ಕೊಣನೂರು ಹೋಬಳಿಯ ಜನತೆಗೆ ಶುಭ ಸುದ್ದಿ:
ಕೊಣನೂರು: ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಮಾಜಿ ಸಚಿವರಾದ ಶ್ರೀ ಎ.ಮಂಜು ಅವರ ವಿಶೇಷ ಮನವಿ ಮತ್ತು ಅವರು ತೋರಿದ ಮುತುವರ್ಜಿಯಿಂದ ಹಾಸನ ಜಿಲ್ಲೆಯ ಉಸ್ತುವಾರಿ ಸಚಿವರಾದ ಶ್ರೀಯುತ ಗೋಪಾಲಯ್ಯನವರು ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವುದು ಶ್ಲಾಘನೀಯ ವಿಷಯವಾಗಿದೆ.
ಕೆಲವು ದಿನಗಳ ಹಿಂದಷ್ಟೇ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ್ದ ಶ್ರೀಯುತ ಎ.ಮಂಜು ಅವರು, ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಾನು ಹುಟ್ಟಿದ ಆಸ್ಪತ್ರೆಯಾಗಿದ್ದು, ಹತ್ತಾರು ಹಳ್ಳಿಗಳಿಂದ ಇಲ್ಲಿ ಸಾವಿರಾರು ರೋಗಿಗಳು ಹಾಗೂ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವವರು ಸಹ ಚಿಕಿತ್ಸೆಗೆ ಇಲ್ಲಿಗೆ ಬರುತ್ತಾರೆ. ಈ ಹಿಂದೆ ನನ್ನ ಅಧಿಕಾರದ ಅವಧಿಯಲ್ಲಿ ಆಸ್ಪತ್ರೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಲಾಗಿತ್ತು. ಕೋವಿಡ್ ನಿಂದ ರೋಗಿಗಳ ಬರುವ ಸಂಖ್ಯೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ಆರೋಗ್ಯ ಸಚಿವರಾದ ಡಾ.ಸುಧಾಕರ್ ಅವರ ಬಳಿ ಫೋನ್ ಕರೆ ಮಾಡಿ ಮಾತನಾಡಿದ ಕೆಲವೇ ದಿನಗಳಲ್ಲಿ ನೇರವಾಗಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಅಷ್ಟೇ ಅಲ್ಲದೆ ಉಸ್ತುವಾರಿ ಸಚಿವರಾದ ಶ್ರೀಯುತ ಗೋಪಾಲಯ್ಯನವರಿಗೆ ಈ ಸಂಬಂಧ ಶಿಫಾರಸ್ಸು ಪತ್ರ ಬರೆದು ಕಳಿಸುವಂತೆ ತಿಳಿಸಿದ್ದರು.
ಅದರಂತೆಯೇ ಈಗ ಜಿಲ್ಲಾ ಉಸ್ತುವಾರಿ ಸಚಿವರು ಮಾನ್ಯ ಮುಖ್ಯಮಂತ್ರಿಗಳಿಗೆ ಕೊಣನೂರು ಸಮುದಾಯ ಆರೋಗ್ಯ ಕೇಂದ್ರವನ್ನು 50 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವ ಸಲುವಾಗಿ ಪತ್ರ ಬರೆದಿರುವುದು ಮಾಜಿ ಸಚಿವರಾದ ಎ.ಮಂಜು ಅವರು ಅಧಿಕಾರದಲ್ಲಿ ಇಲ್ಲದಿದ್ದರು ಜನಸಾಮಾನ್ಯರ ಸೇವೆ ಮಾಡುವುದಕ್ಕೆ ಅವಕಾಶ ಸಿಕ್ಕಾಗೆಲ್ಲಾ ಅವರ ಸೇವೆ ಮಾಡಬೇಕು ಅದೇ ಮುಖ್ಯ ಎಂಬುದನ್ನು ಪದೇ ಪದೇ ಹೇಳುವ ಮಾತಿಗೆ ಹಿಡಿದ ಕೈಗನ್ನಡಿಯಾಗಿದೆ.
ನಮ್ಮ ಕೊಣನೂರು ಸಮುದಾಯ ಆರೋಗ್ಯ ಕೇಂದ್ರದ ಮೇಲ್ದರ್ಜೆಗೆ ಏರಿಸುವ ಸಲುವಾಗಿ ಕಾಳಜಿ ತೋರಿಸಿದ ಶ್ರೀಯುತ ಎ.ಮಂಜು ಅವರಿಗೆ ಕೊಣನೂರು ಸಮಸ್ತ ನಾಗರಿಕರ ಪರವಾಗಿ ಧನ್ಯವಾದಗಳು.
ಶ್ರೀ. ಮಹೇಶ ಎಂ.
ಸಹಾಯಕ ಪ್ರಾಧ್ಯಾಪಕರು
ಬಿ ಎಂ ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊಣನೂರು.
ಇವರು ಸರ್ಕಾರ ಕರೆದಿರುವ 3533 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಉಚಿತ ಆನ್ಲೈನ್ ತರಗತಿಗಳನ್ನು ಪ್ರತಿನಿತ್ಯ 4:30 pm ಗೆ ಸರಿಯಾಗಿ ಗೂಗಲ್ ಮೀಟ್ ನಲ್ಲಿ ತರಗತಿಗಳನ್ನು ತೆಗೆದು ಕೊಳ್ಳುತ್ತಿದ್ದು ಆಸಕ್ತರು
ಭಾಗವಹಿಸಲು ಈ 9164434132 ಕರೆಮಾಡಿ ಲಿಂಕ್ ಪಡೆಯಬಹುದು. ಇವರು “ಸ್ಪರ್ಧಾ ಯುಗ” ಎಂಬ ಯುಟ್ಯೂಬ್ ಚಾನೆಲ್ ಮೂಲಕವೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ.
ಕಾಳಜಿಯ ಕನ್ನಡಿಗ ಜ಼ಮೀರ್ ಅಹಮದ್
ಕಾಳಜಿಯ ಕನ್ನಡಿಗ ಜ಼ಮೀರ್ ಅಹಮದ್