ಮಲೆನಾಡಿನಲ್ಲಿ ಪುಂಡಾನೆ ಆಪರೇಷನ್; ಮತ್ತಿಗೋಡು ಆನೆ ಶಿಬಿರದಿಂದ ಬಂದ ಪಳಗಿದ ಆನೆಗಳು, ವಡೂರಿನಲ್ಲಿ ಶಿಬಿರ ಗುರುತು

0

ಹಾಸನ: ಮಲೆನಾಡು ಭಾಗದ ಜನರ ನಿದ್ದೆಗೆಡಿಸಿರುವ ಎರಡು ಪುಂಡಾನೆಗಳಾದ ‘ಗುಂಡ’, ‘ಮೌಂಟೇನ್’ ಸೆರೆ ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಕಾಡಾನೆಗಳ ಹಾವಳಿಯಿಂದ ಸುಮಾರು ಎರಡು ದಶಕಗಳಿಂದ ಜನರು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿಲ್ಲ. ಆನೆಗಳ ಹಾವಳಿಗೆ ಆಲೂರು, ಬೇಲೂರು, ಸಕಲೇಶಪುರ ತಾಲ್ಲೂಕುಗಳ ವ್ಯಾಪ್ತಿಯ ಹಳ್ಳಿಗಳಲ್ಲಿ ಜನಜೀವನವೇ ತತ್ತರಗೊಂಡಿದೆ.

ಐದು ಆನೆಗಳ ಸೆರೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ, ಎರಡಕ್ಕೆ ಅನುಮತಿ ದೊರೆತಿದ್ದು, ಜೂನ್ 10 ರಿಂದ ಎರಡು ಪುಂಡಾನೆ ಸೆರೆಗೆ ಸಕಲೇಶಪುರ ತಾಲ್ಲೂಕಿನ ವಡೂರಿನಲ್ಲಿ ಒಂದು ತಾತ್ಕಾಲಿಕ ಶಿಬಿರ ಗುರುತು ಮಾಡಲಾಗಿದೆ. ಈಗಾಗಲೇ ಮತ್ತಿಗೋಡು ಆನೆ ಶಿಬಿರದಿಂದ ಕೃಷ್ಣ, ಅಭಿಮನ್ಯು, ಅರ್ಜುನ ಸೇರಿ ಐದು ಪಳಗಿದ ಆನೆಗಳು ಬಂದಿವೆ.

ಮಲೈಮಹದೇಶ್ವರ ವನ್ಯಜೀವಿಧಾಮಕ್ಕೆ ಗುಂಡ ಹಾಗೂ ಕಾವೇರಿ ವನ್ಯಜೀವಿಧಾಮಕ್ಕೆ ಮೌಂಟೇನ್ ಆನೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಅದಕ್ಕೂ ಮುನ್ನ ಎರಡು ಆನೆಗಳಿಗೆ ರೇಡಿಯೊ
ಕಾಲರ್ ಅಳವಡಿಸಲಾಗುತ್ತದೆ. ಹತ್ತು ವರ್ಷಗಳ ಅವಧಿಯಲ್ಲಿ ಕಾಡಾನೆ ದಾಳಿಯಿಂದ ಒಟ್ಟು 65 ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಐದು ತಿಂಗಳ ಅವಧಿಯಲ್ಲಿ ಐದು ಮೃತಪಟ್ಟಿದ್ದಾರೆ. ಮತ್ತೊಂದೆಡೆ ಗುಂಡೇಟು, ಕಾದಾಟ, ಅನಾರೋಗ್ಯ, ಅಪಘಾತ ಹಾಗೂ ಕಾಡಾನೆಗಳು ಸಾವನ್ನಪ್ಪಿವೆ.

ಇತ್ಯಾದಿ ಕಾರಣಗಳಿಂದ 28 ಸಾಮಾನ್ಯವಾಗಿ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟಾಗ ರೊಚ್ಚಿಗೆದ್ದ ಜನರು ಪ್ರತಿಭಟನೆ ಮಾಡುವುದು, ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಹಾರ ವಿತರಿಸುವುದು ಮಾಮೂಲಿ ಆಗಿದೆ.

ಆನೆ ಹಾವಳಿಯಿಂದ ಬೇಸತ್ತ ಹೆತ್ತೂರು, ಯಸಳೂರು ಹೋಬಳಿಯ ರೈತರು ಬೆಳೆ ಬೆಳೆಯದೆ ಭೂಮಿಯನ್ನು ಪಾಳು ಬಿಟ್ಟಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ಜತೆ ಕಾಡುಹಂದಿಗಳ ದಾಳಿಯೂ ಭೀತಿ ಹುಟ್ಟಿಸಿದೆ.

ಕಾಡಾನೆ ಸಮಸ್ಯೆಗೆ ಸಾಮೂಹಿಕ ಸೆರೆ ಕಾರ್ಯಾಚರಣೆ ಮತ್ತು ಸ್ಥಳಾಂತರವೊಂದೇ ಪರಿಹಾರ ಎಂಬ ಆಗ್ರಹ ಕೇಳಿ ಬಂದಿದೆ. ಹತ್ತು ವರ್ಷಗಳಲ್ಲಿ ಸೆರೆ ಹಿಡಿದು ಸ್ಥಳಾಂತರ ಮಾಡಿರುವುದು 70 ಆನೆಗಳು, ಮಲೆನಾಡು ಭಾಗದಲ್ಲಿ ಕಾಡಾನೆಗಳ ಸಂತತಿ ಗಣನೀಯವಾಗಿ ಏರಿಕೆಯಾಗಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿದೆ.

ಕೇವಲ ಪರಿಹಾರ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಆನೆ ಕಾರಿಡಾರ್ ನಿರ್ಮಿಸಿ ಎಲ್ಲ ಆನೆಗಳನ್ನು ಸ್ಥಳಾಂತರ ಮಾಡಿ ಸಂಘರ್ಷ ಕೊನೆಗಾಣಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯ.

‘ಮಲೆನಾಡು ಭಾಗದಲ್ಲಿ ಕಾಡಾನೆಗಳಿಂದ ಮಾನವ ಹಾನಿ ಜೊತೆಗೆ ಬೆಳೆ ನಷ್ಟವಾಗುತ್ತಿದೆ. ಐದು ಆನೆಗಳ ಪೈಕಿ ಎರಡಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಿದೆ. ಕೋವಿಡ್ ಹಿನ್ನಲೆಯಲ್ಲಿ ಆನೆ ಸರ ಕಾರ್ಯಾಚರಣೆ ಆರಂಭಿಸಲು ಆಗಿರಲಿಲ್ಲ. ಲಾಕ್‌ಡೌನ್ ನಿರ್ಬಂಧದಿಂದ ಕೆಲ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಎರಡು ದಿನ ತಡವಾಗಿ ಕಾರ್ಯಾಚರಣೆ ಆರಂಭವಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜು ತಿಳಿಸಿದರು.

LEAVE A REPLY

Please enter your comment!
Please enter your name here