ಆಲೂರು: ತಾಲೂಕಿನ ಕಣತೂರು ಪಂಚಾಯತಿ ವ್ಯಾಪ್ತಿಯ ನಾಕಲಗೂಡು ಗ್ರಾಮದ ಹರಿಣಾಕ್ಷಿ, ಜಯಂತ ಕುಮಾರ್ ರ ಪುತ್ರಿಯಾದ ದ ಗಾನವಿ ಅವರಿಗೆ ಆರ್ಥಿಕತೆಯ ( ಫೈನಾನ್ಸಿಯಲ್ ಮ್ಯಾನೇಜೆಂಟ್ ) ಎಂ ಕಾಂ ). ವಿಭಾಗದಲ್ಲಿ ಚಿನ್ನದ ಪದಕವನ್ನು ನೀಡಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ 103 ನೇ ವರ್ಷದ ವಾರ್ಷಿಕ ಘಟಕೋತ್ಸವವನ್ನು ಮೈಸೂರಿನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿವಿದ ವಿಭಾಗಗಳಲ್ಲಿ ಉತ್ತೀರ್ಣರಾದವರಿಗೆ ಹಾಗೂ ಗಣನಿಯವಾಗಿ ಸೇವೆ. ಸಾಧನೆ ಮಾಡಿದವರಿಗೆ ಪುರಸ್ಕಾರಮಾಡಲಾಯಿತು. ಗಾನವಿಗೆ ಆಲೂರು ತಾಪಂ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಅಭಿನಂದನೆ ಸಲ್ಲಿಸಿದ್ದಾರೆ.