‘ವರಾಹ ರೂಪಮ್’ ಗಾಯಕನ ಮತ್ತೊಂದು ಕನ್ನಡ ಹಾಡು: ನಟ್ವರ್ ಲಾಲ್ ಗಾಗಿ ಮತ್ತೆ ಕನ್ನಡಕ್ಕೆ ಬಂದ ಸಾಯಿ ವಿಘ್ನೇಶ್

0

‘ವರಾಹ ರೂಪಮ್’ ಗಾಯಕನ ಧ್ವನಿಯಲ್ಲಿ ಮತ್ತೊಂದು ಕನ್ನಡದ ಹಾಡು: ರೊಮ್ಯಾಂಟಿಕ್ ಹಾಡಿನಲ್ಲಿ ಮಿಂಚಿದ ತನುಷ್- ಸೊನಾಲ್

ನಟ್ವರ್ ಲಾಲ್‌ನ ರೊಮ್ಯಾಂಟಿಕ್ ಹಾಡಿಗೆ ಧ್ವನಿಯಾದ ‘ಕಾಂತಾರ’ ಗಾಯಕ

ಮಡಮಕ್ಕಿ, ನಂಜುಂಡಿ ಕಲ್ಯಾಣ, ಚಿತ್ರಗಳಲ್ಲಿ ನಾಯಕನಾಗಿ ಮಿಂಚಿದ್ದ ನಟ ತನುಷ್ ಶಿವಣ್ಣ ಅಭಿನಯದ ಹೊಸ ಸಿನಿಮಾ ತೆರಿಗೆ ಬರಲು ಸಿದ್ಧವಾಗಿದೆ. ‘ಮಿ. ನಟ್ವರ್ ಲಾಲ್’ ಸಿನಿಮಾ ಮೂಲಕ ತನುಷ್ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು ಚಿತ್ರದಲ್ಲಿ ಸೋನಲ್ ಮೆಂಟೇರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಚಿತ್ರದಿಂದ ಎರಡನೇ ಹಾಡು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

‘ಅಚ್ಚಚ್ಚೋ ಅಚ್ಚು ಮೆಚ್ಚಿವಳು..’ ಎನ್ನುವ ಸಾಲಿನಿಂದ ಆರಂಭವಾಗುವ ಈ ಹಾಡನ್ನು ‘ಕಾಂತಾರ’ ಸಿನಿಮಾದ ಸೂಪರ್ ಹಿಟ್ ‘ವರಾಹ ರೂಪಂ’ ಹಾಡನ್ನು ಹಾಡಿದಂತಹ ಸಾಯಿ ವಿಘ್ನೇಶ್ ಹಾಡಿದ್ದಾರೆ. ಕನ್ನಡದಲ್ಲಿ ಇದೇ ಮೊದಲ ಬಾರಿಗೆ ರೋಮ್ಯಾಂಟಿಕ್ ಹಾಡಿಗೆ ಸಾಯಿ ವಿಘ್ನೇಶ್ ಧ್ವನಿಯಾಗಿದ್ದಾರೆ…ಈ ರೋಮ್ಯಾಂಟಿಕ್ ಹಾಡನ್ನು ನಿರ್ದೇಶಕ ಭರ್ಜರಿ ಚೇತನ್ ಬರೆದಿದ್ದು ಧರ್ಮ ವಿಷ್ ಸಂಗೀತ ಸಂಯೋಜನೆ ಮಾಡಿದ್ದಾರೆ.

“ಮಿಸ್ಟರ್ ನಟ್ವರ್ ಲಾಲ್” ಸಿನಿಮಾವನ್ನ ಲವ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ ಸಿನಿಮಾದಿಂದ ಈಗಾಗಲೇ ಟೀಸರ್ ಮತ್ತು ಮೊದಲ ಹಾಡು ಬಿಡುಗಡೆಯಾಗಿದ್ದು ಕುತೂಹಲ ಮೂಡಿಸಿತ್ತು. ಇದೀಗ ರಿಲೀಸ್ ಆಗಿರುವ ಎರಡನೇ ಹಾಡು ಚಿತ್ರದ ಮೇಲಿನ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಸದ್ಯ ಪ್ರಚಾರ ಕಾರ್ಯವನ್ನು ಶುರು ಮಾಡಿರುವ ಸಿನಿಮಾತಂಡ ಶೀಘ್ರದಲ್ಲೇ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ನಟ್ವರ್ ಲಾಲ್ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು ತನುಷ್ ಹಾಗೂ ಸೋನಾಲ್ ಜೊತೆಯಲ್ಲಿ ನಾಗಭೂಷಣ್ ರಾಜೇಶ್ ನಟರಂಗ, ಕಾಕ್ರೋಚ್ ಸುದೀ, ಯಶ್ ಶೆಟ್ಟಿ ರಘುರಾಮನಕೊಪ್ಪ , ರಾಜೇಂದ್ರ ಕಾರಂತ್ ಹೀಗೆ ಸಾಕಷ್ಟು ಜನರು ಅಭಿನಯ ಮಾಡಿದ್ದಾರೆ.

ಇನ್ನು ಚಿತ್ರವನ್ನ ತನುಷ್ ಶಿವಣ್ಣ ಅವರೇ ನಿರ್ಮಾಣ ಮಾಡಿದ್ದಾರೆ. ಸದ್ಯ ರೋಮ್ಯಾಂಟಿಕ್ ಹಾಡಿನಿಂದ ಸದ್ದು ಮಾಡುತ್ತಿರುವ ಮಿಸ್ಟರ್ ನಟ್ವರ್ ಲಾಲ್ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.

LEAVE A REPLY

Please enter your comment!
Please enter your name here