ಕುಶಾಲನಗರದ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ
ಮಕ್ಕಳ ದಿನಾಚರಣೆಯ ದಿನವೇ ಮಕ್ಕಳು ನೀರು ಪಾಲು: ಹಾಸನ ಗಡಿ ಭಾಗದಲ್ಲಿ ಶವಗಳು ತೇಲಿ ಬಂದು ಅವುಗಳನ್ನು ಸ್ಥಳೀಯ ಯುವಕರು ಮೇಲಕ್ಕೆ ತಂದಿದ್ದಾರೆ.
ಹಾಸನ – ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ತಾಯಿ ತನ್ನ ಮೂವರು ಮಕ್ಕಳನ್ನು ನೀರಿಗೆ ತಳ್ಳಿ ತಾನು ಸಹ ನೀರಿಗೆ ಧುಮುಕಿ ರುವ ಪ್ರಕರಣ ಶನಿವಾರ ಬೆಳಿಗ್ಗೆ 10:30 ಸಮಯದಲ್ಲಿ ನಡೆದಿದೆ. ಒಂದು ಹೆಣ್ಣು ಮಗು ಮತ್ತು ಇಬ್ಬರು ಗಂಡು ಮಕ್ಕಳು ಸೇರಿದಂತೆ ಮೂವರು ಮಕ್ಕಳ ಶವ ಸಿಕ್ಕಿದ್ದು ತಾಯಿಯ ಶವ ಸಿಕ್ಕಿರುವುದಿಲ್ಲ.
ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಇವರು ತೊರೆನೂರು ಶುಂಟಿ ಶುದ್ಧೀಕರಣದಲ್ಲಿ ಕೆಲಸ ಮಾಡುತ್ತಿದ್ದರು. ಗಂಡ ಮತ್ತು ಹೆಂಡತಿ ನಡುವೆ ಜಗಳವೇ ಇದಕ್ಕೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ತೊರೆನೂರು ಗ್ರಾಮದ ಬಳಿ ಇರುವ ದೊಡ್ಡ ಕಾವಲೆಯಲ್ಲಿ ಮೂವರು ಮಕ್ಕಳೊಂದಿಗೆ ತಾಯಿಯು ನೀರಿಗೆ ಧುಮುಕಿದ್ದಾಳೆ ಎಂಬ ಮಾಹಿತಿ.