ಹ್ಯಾಟ್ರಿಕ್ ಗೆಲುವಿನಲ್ಲಿ ಡಾಲಿ ಧನಂಜಯ್: ‘ಟಗರು ಪಲ್ಯ’ನೂ ಸೂಪರ್ ಹಿಟ್

0

ಸಕ್ಸಸ್ ನಿರ್ಮಾಣ ಸಂಸ್ಥೆ ಆಯ್ತು ಡಾಲಿ ಪಿಚ್ಚರ್ಸ್

ನಿರ್ಮಾಣದಲ್ಲೂ ದಾಖಲೆ ಬರೆದ ಡಾಲಿ ಧನಂಜಯ್

ಡಾಲಿ ಧನಂಜಯ, ನಟನೆ ಜೊತೆಗೆ ನಿರ್ಮಾಣದಲ್ಲೂ ಬ್ಯುಸಿಯಾಗಿರೊ ಸ್ಟಾರ್ . ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಧನಂಜಯ ತನ್ನದೆ ನಿರ್ಮಾಣ ಸಂಸ್ಥೆ ಡಾಲಿ ಪಿಚ್ಚರ್ ಕಡೆಯೂ ಅಷ್ಟೆ ತಲೆಕೆಡಿಸಿಕೊಂಡಿದ್ದಾರೆ. ಈಗಾಗಲೇ ಎರಡು ಸಿನಿಮಾಗಳನ್ನು ನಿರ್ಮಾಣ ಮಾಡಿ ಸಕ್ಸಸ್ ಕಂಡಿದ್ದ ಡಾಲಿ ಇದೀಗ ಮತ್ತೊಂದು ಸೂಪರ್ ಸಕ್ಸಸ್ ಕಾಣುವ ಮೂಲಕ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದಾರೆ. ಈ ಮೂಲಕ ಧನಂಜಯ್ ನಿರ್ಮಾಣದಲ್ಲೂ ದಾಖಲೆ ಬರೆದಿದ್ದಾರೆ.

‘ಬಡವ ರಾಸ್ಕಲ್’ ಸಿನಿಮಾಗೆ ಬಂಡವಾಳ ಹೂಡುವ ಮೂಲಕ ನಿರ್ಮಾಣಕ್ಕೆ ಇಳಿದ ಡಾಲಿ ಇದೀಗ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡಿ ಯಶಸ್ವಿಯಾಗಿದ್ದಾರೆ. ‘ಡಾಲಿ ಪಿಚ್ಚರ್’ ಎನ್ನುವ ನಿರ್ಮಾಣ ಸಂಸ್ಥೆ ಪ್ರಾರಂಭ ಮಾಡಿರುವುದೇ ಉತ್ತಮ ಸಿನಿಮಾಗಳನ್ನು ನೀಡಬೇಕು, ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕು ಎನ್ನುವ ಉದ್ದೇಶಕ್ಕೆ. ‘ಬಡವರ ಮಕ್ಕಳು ಬೆಳಿಬೇಕು ಎಂದು ಹೇಳುವ ಡಾಲಿ ಯುವ ಪ್ರತಿಭಾವಂತರಿಗೆ ಅವಕಾಶ ನೀಡುವ ಮೂಲಕ ಉತ್ತಮ ಸಿನಿಮಾಗಳನ್ನು ತನ್ನ ಬ್ಯಾನರ್ ನಲ್ಲಿ ಕಟ್ಟಿಕೊಡುತ್ತಿದ್ದಾರೆ.

ಬಡವ ರಾಸ್ಕಲ್ ಸಿನಿಮಾದಲ್ಲಿ ನಟನೆ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದ ಡಾಲಿ ಅಷ್ಟೇ ಅಚ್ಚುಕಟ್ಟಾಗಿ ನಿಭಾಯಿಸುವ ಜೊತೆಗೆ ಮೊದಲ ಪ್ರಯತ್ನದಲ್ಲೇ ದೊಡ್ಡ ಮಟ್ಟದ ಗೆಲುವು ದಾಖಲಿಸಿದರು. ಅದೇ ಹುಮ್ಮಸ್ಸಿನಲ್ಲಿ ಡಾಲಿ ಮತ್ತೊಂದು ಸಿನಿಮಾಗೆ ಬಂಡವಾಳ ಹೂಡಿ ಗೆಲುವು ಕಂಡರು. ಡಾಲಿ ನಿರ್ಮಾಣದಲ್ಲಿ ಮೂಡಿಬಂದ ಎರಡನೇ ಸಿನಿಮಾ ‘ಹೆಡ್ ಬುಷ್’.

ಬೆಂಗಳೂರಿನ ಭೂಗತ ಪಾತಾಕಿ ಡಾನ್ ಜಯರಾಜ್ ಜೀವನ ಆಧಾರಿತ ಕಥೆಗೆ ಜೀವ ತುಂಬುವ ಜೊತೆಗೆ ಹಣವನ್ನು ಹೂಡಿದರು ಧನಂಜಯ. ಜಯರಾಜ್ ಆಗಿ ಸ್ವತಃ ಧನಂಜಯ್ ಅವರೇ ಕಾಣಿಸಿಕೊಂಡರು. ಹೆಡ್ ಬುಷ್ ಚಿತ್ರಕ್ಕೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಮೂಲಕ ಡಾಲಿ ಪಿಚ್ಚರ್ ನ ಸಕ್ಸಸ್ ಲಿಸ್ಟ್ ಗೆ ಸೇರಿತು. ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದ ಖುಷಿಯಲ್ಲಿ ಧನಂಜಯ್ ‘ಟಗರು ಪಲ್ಯ’ ಸಿನಿಮಾ ಕೈಗೆತ್ತಿಕೊಂಡರು.

‘ಟಗರು ಪಲ್ಯ’ ಸಿನಿಮಾದಲ್ಲಿ ಧನಂಜಯ್ ಕಾಣಿಸಿಕೊಂಡಿಲ್ಲ. ಬದಲಿಗೆ ನಟ ನಾಗಭೂಷಣ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ನಟಿಸಿದ್ದಾರೆ. ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ ಟಗರು ಪಲ್ಯ ಕೂಡ ಸೂಪರ್ ಸಕ್ಸಸ್ ಆಗಿದೆ. ಅಕ್ಟೋಬರ್ 27ಕ್ಕೆ ರಿಲೀಸ್ ಆಗಿರುವ ಟಗರು ಪಲ್ಯ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮೂಲಕ ಹ್ಯಾಟ್ರಿಕ್ ಗೆಲುವಿನ ಖುಷಿಯಲ್ಲಿದ್ದಾರೆ ಡಾಲಿ. ಸಿನಿಮಾ ನೋಡಿದ ಪ್ರತಿಯೊಬ್ಬರು ಮೆಚ್ಚಿಕೊಂಡಿದ್ದಾರೆ. ಫ್ಯಾಮಿಲಿ ಸಮೇತರಾಗಿ ಥಿಯೇಟರ್ ಗೆ ಬಂದು ಸಿನಿಮಾ ನೋಡಿ ಎಂಜಾಯ್ ಮಾಡ್ತಿದ್ದಾರೆ .ಬಿಡುಗಡೆ ಆದ ಎರಡೇ ದಿನಕ್ಕೆ ಪ್ರೇಕ್ಷಕರ ಬೇಡಿಕೆ ಮೇರೆಗೆ ಥಿಯೇಟರ್ ಗಳ ಸಂಖ್ಯೆ ದುಪ್ಪಟ್ಟಾಗಿದೆ . ಈ ಮೂಲಕ ನಟ ರಾಕ್ಷಸ ಧನಂಜಯ ನಿರ್ಮಾಣದಲ್ಲೂ ಕಿಂಗ್ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ಡಾಲಿ ಪಿಚ್ಚರ್ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ, ಇನ್ನಷ್ಟು ಉತ್ತಮ ಸಿನಿಮಾಗಳು ಬರಲಿ ಎನ್ನುವುದೇ ಅಭಿಮಾನಿಗಳ ಆಶಯವಾಗಿದೆ ಅದೇ ರೀತಿ ಡಾಲಿ ಕೂಡ ಉತ್ತಮ ಸದಭಿರುಚಿ ಸಿನಿಮಾಗಳನ್ನ ಪ್ರೇಕ್ಷಕರಿಗೆ ನೀಡುವ ಪಣ ತೊಟ್ಟಿದ್ದಾರೆ

LEAVE A REPLY

Please enter your comment!
Please enter your name here