ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ಸ್ ಕಾರ್ಯಕ್ರಮ

0

ಹಾಸನದ ರತ್ನಂಸಿಲ್ಕ್ಸ್ ದರ್ಶನ್ ಅವರಿಗೆ ಉತ್ತಮ ಬ್ಯುಸಿನೆಸ್ ಅವಾರ್ಡ್

ಹಾಸನ: ಕರ್ನಾಟಕ ಟ್ರೇಡರ್ಸ್ ಚೇಂಬರ್ ಆಫ್ ಕಾಮರ್ಸ್ ಇದೇ ತಿಂಗಳು 18, 19 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಕರ್ನಾಟಕ ಬ್ಯುಸಿನೆಸ್ ಅವಾರ್ಡ್ಸ್ ಅದ್ದೂರಿ ಕಾರ್ಯಕ್ರಮದಲ್ಲಿ ನಗರದ ರತ್ನಂ ಸಿಲ್ಕ್ಸ್ ಗೆ ಪ್ರಶಸ್ತಿ ಲಭಿಸಿದೆ.

ಮಲೆನಾಡಿನ ಜಿಲ್ಲೆಗಳ ವಿಭಾಗದ ಅತ್ಯುತ್ತಮ ಸಿಲ್ಕ್ ಸೀರೆಗಳ ಮಾರಾಟಗಾರರು ಎಂದು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಸೀರೆಗಳ ಗುಣಮಟ್ಟ ಗೂಗಲ್ ರಿವ್ಯೂಸ್, ಕೆಲವೊಂದು ರಿಪೋರ್ಟ್ಸ್, ಆನೈನ್ ಸೇಲ್ ನಲ್ಲಿ ಮಾಡಿರುವ ಸಾಧನೆ ಹಾಗೂ ಗ್ರಾಹಕರ ಸಂತೃಪ್ತಿ ವರದಿಗಳ ಅನುಸಾರ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಮಲೆನಾಡು ವಿಭಾಗದ ನಾಲ್ಕು ಜಿಲ್ಲೆಗಳಲ್ಲಿ ರತ್ನಂ ಸಿಲ್ಸ್‌ಗೆ ಪ್ರಶಸ್ತಿ ಕೊಡಮಾಡಲಾಗಿದ್ದು, ರತ್ನಸಿಲ್ಕ್ಸ್ ಮಾಲೀಕರಾದ ವೆಂಕಟೇಶ್ ರತ್ನ ಹಾಗೂ ದರ್ಶನ್ ರಾಜ್ ಹಾಜರಿದ್ದು, ಪ್ರಶಸ್ತಿ ಸ್ವೀಕರಿಸಿದರು.

ಪ್ರಶಸ್ತಿ ಸ್ವೀಕರಿಸಿದ ನಂತರ ಮಾತನಾಡಿದ ಅವರು ಈ ಪ್ರಶಸ್ತಿ ಸಹಜವಾಗಿ ಸಂತಸ ತಂದಿದೆ. ಈ ಮೂಲಕ ತಮ್ಮ ಗುಣಮಟ್ಟವನ್ನು ಇನ್ನಷ್ಟು ಮೇಲ್ದರ್ಜೆಗೆ ಕೊಂಡೊಯ್ಯಲು ಪ್ರಯತ್ನಿಸುತ್ತೇನೆ.

ಗ್ರಾಹಕರಿಗೆ ಅತ್ಯುತ್ತಮ ಸೀರೆಗಳನ್ನು ಕೈಗೆಟುಕುವ ಹಾಗೂ ಹೋಲ್‌ಸೇಲ್ ದರದಲ್ಲಿ ನೀಡುತ್ತೇವೆ ಎಂದು ಹೇಳಿದರು. ಈ ಪ್ರಶಸ್ತಿ ಗ್ರಾಹಕರ ಸಹಕಾರ, ಉತ್ತೇಜನದಿಂದ ದೊರೆತಿದ್ದು ಅವರಿಗೆ ಅರ್ಪಿಸುವುದಾಗಿ ನುಡಿದರು.

LEAVE A REPLY

Please enter your comment!
Please enter your name here