ಹಾಸನ : ಜಿಲ್ಲಾ ಔಧ್ಯಮಿಕ ಕೇಂದ್ರ ಯೋಜನೆ ಮತ್ತು ವೃತ್ತಿಪರ ಕುಶಲಕರ್ಮಿಗಳ ಸುಧಾರಿತ ಉಪಕರಣಗಳ ವಿತರಣೆ ಯೋಜನೆಯಡಿ ಉಪಕರಣಗಳ ವಿತರಣೆಗೆ ಅರ್ಜಿ ಆಹ್ವಾನಿಸಿರುವ ಬಗ್ಗೆ.
2023-24 ನೇ ಸಾಲಿನಲ್ಲಿ ಜಿಲ್ಲಾ ಔಧ್ಯಮಿಕ ಕೇಂದ್ರ ಯೋಜನೆಯಡಿಯಲ್ಲಿ ಹಾಸನ ಜಿಲ್ಲೆಯ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಮಹಿಳಾ ಫಲಾನುಭವಿಗಳಿಗೆ ಉಚಿತವಾಗಿ ವಿದ್ಯುತ್ ಚಾಲಿತ ಹೊಲಿಗೆಯಂತ್ರಗಳನ್ನು ಹಾಗೂ
ವೃತ್ತಿನಿರತ ಕುಶಲಕರ್ಮಿಗಳಿಗೆ ಸುಧಾರಿತ ಉಪಕರಣಗಳ ವಿತರಣೆ ಯೋಜನೆಯಡಿ ಗ್ರಾಮೀಣ ಕುಶಲಕರ್ಮಿಗಳಿಗೆ ಮರಗೆಲಸ, ಗಾರೆಕೆಲಸ, ಎಲೆಕ್ನಿಕಲ್ ರಿಪೇರಿ, ಬೋರ್‌ಬೇಲ್ ರಿಪೇರಿ/ಮೋಟರ್ ವೈಂಡಿಂಗ್ ಉಪಕರಣಗಳನ್ನು ಉಚಿತವಾಗಿ ನೀಡಲಾಗುತ್ತಿದು, ಉಪನಿರ್ದೇಶಕರು(ಗ್ರಾ.ಕೈ) ಜಿಲ್ಲಾ ಪಂಚಾಯತ್, ಕೈಗಾರಿಕಾ ವಿಭಾಗ, ಹಾಸನ. ರವರ ಕಛೇರಿಯಲ್ಲಿ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು
ಹಾಸನ ಜಿಲ್ಲಾ ಪಂಚಾಯತ್ :
ನಲ್ಲಿ ಅರ್ಜಿಯನ್ನು ಆನ್‌ಲೈನ್ ಮೂಲಕ ದಾಖಲಾತಿಗಳೊಂದಿ ದಿನಾಂಕ: 15-11-2023 ರ ವರೆಗೆ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಿಸಲಾಗಿದೆ. ನಿಗದಿತ ಗುರಿಗಿಂತ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾದಲ್ಲಿ ಲಾಟರಿ ಮುಖಾಂತರ ಆಯ್ಕೆ ಪ್ರಕ್ರಿಯೆ ನಡೆಸಲಾಗುವುದು.
-ಉಪನಿರ್ದೇಶಕರು (ಗ್ರಾ.ಕೈ) ಜಿಲ್ಲಾ ಪಂಚಾಯತ್, ಕೈಗಾರಿಕಾ ವಿಭಾಗ, ಹಾಸನ.