ಹಾಸನ : ಒಂಟಿ ಕಾಡಾನೆಯೊಂದು ದ್ವಿಚಕ್ರ ವಾಹನ ಸವಾರನ ಮೇಲೆ ದಾಳಿ ನಡೆಸಿದ್ದು, ಸವಾರ ಬೈಕ್ ಬಿಟ್ಟು ಓಡಿ ಹೋಗಿ ತನ್ನ ಅಮೂಲ್ಯ ಪ್ರಾಣ ಉಳಿಸಿಕೊಂಡ ಘಟನೆ ನಡೆದಿದೆ. ಕೋಪಗೊಂಡಿದ್ದ ಕಾಡಾನೆಯೊಂದು ಹೀರೋ ಸ್ಪ್ಲೆಂಡರ್ ದ್ವಿಚಕ್ರ ವಾಹನ ತುಳಿದು ಜಖಂಗೊಳಿಸಿದ ಚಿತ್ರಣ ಸಿಕ್ಕಿದೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಿರೇಹಳ್ಳಿ ಗ್ರಾಮದ ಶ್ರೀನಿವಾಸ ಎಸ್ಟೇಟ್ ಸಮೀಪ ನಿನ್ನೆ 13 ಆಗಸ್ಟ್ 2023 ಭಾನುವಾರ ರಾತ್ರಿ ಕಾಟಳ್ಳಿ ಗ್ರಾಮದ ಚೇತನ್ ಅವರು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಲು ಮುಂದಾಗಿದೆ ಎನ್ನಲಾಗಿದೆ. ಈ ವೇಳೆ ಗಾಬರಿಗೊಂಡ ಚೇತನ್ ಬೈಕ್ ಬಿಟ್ಟು ಅಲ್ಲಿಂದ ಸ್ವಲ್ಪ ದೂರ ಓಡಿಹೋಗಿರುತ್ತಾರೆ.
ಆಗ ಕಾಡಾನೆ ಬೈಕನ್ನು ತುಳಿದು ಬಿಡುತ್ತದೆ .
ಘಟನೆ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಸಾರ್ವಜನಿಕರು ಹಾಗೂ ವಾಹನ ಸವರಾರು ಕಾಟಳ್ಳಿ, ಕಿರೇಹಳ್ಳಿ, ಮಾಸವಳ್ಳಿ ಮಾರ್ಗವಾಗಿ ಸಂಚರಿಸುವವರು ಎಚ್ಚರಿಕೆಯಿಂದ ಇರುವಂತೆ ತಿಳಿಸುತ್ತಿದ್ದಾರೆ.