ಬೆಳ್ಳಂಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ದಿಡೀರ್ ಭೇಟಿ ನೀಡಿದ ಉಪವಿಭಾಗಾಧಿಕಾರಿ ಶೃತಿ

0

ಸಕಲೇಶಪುರ : ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಆಹಾರ ಹಾಗೂ ಸುಚಿತ್ವ ಇಲ್ಲದೇ ಇರುವ ಕುರಿತು ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆ ಇಂದು ಮುಂಜಾನೆ ಇಂದಿರಾ ಕ್ಯಾಂಟೀನ್ ಗೆ ದಿಢೀರ್ ಭೇಟಿ ನೀಡಿ ಶಾಕ್ ನೀಡಿದ ಉಪವಿಭಾಗಾಧಿಕಾರಿ ಎಂ. ಕೆ ಶೃತಿ.

ಅಡಿಗೆ ಕೊಠಡಿ, ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿ ಅಸಮಾಧಾನ ವ್ಯಕ್ತಪಡಿಸಿದರು.ಉಪವಿಭಾಗಾಧಿಕಾರಿ ಶ್ರುತಿಯವರು ಸಾರ್ವಜನಿಕರಂತೆ ಕ್ಯಾಂಟೀನ್ ನಲ್ಲಿ ತಿಂಡಿ ತಿಂದು ಅಲ್ಲಿನ ಅಡಿಗೆ ಸಿಬ್ಬಂದಿಗಳಿಗೆ ಪಟ್ಟಣದ ಜನತೆಗೆ ಒಳ್ಳೆಯ ಗುಣ ಮಟ್ಟದ ಆಹಾರ ನೀಡಬೇಕು ಇಲ್ಲಿ ಬಂದು ತಿನ್ನುವವರು ಪೌರ ಕಾರ್ಮಿಕರು ಮತ್ತು

ಆಸ್ಪತ್ರೆಗೆ ಬಂದಂತ ಜನಸಾಮಾನ್ಯರು ಹಾಗೂ ಬಡವರು ತಿನ್ನುತ್ತಾರೆ ಇದು ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಯ ಆಶಯದಂತೆ ಹಸಿದವರಿಗೆ ಅನ್ನ ನೀಡಬೇಕು ಎಂದರು.ನೀವು ಪ್ರತಿನಿತ್ಯ ಸರ್ಕಾರದ ಮೆನು ಚಾರ್ಟ್ ಪ್ರಕಾರ ಊಟ ತಿಂಡಿ ನೀಡಬೇಕು ಮತ್ತು

ಸ್ವಚ್ಛತೆ, ಶುದ್ಧ ಕುಡಿಯುವ ನೀರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಮತ್ತು ಆಸ್ಪತ್ರೆಯ ರೋಗಿಗಳಿಗೆ ಬಿಸಿ ನೀರು ಗಂಜಿ ಕೊಡುವಂತಹ ಕೆಲಸ ನೀವು ಮಾಡಬೇಕು ಎಂದು ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಿಗೆ ಮತ್ತು

ಕ್ಯಾಂಟೇನಿನ ಅಡಿಗೆ ಸಿಬ್ಬಂದಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಪುರಸಭಾ ಮುಖ್ಯ ಅಧಿಕಾರಿ ರಮೇಶ್ ಹಾಜರಿದ್ದರು.

LEAVE A REPLY

Please enter your comment!
Please enter your name here