ನೆಮ್ಮದಿಯಿಂದ ಆ ತಾಯಿ ಅಂದು ಮಾಡಿದ ತ್ಯಾಗಕ್ಕೆ ನಾವಿಂದು ನೆಮ್ಮದಿಯಿಂದ ಉಸಿರಾಡುತ್ತಿದ್ದೇವೆ .,ಅವರು ಬೆಳೆಸಿ ಉಳಿಸಿದ ಲಕ್ಷಾಂತರ ಸಸಿ ಮರಗಳಾಗಿ ಕೋಟ್ಯಾಂತರ ಜನ ನೆರಳ ಪಡೆದು ನೆಮ್ಮದಿಯಿಂದಿದ್ದಾರೆ ., ಆದರೆ ವಿಧಿಯಾಟಕೆ ಇಂದು ನಮ್ಮ ಕರುನಾಡ ಹೆಮ್ಮೆಯ ಪುತ್ರಿ ಸಾಲು ಮರದ ತಿಮ್ಮಕ್ಕನ ಆರೋಗ್ಯದ ಏರು ಪೇರಾಗುತ್ತಿದೆ ಎಂದು ಹಲವು ದಿನಗಳಿಂದ ಆಸ್ಪತ್ರೆಗಳಿಗೆ ಅಲೆದಾಡುತ್ತಿರೋದು ಗೊತ್ತಿದೆ .
ಹಾಸನದ ಮಣಿ ಆಸ್ಪತ್ರೆಯ ಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಿಮ್ಮಕ್ಕ ಹೆಚ್ಚಿನ ಚಿಕಿತ್ಸೆ ಗೆ ಬೆಂಗಳೂರಿನ ಅಪೊಲೊ ಗೆ ದಾಖಲಾಗಿದ್ದು ನಿಮಗೆ ಗೊತ್ತಿದೆ ., ಅಲ್ಪ ಚೇತರಿಕೆಯ ನಂತರ ಇದೀಗ ಬೇಲೂರಿನ ಸ್ವ ಗೃಹಕ್ಕೆ ಮರಳಿದ್ದು , ವಯಸ್ಸಿನ ಬಗ್ಗೆ ಗಮನ ವಹಿಸಿ ನೋಡುವುದಾರೆ , ರಾಷ್ಟ್ರದ ಅತ್ಯುನ್ನತ ಪ್ರಶಸ್ತಿ ಗಳಿಸಿದ ಈಕೆ ಇರುವೆಡೆಗೆ ಆಸ್ಪತ್ರೆ ಯ ಸೌಲಭ್ಯ ಕೊಟ್ಟರು ಸಣ್ಣದೆ
ಸಾಲು ಮರದ ತಿಮ್ಮಕ್ಕನ ನೆರೆವಿಗೆ ಧಾವಿಸಿದ ಸ್ಥಳೀಯ ಶಾಸಕ ಕೆ.ಎಸ್ ಲಿಂಗೇಶ್ ಅವರಿಂದ ನೆರವು
ಇಂದು ಪದ್ಮಶ್ರೀ ಪ್ರಶಸ್ತಿ ವಿಜೇತೆ ತಾಯಿ ಸಾಲು ಮರದ ತಿಮ್ಮಕ್ಕ ನವರ ಆರೋಗ್ಯ ನೋಡಿಕೊಳ್ಳಲು ಹಾಗೂ ಶೃಶ್ರುಷೆ ಮಾಡಲು ಇಬ್ಬರು ದಾದಿಯರನ್ನು ನೇಮಿಸಿ ಸಾಲು ಮರದ ತಿಮ್ಮಕ್ಕನವರ ಆರೋಗ್ಯ ವಿಚಾರಿಸಿಕೊಂಡು ಅವರಿಂದ ಅಶೀರ್ವಾದ ಪಡೆದುಕೊಂಡ ಬೇಲೂರಿನ ಮಾನ್ಯ ಶಾಸರಾದ ಕೆ ಎಸ್ ಲಿಂಗೇಶ್ ಅವರು. ತಾಲ್ಲೂಕು ಆರೋಗ್ಯಾಧಿಕಾರಿ ವಿಜಯ್ ಹಾಗೂ ತಿಮ್ಮಕ್ಕ ನವರ ಮಗ ಉಮೇಶ್ ಅವರು ಇದ್ದರು.