ್ಮ ಕರ್ತವ್ಯವನ್ನ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವೈದ್ಯರಾದ ಡಾ. ಮಧುಸೂದನ್, ಡಾ. ರಾಷ್ಯಾ, ಡಾ. ಹರೀಶ್ ಮತ್ತು ಡಾ. ರಂಜಿತಾ ಅವರಿಗೆ ಧನುರ್ವೇದ ಸೇವಾ ಸಂಸ್ಥೆ ವತಿಯಿಂದ ವೈದ್ಯರಿಗೊಂದು ನಮನ ಕಾರ್ಯಕ್ರಮದಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ತಹಸೀಲ್ದಾರ ಜಯಕುಮಾರ್, ಉಪತಹಸೀಲ್ದಾರ್ ಗಂಗಾಧರ್, ಪಿಡಿಓ ದೇವರಾಜೇಗೌಡ, ಆಸ್ಪತ್ರೆ ಸಿಬ್ಬಂದಿಗಳು ಮತ್ತು ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here