ಹಾಸನ,ಸೆ.25(ಹಾಸನ್_ನ್ಯೂಸ್): ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ನಗರದ ಪಶುಸಂಗೋಪನಾ ಇಲಾಖೆಯ ವತಿಯಿಂದ ಸೆ.28 ರಂದು ನಾಯಿಗಳಿಗೆ ಉಚಿತವಾಗಿ ಹುಚ್ಚುನಾಯಿ ರೋಗ ನಿರೋಧಕ ಲಸಿಕೆ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ.
ರೇಬೀಸ್ ಪ್ರಮುಖವಾಗಿ ನಾಯಿಗಳಿಂದ ಹರಡುವುದರಿಂದ ಹುಚ್ಚುನಾಯಿ ರೋಗ ಬಾರದಂತೆ ತಡೆಗಟ್ಟಲು ನಾಯಿಗಳಿಗೆ ಪ್ರತಿವರ್ಷ ರೋಗ ನಿರೋಧಕ ಲಸಿಕೆ ಹಾಕಿಸುವುದರ ಮೂಲಕ ಈ ಭಯಾನಕ ರೋಗವನ್ನು ತಡೆಗಟ್ಟಬಹುದಾಗಿದೆ. ಆದ್ದರಿಂದ ನಾಯಿಗಳನ್ನು ಹೊಂದಿರುವವರು ಸೆ.28 ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸಂತೇಪೇಟೆಯಲ್ಲಿರುವ ಪಶು ಆಸ್ಪತ್ರೆಯಲ್ಲಿ ತಮ್ಮ ಶ್ವಾನಗಳಿಗೆ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳುವಂತೆ ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕರು ಕೋರಿದ್ದಾರೆ.
HassanNews ಸಖತ್ newzz ಮಗ