66/11ಕೆ.ವಿ ವಿ.ವಿ ಕೇಂದ್ರ ಬೇಲೂರು, ಗೆಂಡೆಹಳ್ಳಿ ಮತ್ತು ಉಗನೆ ವಿ.ವಿ ಕೇಂದ್ರದಲ್ಲಿ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ 66/11ಕೆ.ವಿ ಬೇಲೂರು, ಗೆಂಡೆಹಳ್ಳಿ ಮತ್ತು ಉಗನೆ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಪ್ರದೇಶಗಳ ವಿದ್ಯುತ್ ಸ್ಥಾವರಗಳಿಗೆ ಜ.20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಅಂದಿನ ಸಮಯದಲ್ಲಿ ಎಲ್ಲಾ ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸಬೇಕೆಂದು ಸೆಸ್ಕ್ ಟಿ.ಎಲ್ ಮತ್ತು ಎಸ್.ಎಸ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.