ಕ್ರೀಡೆ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯ. ಈ ನಿಟ್ಟಿನಲ್ಲಿ ಯುವ ಪೀಳಿಗೆ ಸರಿದಾರಿಯತ್ತ ಸಾಗುವ ಮೂಲಕ ಉಜ್ವಲ ಭವಿಷ್ಯವನ್ನು ಹೊಂದಬೇಕು ಎನ್ನುವಲ್ಲಿ ಹಾಸನದ ಕ್ರೀಡಾ ಇಲಾಖೆ ಕಾರ್ಯಸನ್ನತವಾಗಿದೆ. ಇದರ ಫಲವಾಗಿ ಈ ಬಾರಿಯ ದಸರಾ ಸಿಎಂ ಕಪ್ ಸ್ಪರ್ಧೆಯಲ್ಲಿ ಹಾಸನ ಮೂಲದ ಇಬ್ಬರು ಕ್ರೀಡಾಪಟುಗಳಾದ ಗುಣಸಾಗರ ಮತ್ತು ಧನುಷ್ ಇವರುಗಳು ಪ್ರಥಮ ಸ್ಥಾನವನ್ನ ಪಡೆದಿದ್ದಾರೆ.
ಮುಂದೆ ಗುರಿ ಇರಬೇಕು ಹಿಂದೆ ಗುರು ಇರಬೇಕು ಎನ್ನುವ ಮಾತು ಸಾರ್ವಕಾಲಿಕ. ಅದರಂತೆ ಸಿಎಂ ಕಪ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನ ಪಡೆದಿರುವ ಇಬ್ಬರೂ ಕ್ರೀಡಾಪಟುಗಳಿಗೆ ತರಬೇತುದಾರರಾಗಿದ್ದವರು ಕೋಚ್ ಸುಮಂತ್ ಅವರು. ಅವರ ಗರಡಿಯಲ್ಲಿ ತರಬೇತಿ ಪಡೆದ ಈ ಇಬ್ಬರು ಕ್ರೀಡಾಪಟುಗಳು ಇಂದು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಇದರ ಜೊತೆಗೆ ಹಾಸನ ಕ್ರೀಡಾಂಗಣದ ಜಿಲ್ಲಾ ಸಹಾಯಕ ನಿರ್ದೇಶಕರು , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹರೀಶ್ ಅವರು ಕೂಡ ಯುವಪೀಳಿಗೆಯಲ್ಲಿ ಕ್ರೀಡಾಸಕ್ತಿಯನ್ನು ಹೆಚ್ಚಿಸುವ ಹಲವು ಕಾರ್ಯಗಳಲ್ಲಿ ನಿರತರಾಗಿದ್ದಾರೆ, ಜೊತೆಗೆ ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ಹಲವರನ್ನ ಪ್ರೋತ್ಸಾಹಿಸುವಲ್ಲಿ ಸದಾ ಮುಂಚೂಣಿಯಲ್ಲಿರುತ್ತಾರೆ. ಅದರ ಫಲವೇ ಈ ಬಾರಿಯ ಜಯ.
ಅದರೊಂದಿಗೆ ಜಿಮ್ನಾಸ್ಟಿಕ್ ಕ್ರೀಡಾಪಟುವಾದ ಲೋಕೇಶ್ ಮತ್ತು ಗಣೇಶ್ ಸಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಿದರು.