ಕಾಡಾನೆ ಹಾವಳಿ ಅಪಾರ ಪ್ರಮಾಣದ ಕಾಫಿ ಗಿಡಗಳು ನಾಶ.

0

ದಯಾಮರಣಕ್ಕೆ ಅವಕಾಶ ನೀಡುವಂತೆ ಕಾಫಿ ಬೆಳೆಗಾರನಾ ಅಳಲು

ಸಕಲೇಶಪುರ :- ಮಲೆನಾಡು ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರೆದಿದ್ದು ರೈತರು ಹಾಗೂ ಕಾಫಿ ಬೆಳೆಗಾರರು ಬೀದಿಗೆ ಬೀಳುವ ಪರಿಸ್ಥಿತಿ ಬಂದೊದಗಿದೆ. ಕಳೆದ ರಾತ್ರಿ ಆಲೂರು ಸಕಲೇಶಪುರ ಗಡಿ ಗ್ರಾಮ ಕೆಲುವಳ್ಳಿಯ ಮಂಜುನಾಥ್ ರವರ ಕಾಫಿ ತೋಟವನ್ನು ಅಪಾರ ಪ್ರಮಾಣದಲ್ಲಿ ನಾಶಪಡಿಸಿವೆ.
ಮೂರು ಆನೆಗಳಿರುವ ಹಿಂಡು ಕಳೆದ ರಾತ್ರಿ ಹೇರಗಳಲೆ ಗ್ರಾಮದಲ್ಲಿರುವ ತಮ್ಮ 10 ಎಕರೆ ಕಾಫಿ ತೋಟದೊಳಗೆ ಕಾಡಾನೆಗಳು ಮನಸೋ ಇಚ್ಛೆ ಓಡಾಟ ನಡೆಸಿದ ಪರಿಣಾಮ ಸುಮಾರು 800 ರೋಬಸ್ಟಾ ಕಾಫಿ ಗಿಡಗಳು ನಾಶವಾಗಿರುವ ಘಟನೆ ನಡೆದಿದೆ.
ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಹೋಗಿರುವ ಬೆಳೆಗಾರರಾದ ಮಂಜುನಾಥ್ ರವರು ತಮಗೆ ದಯಾಮರಣಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳ ಬಳಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಕಾಡಾನೆ ಹಾವಳಿ ಸಂತ್ರಸ್ತರ ಹೋರಾಟ ಸಮಿತಿಯ ಮುಖಂಡರಾದ ಎಡೆಹಳ್ಳಿ ಆರ್ ಮಂಜುನಾಥ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಭೇಟಿ ನೀಡಿ ಸುಮಾರು ಎರಡು ಎಕರೆ ಎಷ್ಟು ಕಾಫಿ ತೋಟ ಮಣ್ಣುಪಾಲಾಗಿರುವುದನ್ನು ಕಂಡು ಸರ್ಕಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವರ್ಗಾವಣೆ ದಂದೆ, ಸಂಪುಟ ವಿಸ್ತರಣೆ ಜೊತೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸುವ ವಿಚಾರದಲ್ಲಿ ಮಗ್ನವಾಗಿದೆ.