ಉತ್ತರ ಪ್ರದೇಶ ಮೂಲದ ಉದ್ಯಮಿ ಮೇಲೆ ಹಾಸನದಲ್ಲಿ ಐಟಿ ದಾಳಿ

0

ಅಜಯ್ ಕುಮಾರ್ ಅರೋರ ಅವರನ್ನು ವಿಚಾರಣೆ ನಡೆಸುತ್ತಿರುವ ಐಟಿ ಅಧಿಕಾರಿಗಳು
ಹಾಸನ: ಆದಾಯ ತೆರಿಗೆ ಇಲಾಖೆಗೆ ವಂಚನೆ ಮಾಡಿದ್ದ ಆರೋಪದಡಿ ಉತ್ತರ ಪ್ರದೇಶ ಮೂಲದ ಉದ್ಯಮಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಾಸನ ಜಿಲ್ಲೆ, ಆಲೂರು ತಾಲೂಕಿನ,

ಪಾಳ್ಯ ಹೋಬಳಿ, ದಿಂಡಘಟ್ಟ ಗ್ರಾಮದ ರೋಸೆಟ್ ರೆಸಾರ್ಟ್‌ನಲ್ಲಿ ಯುಪಿ ಮೂಲದ ಅಜಯ್ ಕುಮಾರ್ ಅರೋರ ತಂಗಿದ್ದರು. ರೆಸಾರ್ಟ್ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಜಯ್ ಕುಮಾರ್‌ ಅರೋರ ಅವರನ್ನು ವಶಕ್ಕೆ ಪಡೆದು

ವಿಚಾರಣೆ ನಡೆಸುತ್ತಿದ್ದಾರೆ. ಅರೋರಾ ಬಳಿಯಿದ ದಾಖಲಾತಿಗಳನ್ನು ವಶಪಡಿಸಿಕೊಂಡಿರುವ ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here