ಜಿಲ್ಲಾ ಪತ್ರಿಕಾಭವನದಲ್ಲಿ ಸನ್ಮಾನ ಸ್ವೀಕರಿಸಿ ಹರಿರಾಂ ಶಂಕರ್ ಮಾತು
ಹಾಸನ : ಜಿಲ್ಲೆಯ 14 ತಿಂಗಳ ಕಾಲ ಅಲ್ಪವಧಿ ಸೇವೆ ಸಲ್ಲಿಸಲಾಗಿದ್ದರೂ ಕೂಡ ಪೋಲಿಸ್ ಇಲಾಖೆ ಅಧಿಕಾರಿಗಳ ಮತ್ತು ಸಾರ್ವಜನಿಕರ ನಡುವೆ ಜನಸ್ನೇಹಿಯಾಗಿ ಪ್ರಾಮಾಣಿಕ ಕರ್ತವ್ಯ ಕಾರ್ಯನಿರ್ವಹಿಸಿದ ಬಗ್ಗೆ ನನಗೆ ತೃಪ್ತಿ ಇದೆ ಎಂದು ನಿರ್ಗಮಿತ ಎಸ್ಪಿ ಹರಿರಾಂ ಶಂಕರ್ ತಮ್ಮ ಮನದಾಳದ ಮಾತನ್ನು ತೋಡಿಕೊಂಡರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶುಕ್ರವಾರದಂದು ಹಾಸನ ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ರಾಜ್ಯಗುಪ್ತ ವಾರ್ತೆ ವಿಭಾಗಕ್ಕೆ ವರ್ಗಾವಣೆಯಾಗಿರುವ ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅವರಿಗೆ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಗ್ಗೆ ಬಂದು ಅಧಿಕಾರ ವಹಿಸಿಕೊಂಡ ದಿನದಂದು ಪೋಲಿಸರ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯದಿಂದ ಕೆಲಸ ನಡೆಯುವದಕ್ಕೆ ಹೆಚ್ಚು ಆದ್ಯತೆ ನೀಡಿದ್ದೇನೆ.
ಪೋಲಿಸ್ ಅಧಿಕಾರಿಗಳು ಸಹ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ವರ್ತನೆಗಳು ಸರಿಯಿಲ್ಲ ಎಂಬ ದೂರುಗಳ ಬಂದ ಮೇಲೆ ಅಧಿಕಾರಿಗಳ ಮೇಲೂ ನಿಗವಹಿಸಿ ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುಂತೆ ನಿದರ್ಶನ ನೀಡಿದ್ದೇನೆ. ಅಧಿಕಾರಿಗಳ ಮತ್ತು ಜನರ ನಡುವೆ ಜನಸ್ನೇಹಿಯಾಗಿ ಕೆಲಸ ಮಾಡುವ ಪದ್ದತಿಯನ್ನು ತಂದಿದ್ದೇನೆ. ನಾನು ಬಂದ ಮೊದಲು ಎಫ್ ಐ ಆರ್ ಗಳು ಆಗುತ್ತಿಲ್ಲ ಎಂದು ದೂರು ಹೆಚ್ಚು ಕೇಳು ಬರುತ್ತಿತ್ತು, ನಂತರದ ದಿನಗಳಲ್ಲಿ ಆ ಒಂದು ದೂರು ಕಡಿಮೆ ಅಗುತ್ತ ಬಂತು.
ಟ್ರಾಫಿಕ್ ಸಿಗ್ನಲ್ , ಕಾಣೆಯಾದ ಮಹಿಳೆ ಮತ್ತು ಮಕ್ಕಳ ಮೇಲೆ ನಿಗವಹಿಸಿ ಅವರು ಎಲ್ಲೆಲ್ಲಿ ಇದ್ದಾರೆ ಎನ್ನುಬ ಬಗ್ಗೆ ಯಶಸ್ವಿಯಾಗಿ ಕಾರ್ಯಚರಣೆ ನಡೆಸಿದ್ದೇವೆ. ಎಲ್ಲಾ ಹೋರಾಟಗಳಿಗೆ ನಾವು ಬೆಂಬಲ ಕೊಡುತ್ತಿವಿ, ಕೊಟ್ಟಿದ್ದೀವಿ. ಇದ್ದ ಸಮಯದಲ್ಲಿ ಸಿಬ್ಬಂದಿಗಳಿಗೆ, ಸಾರ್ವಜನಿಕರಿಗೆ ಹೋರಾಟಗಾರರನ್ನು ಜತೆಗೂಡಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೇನೆ ಎಂದು ಹೇಳಿದರು.