ಎರಡು ಪ್ರತ್ಯೇಕ ಅಪಘಾತ : ಬಸ್ – ಬೈಕ್ ಅಪಘಾತ ಇಬ್ಬರ ಸಾವು , ಲಾರಿ – ಬೈಕ್ ಡಿಕ್ಕಿ ದಂಪತಿ ಸಾವು

1

ಹಾಸನ : ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹಿರೀಸಾವೆ ಸಮೀಪದ ಹೊನ್ನೇನಹಳ್ಳಿ ಬಳಿ ಬುಧವಾರ ಬಸ್ ಮತ್ತು ಸ್ಕೂಟರ್ ನಡುವೆ ಅಪಘಾತ ಆಗಿದ್ದು ರಾಷ್ಟ್ರೀಯ ಹೆದ್ದಾರಿ 75ರ ಹೊನ್ನೇನಹಳ್ಳಿ ಸಮೀಪ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕು ಹೊಸುವು ಗ್ರಾಮದ ದರ್ಶನ್ (30) ಮತ್ತು ರಾಯಚೂರು ಜಿಲ್ಲೆ ಜಾಲಹಳ್ಳಿಯ ತ್ರೀಶಂಕು (28) ಎಂಬ ಇಬ್ಬರು ಸಾವನ್ನಪ್ಪಿದ್ದಾರೆ. , ಬೆಂಗಳೂರಿನಿಂದ ಸೋಮವಾರಪೇಟೆ ಕಡೆಗೆ ಬರುತ್ತಿದ್ದ ಬಸ್ ಚನ್ನರಾಯಪಟ್ಟಣದಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಸ್ಕೂಟರ್‌‌‌‌ಗೆ ಡಿಕ್ಕಿ ಹೊಡೆದಿದ್ದು .

ಪರಿಣಾಮ ಒಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದು. ಘಟನೆ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ .


ನಿನ್ನೆ ನಡೆದ ಮತ್ತೊಂದು ಅಪಘಾತದಲ್ಲಿ :

ಹಾಸನ : ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ , ಸ್ಥಳದಲ್ಲೇ ದಂಪತಿ ಧಾರುಣ ಸಾವು , ಪುಟ್ಟರಾಜು (65), ಭಾರತಿ (54) ಮೃತ ದಂಪತಿ , ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಸಂಕೇನಹಳ್ಳಿ ಗ್ರಾಮದ ಬಳಿ ಘಟನೆ , ಮೃತ ದಂಪತಿ ಬೇಲೂರು ತಾಲ್ಲೂಕಿನ, ಮೂಳೆನಹಳ್ಳಿ ಗ್ರಾಮದವರು , ಬೈಕ್‌ನಲ್ಲಿ ತೆರಳುವಾಗ ಅಡ್ಡ ಬಂದ ನಾಯಿ , ಈ ವೇಳೆ ಆಯತಪ್ಪಿ ಲಾರಿಗೆ ಡಿಕ್ಕಿ ಹೊಡೆದ ಬೈಕ್ , KA-18 C-0153 ನಂಬರ್‌ನ ಲಾರಿ , ಲಾರಿ ಚಾಲಕ ಪೋಲಿಸರ ವಶಕ್ಕೆ , ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ , ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ

1 COMMENT

LEAVE A REPLY

Please enter your comment!
Please enter your name here