ಆದರೆ ಸುಮಾರು 15 ರಿಂದ 20 ವರ್ಷಗಳಿಂದ ಇರುವ ಕಾಡಾನೆ ಬಗೆಹರಿಸುವ ನಿಟ್ಟಿನಲ್ಲಿ ಸೌಜನ್ಯಕ್ಕೂ ಚರ್ಚಿಸುವ ಕೆಲಸವಾಗಿಲ್ಲ. ಈ ಭಾಗದ ರೈತರ ಹಾಗೂ ಬೆಳೆಗಾರರ ನಡುವೆ ಸಮಸ್ಯೆ ಬಗ್ಗೆ ಚರ್ಚಿಸುವ ಕನಿಷ್ಠ ಪ್ರಜ್ಞೆಯೂ ಅರಣ್ಯ ಸಚಿವರಿಗೆ ಇಲ್ಲದಂತಾಗಿದೆ.ಇಷ್ಟೆಲ್ಲ ಇದ್ದರೂ ತಾವು ರೈತಪರ ಸರ್ಕಾರ ಎಂದು ಬಿಂಬಿಸಿ ಕೊಳ್ಳುವುದರಲ್ಲಿ ಎತ್ತಿದ ಕೈ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ಹೆಚ್.ಕೆ ಕುಮಾರಸ್ವಾಮಿ ಅವರು ಕೂಡ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಸರ್ಕಾರಕ್ಕೆ ಎಚ್ಚರಿಸುವು ದರಲ್ಲಿ ವಿಫಲರಾಗಿದ್ದಾರೆ. ಇನ್ನು ಉಸ್ತುವಾರಿ ಸಚಿವರು ಕೇವಲ ಭರವಸೆಗಳಲ್ಲಿ ದಿನಗಳನ್ನು ತಳ್ಳುತ್ತಿದ್ದಾರೆ ಹತ್ತಾರು ಮನವಿ ಪತ್ರ ಸಲ್ಲಿಸಿ ಕಾಡಾನೆ ದಾಳಿಯಿಂದ ಸಾವಿಗೀಡಾದವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಲು ಅವರಿಗೆ ಸಮಯವಿಲ್ಲದಂತಿದೆ ಈ ಭಾಗದ ರೈತರು ಕಬ್ಬು ಬೆಳೆಗಾರರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ ಕಾಡಾನೆ ಹಾಗೂ ಮಾನವನ ಸಂಘರ್ಷ ತಪ್ಪಿಸಲು ಸರ್ಕಾರ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪ ತೀವ್ರವಾಗಿರಲಿದೆ. ಈಗಾಗಲೇ ಮುಂದಿನ ಹೋರಾಟಕ್ಕೆ ರೈತ ಸಂಘಟನೆ,ಕನ್ನಡಪರ ಸಂಘಟನೆ ಸೇರಿದಂತೆ ಇನ್ನಿತರ ಒಟ್ಟು 11 ಸಂಘಟನೆಗಳು ಈಗಾಗಲೇ ನಮಗೆ ಬೆಂಬಲ ಸೂಚಿಸಿವೆ. ಈ ತಿಂಗಳ 20 ನೇ ತಾರೀಕಿನ ಒಳಗೆ ಅರಣ್ಯ ಸಚಿವರು ತಾಲೂಕಿಗೆ ಭೇಟಿ ನೀಡಿ ಈ ಭಾಗದ ರೈತರು ಹಾಗೂ ಬೆಳಗಾರರ ಜೊತೆ ಸಮಾಲೋಚಿಸದಿದ್ದರೆ ಉಗ್ರ ಹೋರಾಟ ಎದುರಿಸಲು ಸರ್ಕಾರ ಸಿದ್ಧವಾಗಿರಬೇಕು ಎಂದು ಎಚ್ಚರಿಕೆ ನೀಡಿದರು.

