ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆ

0

ದಿನಾಂಕ 19.10.2023 ರಂದು ರಾಮನಗರದಲ್ಲಿ ನಡೆದ ರಾಜ್ಯಮಟ್ಟದ ಪ್ರೌಢ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾಗವಹಿಸಿ, ದೆಹಲಿಯಲ್ಲಿ ನಡೆಯುವ ರಾಷ್ಟ್ರ ಮಟ್ಟದ ಪಂದ್ಯಾವಳಿಗೆ ಹಾಸನದ ಚಿನ್ಮಯ್ ಕೆ ಗೌಡ ಮೊದಲ ಶ್ರೇಯಾಂಕಿತ ಆಟಗಾರನಾಗಿ ಆಯ್ಕೆಯಾಗಿದ್ದು, ಬೆಂಗಳೂರಿನ ಪವನ್, ಪುನೀತ್, ಕಿಶನ್ ಮತ್ತು ಹಾಸನದ ತಿಲಕ್ ಕುಮಾರ್ ರವರು ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಚಿನ್ಮಯ್ ಕೆ ಗೌಡ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಅಂಬಿಗೋಡನಹಳ್ಳಿ ಗ್ರಾಮದ ಶ್ರೀ ಎ ಬಿ ಕಾಂತರಾಜ ಮತ್ತು ಶ್ರೀಮತಿ ಎ ಆರ್ ವನಜಾಕ್ಷಿ ಯವರ ಪುತ್ರನಾಗಿದ್ದು, ಹಾಸನದ ಹೇಮಾವತಿನಗರದ ಎಲೈಟ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಹಾಸನ ನಗರದ ಒಳಾಂಗಣ ಕ್ರೀಡಾಗಣದಲ್ಲಿ ಬ್ಯಾಡ್ಮಿಂಟನ್ ತರಬೇತಿ ಪಡೆಯುತ್ತಿದ್ದಾನೆ.

ಚಿನ್ಮಯ್ ಅಥ್ಲೆಟಿಕ್ಸ್ ನಲ್ಲೂ ಆಸಕ್ತಿ ಹೊಂದಿದ್ದು ಜಾವೆಲಿನ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಕ್ರೀಡೆ ಜೊತೆಗೆ ಸಂಗೀತದಲ್ಲೂ ಆಸಕ್ತಿ ಹೊಂದಿದ್ದು ಕೀ ಬೋರ್ಡ್ ಮತ್ತು ಗಿಟಾರ್ ಅಭ್ಯಾಸ ಮಾಡುತ್ತಿದ್ದಾನೆ. ಅದೇ ರೀತಿ ವಿದ್ಯಾಭ್ಯಾಸದಲ್ಲೂ ಕೂಡ ಮುಂಚೂಣಿಯಲ್ಲಿದ್ದಾನೆ.

ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವ ಎಲ್ಲರಿಗೂ ಅಭಿನಂದನೆಗಳು ಹಾಗೂ ರಾಷ್ಟ್ರಮಟ್ಟದಲ್ಲಿ ಜಯಗಳಿಸಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಹಾರೈಸುತ್ತೆವೆ.

LEAVE A REPLY

Please enter your comment!
Please enter your name here