ನಮ್ಮ ಹಾಸನದಿಂದ ಸಾಕಷ್ಟು ಪ್ರತಿಭೆಗಳು ಕಿರುತೆರೆ , ಬೆಳ್ಳಿ ತೆರೆ ಹೀಗೆ ಕನ್ನಡ ಚಲನಚಿತ್ರರಂಗದಲ್ಲಿ , ಮಾಧ್ಯಮಗಳಲ್ಲಿ ಸಾಕಷ್ಟು ಹೆಸರು ತಮ್ಮ ಪ್ರತಿಭೆಗೆ ತಕ್ಕಂತೆ ಮಿಂಚಿದ್ದಾರೆ . ಇವರಲ್ಲಿ ಕನ್ನಡ ಕಿರುತೆರೆಯಲ್ಲಿ ಜ಼ೀ ಕನ್ನಡದ ಟಾಪ್ ಒನ್ ಸೀರಿಯಲ್ ಆಗಿರುವ ‘ಗಟ್ಟಿಮೇಳ’ ಧಾರಾವಾಹಿ ಇಂದಿಗೂ TRP ಆರೋಹಣಕ್ರಮದಲ್ಲೇ ಇದೆ . ಈ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಪಾತ್ರದ ನಟಿಯ ನಿಜವಾದ ಹೆಸರು ನಿಶಾ ರವಿಕೃಷ್ಣನ್. ರೌಡಿ ಬೇಬಿ ಎಂದೇ ಖ್ಯಾತಿ ಗಳಿಸಿರುವ ನಿಶಾ, ನಮ್ಮ ಹಾಸನದವರು ., ನಿಶಾ ರವಿಕೃಷ್ಣನ್ ಅವರು 2000 ಜೂನ್ 9 ರಂದು ಹಾಸನದ ಸಕಲೇಶಪುರದಲ್ಲಿ ಜನಿಸಿದರು. ನಿಶಾ ಅವರ ತಂದೆ ರವಿಕೃಷ್ಣನ್ ಅವರು ಮಂಡ್ಯ ರಮೇಶ್ ತಂಡದಲ್ಲಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರಂತೆ.
ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಕಿರುತೆರೆ ಪಯಣ ಆರಂಭಿಸಿದ ನಿಶಾ, ಸುಮಾರು ನಾಲ್ಕು ವರ್ಷಗಳ ಕಾಲ ಆಂಕರಿಂಗ್ ಮಾಡಿದ್ದರು. ಅದೂ ಕೂಡ ಅವರ ಕಾರ್ಯಕ್ರಮವನ್ನು ಅವರೇ ಸ್ವತಃ ಪ್ಲಾನ್ ಮಾಡುತ್ತಿದ್ದರಂತೆ ಅನ್ನೋದು ಮತ್ತೊಂದು ವಿಶೇಷ ., ಇವರಿಗೆ ನಟನೆ ಅಲ್ಲದೇ ಅಧ್ಭುತ ಹಾಡುಗಾರಿಕೆ ಹಾಗೂ ಡ್ಯಾನ್ಸ್ ಕೂಡ ಮಾಡಬಲ್ಲರು . , ಟಿ.ವಿ. ಖಾಸಗಿ ಚಾನಲ್ ಒಂದರಲ್ಲಿ ಬರೋಬ್ಬರಿ 12ನೇ ವಯಸ್ಸಿನಲ್ಲಿಯೇ ಆಂಕರ್ ಆಗಿ . ಸತತವಾಗಿ 4 ವರ್ಷಗಳ ಕಾಲ ವಿವಿಧ ಕಾರ್ಯಕ್ರಮ ಗಳಲ್ಲಿ ನಿರೂಪಕಿಯಾಗಿ.
ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಶಾ ಅವರಿಗೆ ಒಂದಲ್ಲ ಎರಡು ರಾಜ್ಯಗಳಲ್ಲೂ ತನ್ನದೇ ಆದ ಅಭಿಮಾನಿಗಳ ಸಂಪಾದಿಸಿ ಹಾಸನ ಜಿಲ್ಲೆ ರಾಜ್ಯಕ್ಕೆ ತಮ್ಮದೇ ಕಲಾ ಪ್ರತಿಭೆಯನ್ನು ತೋರಿಸುತ್ತ ಮನರಂಜಿಸುತ್ತಿದ್ದಾಳೆ .,
ಸರ್ವ ಮಂಗಳ ಮಾಂಗಲ್ಯೇ ಎಂಬ ಸೀರಿಯಲ್ ಇವರ ಮೊದಲ ಕಿರುತೆರೆ ಧಾರಾವಾಹಿ , ಇದರಲ್ಲಿ ತಂಗಿಯ ಪಾತ್ರದಲ್ಲಿ ನಟಿಸುತ್ತಿದ್ದ ನಿಶಾ ಗಟ್ಟಿಮೇಳ ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ನಟಿಸುವ ಮೂಲಕ ಚೊಚ್ವಲ ನಾಯಕಿ ಪಾತ್ರದಲ್ಲಿ ಅಭಿನಯಿಸಿದರು. ನಂತರ ಅಭಿನಯಿಸಿದ ಧಾರಾವಾಹಿಯೇ ಈ ಜ಼ೀ ವಾಹಿನಿಯ ‘ ಗಟ್ಟಿಮೇಳ ‘ .
ಈ ಧಾರಾವಾಹಿಯ ಮೂಲಕ ನಾಯಕಿ ಪಾತ್ರದಲ್ಲಿ ಮಿಂಚಿ ರೌಡಿ ಬೇಡಿ ಅಡ್ಡ ಹೆಸರು ಬಂದು ಫೇಮಸ್ ಆದರು , ಇತರೆ ಧಾರಾವಾಹಿ , ಸಿನಿಮಾ , ಅವಕಾಶ ಬರುತಿದ್ದರು ಸದ್ಯ ಕನ್ನಡ ಸೇರಿ ತೆಲುಗು ಧಾರಾವಾಹಿ ಮಾಡಿಕೊಂಡಿದ್ದಾರೆ .ಗಟ್ಟಿಮೇಳ ಧಾರಾವಾಹಿ ಅಮೂಲ್ಯಾ ಪಾತ್ರವನ್ನು ರಾಜ್ಯದ ಸಾವಿರಾರು ಮನೆಯ ಟಿವಿ ವೀಕ್ಷಕರ ಮನೆಮಗಳಂತೆ ಕಥೆಯಲ್ಲಿ ಕಾಣಸಿಗುತ್ತಾಳೆ . ಈ ಮದ್ಯೆ ಬರಿ ಸೀರಿಯಲ್ ಮದ್ಯೆ ಈ ಡ್ಯಾನ್ಸು ಹಾಡುಗಾರಿಕೆ ಎಲ್ಲಿಂದ ಬಂತು ಅಂತ ಕೇಳ್ತೀರಾ , ಅವರ ಇನ್ಸ್ತಗ್ರಮ್ ಖಾತೆಯ ರೀಲ್ಸ್ ಗಳು ಒಮ್ಮೆ ನೋಡಿ , ನಿಶಾ ರವಿಕೃಷ್ಣನ್ ಅವರ ತೆಲುಗಿನಲ್ಲೂ ಮಿಂಚುತ್ತಿರುವ ಧಾರಾವಾಹಿ ಹೆಸರು ‘ಮುತ್ಯಮಂತ ಮುದ್ದು’ , ಇನ್ನು ನಿಶಾ ಅವರಿಗೆ ರೌಡಿ ಬೇಬಿ ಹೆಸರು ಹೇಗಪ್ಪ ಬಂತು ಎಂದರೆ
ಅವರು ಧಾರಾವಾಹಿಯಲ್ಲಿ ಬಯ್ಯುವ ದಾಟಿಯೇ ಒಂದು ಹೀರೋ ವರ್ಷನ್ ನಂತೆ, ಹಲವರು ಇಷ್ಟಪಟ್ಟಿದ್ದೇ ಅಲ್ಲೇ ನೋಡಿ. ನಿಶಾ ರವಿಕೃಷ್ಣನ್ ಧಾರಾವಾಹಿಯಲ್ಲಿ ಪಕ್ಕಾ ಸಾಂಪ್ರದಾಯಿಕ ಹುಡುಗಿಯಾಗಿ ಲಂಗಾ ದಾವಣಿಯಲ್ಲಿ, ಸೀರೆಯಲ್ಲಿ ಮಿಂಚಿದರೆ ಒಂದೆಡೆ . ನಿಶಾ ಅವರ ಇನ್‌ಸ್ಟಾಗ್ರಾಂನಲ್ಲಿ ಲಕ್ಷ ಅಭಿಮಾನಿಗಳಿದ್ದು . ಧಾರವಾಹಿ ಹೊರಗೆ ಆಕ್ಟೀವ್ ಆಗಿ ನಿಶಾ ಅವರ ರೀಲ್ಸ್ ಗಳು ಸಹಾ ಸದ್ದು ಮಾಡುತ್ತದೆ . , ಕರ್ನಾಟಿಕ್ ಮತ್ತು ಭರತನಾಟ್ಯದಲ್ಲಿ ಪರಿಣಿತಿ ಪಡೆದಿರುವ ವಿಷಯ ಈ ರೀಲ್ಸ್ ನಿಂದಲೇ ಗೊತ್ತಾಯ್ತು .
ಇನ್ನು ತಮ್ಮ ಉತ್ತಮ ಅಭಿನಯಕ್ಕಾಗಿ ಜೀ ಕನ್ನಡದ ಅತ್ಯುತ್ತಮ ನಾಯಕಿ ಪ್ರಶಸ್ತಿ . 2019 ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ವುಮೆನ್ ಲಿಸ್ಟ್ ನಲ್ಲಿ ಸ್ಥಾನದ ಗೌರವ ಅವರ ಮುಡಿಯಲ್ಲಿದೆ . ಇನ್ನು ಸಿನಿಮಾ ವಿಷಯಕ್ಕೆ ಬಂದರೆ ನಿಶಾ ‘ಅದೊಂದಿತ್ತು ಕಾಲ’ , ‘ಇಷ್ಟಕಾಮ್ಯ’ ಸಿನಿಮಾದ ಹಾಡೊಂದಕ್ಕೆ ಬ್ಯಾಕ್ ಡ್ಯಾನ್ಸರ್ ಆಗಿ ಕೂಡ ನಿಶಾ ಕಾಣಿಸಿಕೊಂಡು ಬೆಳ್ಳಿತೆರೆಗು ಪರಿಚಿತರೆ
ಹೀಗೆ ಹಾಸನ ಮೂಲದ ಪ್ರತಿಭೆಗಳ ಸಂಖ್ಯೆ ಜೊತೆ , ಇನ್ನಷ್ಟು ಪ್ರತಿಭೆಗಳ ಪ್ರೋತ್ಸಾಹಿ , ಕನ್ನಡ ಚಲನಚಿತ್ರರಂಗ ಶ್ರೀಮಂತಗೊಳಿಸಿ , ಧನ್ಯವಾದಗಳು