ಭೂಮಿಗೆ ಪರಿಹಾರ ನೀಡದ ಹಿನ್ನೆಲೆ ಕೋರ್ಟ್ ಆದೇಶದಂತೆ ಜಿಲ್ಲಾಡಳಿತಕ್ಕೆ ಸೇರಿದ ವಾಹನ ಜಪ್ತಿ

0

ಹಾಸನ : • ಯಗಚಿ ನಾಲೆಗೆ ಸ್ವಾಧೀನ ಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಹಿನ್ನೆಲೆ ಕೋರ್ಟ್ ಆದೇಶದಂತೆ ಶುಕ್ರವಾರ ಜಿಲ್ಲಾಡಳಿತಕ್ಕೆ ಸೇರಿದ ವಾಹನವನ್ನು ಜಪ್ತಿ ,
• ತಾಲ್ಲೂಕಿನ ಕಟ್ಟಾಯ ಹೋಬಳಿ ಡೋರನ ಹೊಸಳ್ಳಿ ಗ್ರಾಮದ ಕೆ.ಎಸ್. ಯೋಗೇಶ್ ಎಂಬುವರಿಗೆ ಸೇರಿದ ಸುಮಾರು 13 ಗುಂಟೆ ಜಮೀನನ್ನು 2006 ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.
• ಅಂತೆಯೇ

ಸೂಕ್ತ ಪರಿಹಾರ ನೀಡಿರಲಿಲ್ಲ!!. ಇದರ ವಿರುದ್ಧ ಭೂ ಮಾಲೀಕರು ಕಾನೂನು ಹೋರಾಟ ಆರಂಭಿಸಿದ್ದರು. 2010 ರಲ್ಲಿ ನೋಟಿಫಿಕೇಶನ್ ಆಗಿದ್ದು, ಇನ್ನೂ ಹೆಚ್ಚಿನ ಪರಿಹಾರ ಕೊಡಿಸಬೇಕು ಎಂದು ಯೋಗೇಶ್ ಅವರು ಹಾಸನದ ಕೋರ್ಟ್ ಮೊರೆ ಹೋಗಿದ್ದರು.
• 1 ಗುಂಟೆಗೆ 1 ಲಕ್ಷ ರೂ ಪರಿಹಾರ ಕೊಡಬೇಕು ಎಂದು 2016 ರಲ್ಲೇ ಆದೇಶ ಆಗಿತ್ತು. ಆದರೆ
• ಈವರೆಗೂ ಸಂಬಂಧಪಟ್ಟವರು ಪರಿಹಾರ ನೀಡಿರಲಿಲ್ಲ., ವಸೂಲಿಗೆ ಹಾಕಿದರೂ,

ವಿಶೇಷ ಭೂ ಸ್ವಾಧೀನ ಅಧಿಕಾರಿ ಹಣ ಕಟ್ಟಲಿಲ್ಲ.
• ಈ ವಿಷಯದ ಬಗ್ಗೆ ಕೋರ್ಟ್‍ಗೆ ಮನವರಿಕೆ ಮಾಡಿದಾಗ, ಕಚೇರಿ ಜಪ್ತಿಗೆ ಕೋರ್ಟ್‌ ಆದೇಶ ಮಾಡಲಾಗಿತ್ತು.
• ಅ.27 ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಿಲ್ಲಾಡಳಿತಕ್ಕೆ ಸೇರಿದ ಜೀಪನ್ನು ವಕೀಲರ ಸಮ್ಮುಖದಲ್ಲಿ ಕೋರ್ಟ್‌ ಸಿಬ್ಬಂದಿ ಜಪ್ತಿ ಮಾಡಿದರು.
• ನ್ಯಾಯಾಲಯ 1 ಗುಂಟೆಗೆ 1 ಲಕ್ಷ ರೂ ಪರಿಹಾರ ಕೊಡಬೇಕು ಎಂದು ಈ ಹಿಂದೆ ಹೇಳಿತ್ತು.
• ಆದರೆ

ಈಗ ಒಟ್ಟ ಬಡ್ಡಿ ಸೇರಿ ಜಿಲ್ಲಾಡಳಿತ ಸುಮಾರು 40 ಲಕ್ಷ ರೂ ಅನ್ನು ಭೂ ಮಾಲೀಕರಿಗೆ ಪಾವತಿ ಮಾಡಬೇಕಾಗಿದೆ.
• ಸದ್ಯ ವಾಹನ ಜಪ್ತಿ ಮಾಡಿದ್ದು, ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ ಎಂದು K.S.ಯೋಗೇಶ್ ಪರ ವಕೀಲ ಮಂಜುನಾಥ್ ಹೇಳಿದ್ದಾರೆ .

LEAVE A REPLY

Please enter your comment!
Please enter your name here