ಮೊನ್ನೆಯಷ್ಟೆ ಗ್ರಾಮ ಲೆಕ್ಕಿಗ ಆತ್ಮ ಹತ್ಯೆ ಮಾಡಿಕೊಂಡಿದ್ದರು , ಈಗ ಮತ್ತೊಬ್ಬ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ

0

ಹಾಸನ / ಸಕಲೇಶಪುರ: ಸಕಲೇಶಪುರ ಪುರಸಭೆ ಕಂದಾಯ ನಿರೀಕ್ಷಕ ಗೋಪಾಲಕೃಷ್ಣ (41) ಹಾಸನ ನಗರದಲ್ಲಿ ಬುಧವಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.,

ಹಾಸನ ನಗರದ ಹೊರ ವಲಯದ ಚಿಕ್ಕಕೊಂಡಗೊಳ ನಿವಾಸಿಯಾಗಿದ್ದ ಗೋಪಾಲಕೃಷ್ಣ ಒರ್ವ ಸರ್ಕಾರಿ ಅಧಿಕಾರಿಯಾಗಿದ್ದು , ಕಳೆದ ಎರಡು ವರ್ಷಗಳಿಂದ ಸಕಲೇಶಪುರ ಪುರಸಭೆ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದವರು , ಇವರು ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹಾಸನ ನಗರದ ಸತ್ಯಮಂಗಲ ಬಡಾವಣೆಯ ಅವರ ಸ್ವನಿವಾಸದಲ್ಲಿ ಮನೆಯಲ್ಲಿ ಹೆಂಡಿತಿ ಇಬ್ಬರು ಮಕ್ಕಳು ಯಾರೂ ಇಲ್ಲದ ಸಮಯ ಗಮನಿಸಿ ಬೆಳಿಗ್ಗೆ ಮಾಳಿಗೆಯ ಮೇಲೆ ನೇಣಿಗೆ ಶರಣಾಗಿ ಈ ಜೀವನದ ತಮ್ಮ ಅಧ್ಯಾಯ ಮುಗಿಸಿಕೊಂಡಿದ್ದಾರೆ .,

ಅವರ ಡೆತ್ ನೋಟ್ ನಲ್ಲಿ :
” ನನಗೆ ಬದುಕಲು ಇಷ್ಟವಿಲ್ಲ. ಆದ್ದರಿಂದ ಸಾಯುತ್ತಿದ್ದೇನೆ ” -ಗೋಪಾಲಕೃಷ್ಣ

ಅನಾರೋಗ್ಯ ಕಾರಣದಿಂದಲೇ ಬೇಲೂರು ತಾಲ್ಲೂಕು ಅರೇಹಳ್ಳಿ ಹೋಬಳಿ ಗ್ರಾಮ ಲೆಕ್ಕಿಗರೊಬ್ಬರು ಮೊನ್ನೆಯಷ್ಟೇ ಆತ್ಮಹತ್ಯೆ ಮಾಡಿಕೊಂಡಿದ್ದ ಘಟನೆ ಮಾಸುವ ಮುನ್ನವೇ ಇನ್ನೊಂದು ಘಟನೆ ಸರ್ಕಾರಿ ಅಧಿಕಾರಿಗಳ ವಲಯದಲ್ಲೂ ಕೌನ್ಸಲಿಂಗ್ ನಂತಹ ಚಿಕಿತ್ಸೆ ಮಾನಸಿಕ ಒತ್ತಡ ಸಂಬಾಲಿಸಲು ಅಗತ್ಯವಿದೆಯೇ ಎಂದು ಚರ್ಚೆ ಆರಂಭವಾಗಿದೆ.

LEAVE A REPLY

Please enter your comment!
Please enter your name here