ಕಾಫಿ ಬೆಳೆಗಾರರ ಮಂಜುನಾಥ್ ಮಾತನಾಡಿ, ಕಳೆದ ಮೂರು ದಿನಗಳಿಂದ ನಿರಂತರವಾಗಿ ನಮ್ಮ ತೋಟದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು ಸುಮಾರು 40 ವರ್ಷದ ರೋಬಸ್ಟಾ ಕಾಫಿ ಗಿಡಗಳು ನಾವು ಉಳಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಗಿಡಗಳನ್ನು ನಾಶ ಮಾಡಿದೆ. ಘಟನೆಯಿಂದ ನಾನು ಮಾನಸಿಕವಾಗಿ ನೊಂದಿದ್ದೇನೆ. ಮುಂದೆ ಜೀವನ ನಡೆಸುವುದು ಕಷ್ಟಕರವಾಗಿದೆ ಸರ್ಕಾರದಿಂದ ಪರಿಹಾರ ಕೊಡದಿದ್ದರೂ ಪರವಾಗಿಲ್ಲ ಕಾಡಾನೆ ಸಮಸ್ಯೆಗೆ ಶಾಶ್ವತ ವಾದ ಪರಿಹಾರ ಕಂಡುಹಿಡಿಯಲು ಎಂದು ಒತ್ತಾಯಿಸಿದರು. ಕಾಡಾನೆ ಪ್ರದೇಶದಲ್ಲಿ ಜನರು ಹಾಗೂ ರೈತರು ಬೆಳೆದ ಬೆಳೆಗಳು ಉಳಿಸಿಕೊಳ್ಳುವುದು ತುಂಬಾ ಕಷ್ಟವಾಗಿದೆ ಆದ್ದರಿಂದ ಈ ಪ್ರದೇಶದಲ್ಲಿ ಕಾಡಾನೆಗಳು ಇರಬೇಕು ಇಲ್ಲವೇ ಮನುಷ್ಯರು ಇರಬೇಕು ಭಯದ ವಾತಾವರಣದಲ್ಲಿ ಬದುಕಲಾಗುತ್ತಿಲ್ಲ ಈ ಭಾಗದಲ್ಲಿ ಕಾಡಾನೆ ಗಳು ಇರಬೇಕು ಇಲ್ಲ ಮನುಷ್ಯರು ಇರಬೇಕು ಇಬ್ಬರೂ ಒಟ್ಟಿಗೆ ಇರಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ ಆದ್ದರಿಂದ ಸೂಪರ ಪರಿಹಾರ ನೀಡಿ,ನಮ್ಮನ್ನು ಬೇರೆಡೆಗೆ ಸ್ಥಳಾಂತರ ಮಾಡಿಸಿ ಎಂದು ಸರ್ಕಾರಕ್ಕೆ ಆಗ್ರಹಿಸಿದರು. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ನಾವು ದಯಾಮರಣಕ್ಕೆ ಅರ್ಜಿ ಸಲ್ಲಿಸುವುದು ಅನಿವಾರ್ಯವಾಗಲಿದೆ ಎಂದರು.
ಕೆ. ಹೊಸಕೋಟೆ ಕರವೇ ಘಟಕದ ಅಧ್ಯಕ್ಷ ವಿವೇಕ್ ವೈದ್ಯನಾಥ್ ಮಾತನಾಡಿ, ಮಲೆನಾಡು ಭಾಗದಲ್ಲಿ ಒಂದೆಡೆ ಪ್ರಕೃತಿಯ ವೈಪರಿತ್ಯದಿಂದ ಕಾಫಿ ಬೆಳೆ ಕುಂಠಿತವಾಗಿದೆ ಮತ್ತೊಂದೆಡೆ ಕಾಡಾನೆ ಹಾವಳಿ ಯಿಂದ ಕಾಫಿ ಗಿಡಗಳೇ ನಾಶವಾಗುತ್ತಿವೆ ಇನ್ನು ಈ ಭಾಗದಲ್ಲಿ ಬೆಳೆಗಳನ್ನು ಬರೆಯುವುದಕ್ಕೆ ಆಗಲಿ ಜನರು ವಾಸ ಯೋಗ್ಯವಾಗಿಲ್ಲ ಕಾಡಾನೆ ಹಾವಳಿ ವಿರುದ್ದ ಹಲವಾರು ಬಾರಿ ಪ್ರತಿಭಟನೆ ನೀಡಿ ಎಚ್ಚರಿಕೆ ನೀಡಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಆದ್ದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
ಆಲೂರು ವಲಯಾರಣ್ಯಾಧಿಕಾರಿ ವಿನಯಚಂದ್ರ ಮಾತನಾಡಿ ಕಾಫಿ ಬೆಳೆಗಾರರಾದ ಮಂಜುನಾಥ್ ಅವರ ತೋಟದಲ್ಲಿ ಕಾಡಾನೆಗಳು ಸಾಕಷ್ಟು ಕಾಫಿ ಗಿಡಗಳನ್ನು ನಾಶ ಮಾಡಿದೆ ಈ ನಿಟ್ಟಿನಲ್ಲಿ ಅವರಿಗೆ ಸೂಕ್ತ ಪರಿಹಾರಕ್ಕಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು.

ಈ ವೇಳೆ ಸಕಲೇಶಪುರ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷ ಆರ್. ಎಸ್ ದಿನೇಶ್, ಕಾಡಾನೆ ಹಾವಳಿ ಸಂತ್ರಸ್ತರ ಹೋರಾಟ ಸಮಿತಿಯ ಶಶಿಧರ ಹೊಸಗದ್ದೆ, ಬೆಳಗೋಡು ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಉಮಾನಾಥ ಸುವರ್ಣ ಸೇರಿದಂತೆ ಇನ್ನಿತರರು ಇದ್ದರು.

LEAVE A REPLY

Please enter your comment!
Please enter your name here