Home Articles ಛಾಯಾಗ್ರಾಹಕರು ಸಾರ್ವಜನಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಛಾಯಾ ವೃತ್ತಿ ಬಾಂಧವರಿಗೆ ಫ್ರೆಂಟ್ ಲೈನ್ ವಾರಿಯರ್ ಎಂದು ಗುರುತಿಸಿ...

ಛಾಯಾಗ್ರಾಹಕರು ಸಾರ್ವಜನಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಛಾಯಾ ವೃತ್ತಿ ಬಾಂಧವರಿಗೆ ಫ್ರೆಂಟ್ ಲೈನ್ ವಾರಿಯರ್ ಎಂದು ಗುರುತಿಸಿ ಅವರಿಗೂ ಲಸಿಕೆಗಳನ್ನು ನೀಡಬೇಕು – ಚಂದ್ರಶೇಖರ ಬೆಳಗೊಂಬ (ಈಸಂಜೆ ಪತ್ರಕರ್ತರು ಕೆ.ಎಂ. ಹಾಲಪ್ಪ ಅವರ ಮಗ

0

ಛಾಯಾಗ್ರಾಹಕರು ಸಾರ್ವಜನಿಕ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಛಾಯಾ ವೃತ್ತಿ ಬಾಂಧವರಿಗೆ ಫ್ರೆಂಟ್ ಲೈನ್ ವಾರಿಯರ್ ಎಂದು ಗುರುತಿಸಿ ಅವರಿಗೂ ಲಸಿಕೆಗಳನ್ನು ನೀಡಬೇಕು

ಪ್ರಸ್ತುತ ಪರಿಸ್ಥಿತಿಯಲ್ಲಿ ಕೊವಿನ ಮೇಲಿನ ಸಾಲ ಬ್ಯಾಂಕುಗಳ ಮೂಲಕ ನೀಡುವುದು ಛಾಯಾಗ್ರಾಹಕರು ತೆಗೆದುಕೊಂಡಿರುವ ಬ್ಯಾಂಕ್ ಸಾಲದ ಇ ಎಂ ಐ ಕಂತುಗಳನ್ನು ಮುಂದೂಡಬೇಕು ಹಾಗೂ ಅದರ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು

ಕೆಲಸವಿಲ್ಲದೆ ಕಂಗಾಲಾಗಿರುವ ಛಾಯಾಚಿತ್ರಗ್ರಾಹಕರಿಗೆ ಫುಡ್ ಕಿಟ್ ಹಾಗೂ ಆರೋಗ್ಯ ಸೇವೆಯನ್ನು ಒದಗಿಸಿಕೊಡಬೇಕು. –

-ಚಂದ್ರಶೇಖರ್ ಬೆಳಗುಂಬ ಹಾಲಪ್ಪ    
ಅಧ್ಯಕ್ಷರು
ಬೆಂಗಳೂರು ಗ್ರಾಮಾಂತರ
ಹಸಿರು ಕರ್ನಾಟಕ ಪರಿಸರ              
ರಕ್ಷಣಾ ವೇದಿಕೆ.(ರಿ) (ಈಸಂಜೆ ಪತ್ರಕರ್ತರು ಕೆಎಂ ಹಾಲಪ್ಪ ಅವರ ಮಗ )

