ಹಾಸನ : ಗಣಪತಿ ವಿಸರ್ಜನೆ ಮಾಡಿ ವಾಪಾಸ್ ಬರುವಾಗ ಅವಘಡನಡೆದಿದೆ , ಟ್ರ್ಯಾಕ್ಟರ್‌ಗೆ ವಿದ್ಯುತ್ ತಂತಿ ತಗುಲಿ ಓರ್ವ ಸಾವನ್ನಪ್ಪಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕಿನ, ಕತ್ತಿಮಲ್ಲೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಬೆಳವಾಡಿ ಗ್ರಾಮದ ಯಶ್ವಂತ್ (14) ಮೃತ ಬಾಲಕನಾಗಿದ್ದಾನೆ. ಪ್ರಮೋದ್, ಮೋಹನ್ ಸ್ಥಿತಿ ಗಂಭೀರವಾಗಿರುತ್ತದೆ.
ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜಿಸಿ ಟ್ರ್ಯಾಕ್ಟರ್‌ನಲ್ಲಿ ವಾಪಾಸ್ ಬರುತ್ತಿದ್ದ ಹತ್ತಕ್ಕೂ ಹೆಚ್ಚು ಮಂದಿ ಇದ್ದ ಸಂದರ್ಭದಲ್ಲಿ, ಕೆರೆಯ ಬಳಿ ತಳಮಟ್ಟದಲ್ಲಿ ಹಾದು ಹೋಗಿದ್ದ ವಿದ್ಯುತ್ ತಂತಿಯಿಂದ, ಕೆರೆಯಿಂದ ಬರುವಾಗ ಟ್ರ್ಯಾಕ್ಟರ್‌ಗೆ ಕಟ್ಟಿದ್ದ ಕಬ್ಬಿಣದ ಕಮಾನಿಗೆ ತಗುಲಿದ ವಿದ್ಯುತ್ ತಂತಿ ಅವಘಡ ಸಂಬವಿಸಿದೆ, ವಿದ್ಯುತ್ ಪ್ರವಹಿಸುತ್ತಲೆ ಟ್ರ್ಯಾಕ್ಟರ್ ಮೇಲೆ ಸಾವನ್ನಪ್ಪಿದ ಯಶ್ವಂತ್, ಯಶ್ವಂತ್ ಸಂಬಂಧಿಕರ ಮನೆಯಲ್ಲಿ ಓದಿಕೊಂಡಿದ್ದನಂತೆ. ಟ್ರ್ಯಾಕ್ಟರ್‌ನಲ್ಲಿದ್ದ ಪ್ರಮೋದ್, ಮೋಹನ್ ಸ್ಥಿತಿ ಗಂಭೀರ, ಜಿಲ್ಲಾಸ್ಪತ್ರೆಗೆ ರವಾನಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ವಿದ್ಯುತ್ ಶಾಕ್ ಹೊಡೆಯುತ್ತಲೆ ಟ್ರ್ಯಾಕ್ಟರ್‌ನಿಂದ ಇಳಿದು ಓಡಿದ ಹಲವರು ಬಚಾವ್ ಆಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆನಡೆಸಿದ್ದು , ಹಾಸನ ಜಿಲ್ಲೆಯ ಅರಕಲಗೂಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿರುತ್ತದೆ.