ಬೇಲೂರು: ಕ್ಷುಲ್ಲಕ ಕಾರಣಕ್ಕೆ ಎರಡು ಕುಟುಂಬಗಳ ನಡುವೆ ನಡುವೆ ಶುರುವಾದ ಜಗಳ, ಮಾರಮಾರಿ ಹಂತಕ್ಕೆ ಹೋಗಿ ಮಹಿಳೆ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ತಾಲೂಕಿನ ಕೋಡಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಾಂತರಾಜು, ಗಂಗಾಧರ್, ರತ್ನ, ಹಲ್ಲೆಗೊಳ ಗಾದವರು. ತಡರಾತ್ರಿ ಗಂಗಾಧರ್ ಅವರ ಮನೆಗೆ ನುಗ್ಗಿ ಮಚ್ಚು, ದೊಣ್ಣೆಗಳಿಂದ ಗಂಗಾಧರ್ ಸಹೋದರಿ ಗೀತಾ ಹಾಗೂ ಮಕ್ಕಳು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.ಶ್ರೀಧರ್, ನಿಂಗರಾಜು, ಸುರೇಶ್, ದಿನೇಶ್, ವೆಂಕಟೇಶ್ ಸಚಿನ್, ಸಾಗರ್, ಉಮೇಶ್, ಗೀತಾ ಎಂಬುವವರಿಂದ ಹಲ್ಲೆ ನಡೆದಿದೆ ಎಂದು ದೂರಿದ್ದಾರೆ.
ಹಲ್ಲೆ ನಡೆಸಿದ್ದಲ್ಲದೆ ಐದು ಲಕ್ಷ ರೂ.ಹಣ ಕಳವು ಮಾಡಿದ್ದಾರೆ. ಎಂಬ ಆರೋಪವೂ ಕೇಳಿ ಬಂದಿದೆ. ಗುರುವಾರ ಬೆಳಿಗ್ಗೆ ತೆಂಗಿನಕಾಯಿ ವಿಚಾರಕ್ಕೆ ಗಂಗಾಧರ್ ಹಾಗೂ ಆತನ ತಂಗಿ ಗೀತಾ ಜಗಳವಾಡಿದ್ದರು. ನಂತರ ಗೀತಾ, ಹಳೇಬೀಡು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೇ ದ್ವೇಷದಿಂದ ತಡರಾತ್ರಿ ಮನೆಗೆ ನುಗ್ಗಿದ ಗೀತಾ, ಪುತ್ರರು ಹಾಗೂ ಸ್ನೇಹಿತರು ಮಚ್ಚು, ದೊಣ್ಣೆಗ ಳಿಂದ ಹಲ್ಲೆ ನಡೆಸಿ ಎಸ್ಟೇಪ್ ಆಗಿದ್ದಾರೆ. ಗಲಾಟೆಯಲ್ಲಿ ಗೀತಾ ಪುತ್ರ ಶ್ರೀಧರ್ ಗಾಯವಾಗಿದೆ. ಗಾಯಾಳು ಗಳುಗಳಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ.
ತೆಂಗಿನಕಾಯಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ನಡೆದಿರುವ ಗಲಾಟೆಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಬೇಲೂರು ತಾಲ್ಲೂಕಿನ ಕೋಡಿಕೊಪ್ಪಲು ಗ್ರಾಮದಲ್ಲಿ ನಡೆದಿರೋದು, ಬೇಲೂರು ತಾಲೂಕಿನ ಹಳೆಬೀಡು ಹೋಬಳಿಯ ಕೋಡಿಕೊಪ್ಪಲು ನಿವಾಸಿಗಳಾದ ಕಾಂತಾರಾಜು, ಗಂಗಾಧರ್, ರತ್ನ, ಹಲ್ಲೆಗೊಪಡೆಯುತ್ತಿದ್ದಾರೆ ಗಂಗಾಧರ್ ಹಾಗೂ ಆತನ ತಂಗಿ ಗೀತಾ ಇಬ್ಬರ ನಡುವೆ ತೆಂಗಿನಕಾಯಿ ವಿಚಾರಕ್ಕೆ ಜಗಳ ನಡೆದಿದ್ದು, ತಡರಾತ್ರಿ ಗಂಗಾಧರ್ ಅವರ ಮನೆಗೆ ಸಹೋದರಿ ಗೀತಾ ಹಾಗೂ ಮಕ್ಕಳು, ಸ್ನೇಹಿತರು ನುಗ್ಗಿ ಮಚ್ಚು, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಶ್ರೀಧರ್, ನಿಂಗರಾಜು, ಸುರೇಶ್, ದಿನೇಶ್, ವೆಂಕಟೇಶ್ ಸಚಿನ್, ಸಾಗರ್, ಉಮೇಶ್, ಗೀತಾ ಎಂಬುವವರು ಹಲ್ಲೆ ನಡೆಸಿದ ವ್ಯಕಿಗಳಾಗಿದ್ದು, ಘಟನೆಯ ಬಳಿಕ ಪರಾರಿಯಾಗಿದ್ದಾರೆ. ಅದಲ್ಲದೆ ಹಲ್ಲೆ ನಡೆಸಿರುವ ಗೀತಾ ಕೂಡ ಹಳೇಬೀಡು ಪೊಲೀಸ್ ಠಾಣೆಗೆ ತೆರಳಿ ಐದು ಲಕ್ಷ ರೂ ಹಣ ಕಳವು ಮಾಡಿರುವ ಆರೋಪ ಮಾಡಿದ್ದಾರೆ ಎನ್ನಲಾಗಿದೆ.
ಗಲಾಟೆಯಲ್ಲಿ ಹಲ್ಲೆ ನಡೆಸಿರುವ ಗೀತಾ ಪುತ್ರ ಶ್ರೀಧರ್ ಕೂಡ ಗಂಭೀರ ಗಾಯಗೊಂಡಿದ್ದು, ಈ ಹಲ್ಲೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಾಗಿದೆ. ಗಾಯಾಳುಗಳು ಸದ್ಯ ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುತ್ತಾರೆ