ಛಾಯಾಗ್ರಾಹಕರನ್ನು ಅಸಂಘಟಿತ ಕಾರ್ಮಿಕ ವಲಯಕ್ಕೆ ಸೇರಿಸಿ, ಕಾರ್ಮಿಕಇಲಾಖೆ ವಿವಿಧ ಯೋಜನೆ ಒದಗಿಸಬೇಕು. ಛಾಯಾಗ್ರಾಹಕರಿಗೆ ಕಾರ್ಮಿಕ ಸ್ಮಾರ್ಟ್‌ ಕಾರ್ಡ್‌ ನೀಡಬೇಕು. 151 ವರ್ಷದ ಇತಿಹಾಸವಿರುವ ಛಾಯಾಗ್ರಹಣಕ್ಕೆ ಕರ್ನಾಟಕ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಬೇಕು.
ವೃತ್ತಿಪರ ಛಾಯಾಗ್ರಾಹಕರ ವ್ಯಾಪಾರದ ನೆರವಿಗೆ ಸರ್ಕಾರ ಹಾಗೂ ಬ್ಯಾಂಕ್‌ಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು. ಸರ್ಕಾರಿ ಕಚೇರಿಗಳಲ್ಲಿ ವೆಬ್‌ ಕ್ಯಾಮರಾಗಳಿಂದ ಛಾಯಾಚಿತ್ರ ತೆಗೆಯುವುದು ನಿಷೇಧಿಸಿ, ವೃತ್ತಪರ ಛಾಯಾಗ್ರಾಹಕರಿಗೆ ನೀಡುವುದು .
ವರ್ಷದ 6 ತಿಂಗಳು ಮದುವೆ, ನಾಮಕರಣ, ಪ್ರಿವೆಡ್ಡಿಂಗ್ ಹೀಗೆ ಹಲವಾರು ಸುಸಂದರ್ಭಗಳಲ್ಲಿ ಫೋಟೋ ಹಾಗೂ ವಿಡಿಯೋ ಮಾಡಿಕೊಂಡು ಜೀವನ ನಡೆಸುತ್ತಿದ್ದ ಹಲವು ಕುಟುಂಬಗಳ ಮೇಲೆ ಲಾಕ್ಡೌನ್ ಎಫೆಕ್ಟ್ ತಟ್ಟಿದ್ದು, ಇದಕ್ಕೆ.‌ ಏಕಾಏಕಿ ಲಾಕ್‍ಡೌನ್ ಘೋಷಿಸಿದ್ದರಿಂದ ಮದುವೆ ಹಾಗೂ ಶುಭ ಸಮಾರಂಭಗಳೆಲ್ಲವೂ ರದ್ದಾಗಿವೆ.‌ ಇದರಿಂದ ಯಾವುದೇ ಕಾರ್ಯಕ್ರಮಗಳಿಲ್ಲದ ಪರಿಣಾಮ‌ ವ್ಯವಹಾರವೂ ಇಲ್ಲದೆ ಛಾಯಾಗ್ರಾಹಕರ ಕುಟುಂಬಗಳು ಪ್ರತಿನಿತ್ಯ ಪರದಾಡುವಂತಾಗಿದೆ.
ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಸ್ಟುಡಿಯೋ ಆರಂಭಿಸಿದ್ದವರ ಪಾಡಂತೂ ಹೇಳತೀರದ್ದಾಗಿದೆ. ಕೆಲವರು ಬದುಕಿನ ಬಂಡಿ ಎಳೆಯಲು ಬೇರೆ ದಾರಿ ಕಾಣದೆ ನಗರಗಳು ಹಾಗೂ ಹಳ್ಳಿ, ಹಳ್ಳಿಗಳಿಗೆ ಹೋಗಿ ಹಣ್ಣು, ತರಕಾರಿ ಮಾರಾಟ ಮಾಡುತ್ತಿದ್ಧಾರೆ. ತೀರಾ ಸಂಕಷ್ಟದಲ್ಲಿರುವ ಛಾಯಾಗ್ರಾಹಕರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ನೀಡಬೇಕೆಂದು ಮನವಿ ಮಾಡಿದ್ದಾರೆ.
.ಛಾಯಾಗ್ರಾಹಕ ಸಂಕಷ್ಟಕ್ಕೆ ಸರ್ಕಾರ ಪ್ಯಾಕೇಜ್ ಘೋಷಿಸಲಿ.ಕಳೆದ ಬಾರಿ ಕೂಡ ಸರ್ಕಾರದಿಂದ ಯಾವುದೇ ಸಹಾಯ ಬಂದಿಲ್ಲ.ಛಾಯಾಗ್ರಾಹಕರು ತೀವ್ರ ಸಂಕಷ್ಟ ದಲ್ಲಿ ಇದ್ದಾರೆ..ಇನ್ನಾದರೂ ಸರ್ಕಾರ ಸಹಾಯ ಹಸ್ತ ನೀಡಲಿ…

ಚಂದ್ರಶೇಖರ್ ಬೆಳಗುಂಬ ಹಾಲಪ್ಪ , ಹಾಸನ

NO COMMENTS

LEAVE A REPLY

Please enter your comment!
Please enter your name here

error: Content is protected !!
%d bloggers like this: