


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕ್ಷೌರ್ಯ ನಿರ್ವಹಣೆ ಘಟಕದ ಸದಸ್ಯರು ಸ್ವಚ್ಚತಾ ಅಭಿಯಾನ ನಡೆಸಿದರು. ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ನೆಹರು ನಗರದಲ್ಲಿ ವಾಸಿಸುತ್ತಿರುವ ವರಲಕ್ಷ್ಮಿ ಎಂಬುವವರ ಮನೆ ಇತ್ತೀಚೆಗೆ ಸುರಿದ ಮಳೆಯಿಂದ ಬಹುತೇಕ ಹಾಳಾಗಿದ್ದು ಇದನ್ನರಿತ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಘದ ಚಂದ್ರಶೇಖರ್ ಹಾಗೂ ಶೌರ್ಯ ತಂಡದ ಸದಸ್ಯರು ಆಗಮಿಸಿ ಸ್ವಚ್ಚತೆ ಮಾಡುವುದರ ಜೊತೆಗೆ ವರಲಕ್ಷ್ಮಿ ಅವರಿಗೆ ಸಹಾಯ ಮಾಡಿದರು.


