ಹಾಸನ: ಚನ್ನರಾಯಪಟ್ಟಣ ತಾಲೂಕಿನ ಬಾಗೂರು-ನವಿಲೆ ಸುರಂಗ ಮಾರ್ಗದ ನಾಲೆ ಬಳಿ ಮಂಗಳವಾರ ಬೈಕ್ ನಿಂತಿದ್ದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಹೌದು, ಕೇವಲ ಬೈಕ್ ಮಾತ್ರ ನಿಂತಿದ್ದರೇ ಯಾರೋ ಸ್ಥಳೀಯರು ಬೈಕ್ ನಿಲ್ಲಿಸಿ ಜಮೀನು ಕೆಲಸಕ್ಕೆ ಹೋಗಿದ್ದಾರೆ ಎನ್ನಬಹುದಿತ್ತು. ಆದರೆ ಬೈಕ್ ಪಕ್ಕ ಯುವಕ, ಯುವತಿಯ ಚಪ್ಪಲಿಗಳಿವೆ. ದಿನ ಕಳೆದರೂ ಅವರು ಮರಳಿಲ್ಲ. ಹೀಗಾಗಿ ಯಾರೋ. ಪ್ರೇಮಿಗಳು ಕಾಲುವೆಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಇಬ್ಬರ ಪ್ರೀತಿಗೆ ಎರಡೂ ಮನೆ ಕಡೆಯಿಂದ ಒಪ್ಪಿಗೆ ಸಿಗದ ಪರಿಣಾಮ ಇಲ್ಲಿ ಗುರುತಿಗಾಗಿ ಬೈಕ್ ಹಾಗೂ ಚಪ್ಪಲಿಗಳನ್ನು ಬಿಟ್ಟು ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಅಥವಾ ಆತ್ಮಹತ್ಯೆ ಮಾಡಿಕೊಂಡಿರುವಂತೆ ಮನೆಯವರನ್ನು ದಿಕ್ಕು ತಪ್ಪಿಸಲು ಹೈಡ್ರಾಮ ಸೃಷ್ಟಿಸಿ ಎಲ್ಲಿಗಾದರೂ ಪರಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಚನ್ನರಾಯಪಟ್ಟಣ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ,
ನವೆಂಬರ್ 16 ರಂದು ಬಾಗೂರು ನವಿಲೆ ಸುರಂಗ ಕಾಲುವೆ ಬಳಿ ಬೈಕ್ ನಿಲ್ಲಿಸಿ ಕಾಣೆಯಾಗಿದ್ದ ಜೋಡಿ ಹೆಣವಾಗಿ ಪತ್ತೆ!! ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕನ್ನು ಕ್ಲಿಕ್ ಮಾಡಿ
https://m.facebook.com/story.php?story_fbid=3402349689874941&id=195025720607370